ಜನವರಿ 22: ಭಾರತ ಮತ್ತು ಐರೋಪ್ಯ ಒಕ್ಕೂಟದ (ಯುರೋಪಿಯನ್ ಯೂನಿಯನ್) ಮಧ್ಯದಲ್ಲಿ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡುತ್ತಿದೆ. ಸದ್ಯದಲ್ಲೇ ಟ್ರೇಡ್ ಡೀಲ್ ಗೆ ಸಹಿ ಹಾಕಬಹುದು. 27 ದೇಶಗಳ ಒಕ್ಕೂಟವಾಗಿರುವ ಯೂರೋಪಿಯನ್ ಯೂನಿಯನ್ ಮತ್ತು ಭಾರತದ ನಡುವಿನ ಈ ಒಪ್ಪಂದವನ್ನು ಅತಿದೊಡ್ಡ ಡೀಲ್ ಎಂದು ಬಣ್ಣಿಸಲಾಗುತ್ತಿದೆ. ಅಮೆರಿಕದ ಇತ್ತೀಚಿನ ನಡವಳಿಕೆಯು ಯೂರೋಪ್ ಮತ್ತು ಭಾರತವನ್ನು ಮತ್ತಷ್ಟು ನಿಕಟಗೊಳಿಸಿದೆ. ಒಪ್ಪಂದ ಬೇಗ ಸಾಕಾರಗೊಳ್ಳುವಂತೆ ಮಾಡಿದೆ.
‘ನಾವು ಐತಿಹಾಸಿಕ ವ್ಯಾಪಾರ ಒಪ್ಪಂದದ ಅಂಚಿನಲ್ಲಿ ಇದ್ದೇವೆ. ಇದನ್ನು ಮದರ್ ಆಫ್ ಆಲ್ ಡೀಲ್ಸ್ ಎಂದು ಕರೆಯುತ್ತಿದ್ದಾರೆ. ಈ ಒಪ್ಪಂದದಿಂದ 200 ಕೋಟಿ ಜನರ ಮಾರುಕಟ್ಟೆ ಸೃಷ್ಟಿಯಾಗಿದೆ’ ಎಂದು ಯೂರೋಪಿಯನ್ ಯೂನಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೇಯೆನ್ (ಉರ್ಸುಲಾ ವಾನ್ ಡೆರ್ ಲೇಯೆನ್) ಅವರು ಹೇಳಿದ್ದಾರೆ.
ಇದನ್ನೂ ಓದಿ: ಎಟರ್ನಲ್ ಸಿಐಒ ಸ್ಥಾನಕ್ಕೆ ದೀಪಿಂದರ್ ಗೋಯಲ್ ರಾಜೀನಾಮೆ ಕೊಟ್ಟಿದ್ದು ಯಾಕೆ? ಮುಂದೇನು ಅವರ ದಾರಿ?
ಉರ್ಸುಲಾ ಅವರು ಜನವರಿ 25-27ಕ್ಕೆ ಭಾರತಕ್ಕೆ ಬರಲಿದ್ದಾರೆ. ಈ ವೇಳೆ, ಒಪ್ಪಂದಕ್ಕೆ ಅಂತಿಮ ಸ್ಪರ್ಶ ಸಿಗುವ ನಿರೀಕ್ಷೆ ಇದೆ.
