Headlines

ತಗೋ… ಕೊಡಲ್ಲ… ಹೊಸ ಸೆಲೆಬ್ರೇಷನ್​ಗೆ ನಾಂದಿ ಹಾಡಿದ ಹರ್ಮನ್​ಪ್ರೀತ್ ಕೌರ್

ತಗೋ… ಕೊಡಲ್ಲ… ಹೊಸ ಸೆಲೆಬ್ರೇಷನ್​ಗೆ ನಾಂದಿ ಹಾಡಿದ ಹರ್ಮನ್​ಪ್ರೀತ್ ಕೌರ್


ಭಾರತ ಮಹಿಳಾ ತಂಡದ ಕನಸು ಕೊನೆಗೂ ನನಸಾಗಿದೆ. ನವಿ ಮುಂಬೈನಲ್ಲಿ ನಡೆದ 13ನೇ ಆವೃತ್ತಿಯ ಮಹಿಳಾ ಏಕದಿನದಿಂದ ಫೈನಲ್‌ನಲ್ಲಿ ಬಲಿಷ್ಠ ಸೌತ್ ಆಫ್ರಿಕಾ ತಂಡವನ್ನು ಮಣಿಸಿ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಈ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಪಂದ್ಯಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಪಂದ್ಯಗಳಲ್ಲಿ 246 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 52 ರನ್ಗಳ ಜಯಭೇರಿ ಬಾರಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಈ ಚಾಂಪಿಯನ್‌ಪಟ್ಟದೊಂದಿಗೆ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೊಸ ಸೆಲೆಬ್ರೇಷನ್‌ಗೆ ನಾಂದಿಯಾಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪಟ್ಟ ಅಲಂಕರಿಸುವ ತಂಡ ರೊಬೊಟ್ ವಾಕ್‌ನೊಂದಿಗೆ ಬಂದು ಟ್ರೋಫಿ ಸ್ವೀಕರಿಸಿದರು. ಆದರೆ ಹರ್ಮನ್ ಪ್ರೀತ್ ಕೌರ್ ಈ ನಡೆಯನ್ನು ಅನುಕರಿಸಿಲ್ಲ. ಬದಲಾಗಿ ಸಹ ಆಟಗಾರ್ತಿಯರಿಗೆ ಟ್ರೋಫಿ ತಗೋ… ಕೊಡಲ್ಲ ಎಂಬಂತೆ ಸಂಭ್ರಮಿಸಿ ಕಪ್ ಎತ್ತಿ ಹಿಡಿದಿದ್ದಾರೆ. ಇದುವೇ ಮುಂದೆ ಹೊಸ ಟ್ರೆಂಡ್ ಸೃಷ್ಟಿಸುವ ಸಾಧ್ಯತೆಯಿದೆ.

ಇದೀಗ ಹರ್ಮನ್ ಪ್ರೀತ್ ಕೌರ್ ಅವರ ತಗೋ… ಕೊಡಲ್ಲ… ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.



Source link

Leave a Reply

Your email address will not be published. Required fields are marked *