‘ಡಾವೋಸ್ ಸಮಿತ್ ಬಳಿಕ ಮುಂದಿನ ವಾರಾಂತ್ಯದಲ್ಲಿ ನಾನು ಭಾರತಕ್ಕೆ ಭೇಟಿ ನೀಡುತ್ತೇನೆ. ಇನ್ನೂ ಸ್ವಲ್ಪ ಕೆಲಸ ಬಾಕಿ ಇದೆ. ಆದರೆ, ಐತಿಹಾಸಿಕ ವ್ಯಾಪಾರ ಒಪ್ಪಂದದ ಅಂಚಿನಲ್ಲಿ ಇದ್ದೇವೆ. ಈ ಡೀಲ್ ನಿಂದ 200 ಕೋಟಿ ಜನರ ಮಾರುಕಟ್ಟೆ ಸೃಷ್ಟಿಯಾಗಿದೆ. ಜಾಗತಿಕ ಆರ್ಥಿಕತೆಯ ಕಾಲುಭಾಗಕ್ಕಿಂತ ಹೆಚ್ಚು. ಬಹಳ ಮುಖ್ಯ ಸಂಗತಿಯಾಗಿದೆ, ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಪ್ರದೇಶದೊಂದಿಗೆ ಮೊದಲ ಹೆಜ್ಜೆ ಇಡುವ ಅನುಕೂಲ ಯೂರೋಪ್‌ಗೆ ಸಿಗುತ್ತದೆ’ ಎಂದು ಡಾವೊಸ್ ಸಮಿಟ್‌ನಲ್ಲಿ ಉರ್ಸುಲಾ ಹೇಳಿದ್ದಾರೆ.
ಐಯು ಎಕ್ಸ್ ಪೋಸ್ಟ್
ನಿಂದ ತಾಜಾ #WEFDavos:
“ನಾವು ಐತಿಹಾಸಿಕ ವ್ಯಾಪಾರ ಒಪ್ಪಂದದ ತುದಿಯಲ್ಲಿದ್ದೇವೆ. ಕೆಲವರು ಇದನ್ನು ಎಲ್ಲಾ ವ್ಯವಹಾರಗಳ ತಾಯಿ ಎಂದು ಕರೆಯುತ್ತಾರೆ. ಇದು 2 ಬಿಲಿಯನ್ ಜನರ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ..” ಅಧ್ಯಕ್ಷ @ವೊಂಡರ್ಲೀನ್
ಅಧ್ಯಕ್ಷರು @antoniocostapm & @ವೊಂಡರ್ಲೀನ್ ಜನವರಿ 25-27 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. 🇪🇺🤝🇮🇳#EUIndia pic.twitter.com/JeET60BwwS
— ಭಾರತದಲ್ಲಿ EU (@EU_in_India) ಜನವರಿ 20, 2026
‘ಲ್ಯಾಟಿನ್ ಅಮೆರಿಕದಿಂದ ಹಿಡಿದು ಹಿಂದೂ ಮಹಾಸಾಗರದವರೆಗೆ ಈ ಶತಮಾನದ ಆರ್ಥಿಕ ಶಕ್ತಿಕೇಂದ್ರಗಳು ಮತ್ತು ಅಭಿವೃದ್ಧಿ ಕೇಂದ್ರಗಳೊಂದಿಗೆ ಯೂರೋಪ್ ಬ್ಯೂಸಿನೆಸ್ ಮಾಡಬಯಸುತ್ತದೆ. ಯೂರೋಪ್ ಯಾವತ್ತೂ ವಿಶ್ವವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಈ ವಿಶ್ವವು ಯೂರೋಪ್ ಅನ್ನು ಆಯ್ಕೆ ಮಾಡಲು ಅಣಿಯಾಗಿದೆ’ ಎಂದು ಯೂರೋಪಿಯನ್ ಯೂನಿಯನ್ ಕಮಿಷನ್ ಅಧ್ಯಕ್ಷರು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ: ಜಾಗತಿಕ ಶಕ್ತಿಯ ಲೆಕ್ಕಾಚಾರವನ್ನೇ ಬದಲಿಸಿದ ಭಾರತ
ಯೂರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಲೂಯಿಸ್ ಸ್ಯಾಂಟೋಸ್ ಡಾ ಕೋಸ್ಟಾ ಹಾಗೂ ಉರ್ಸುಲಾ ವಾನ್ ಡರ್ ಲೆಯೆನ್ ಅವರು ಭಾರತದ ಗಣರಾಜ್ಯೋತ್ಸವ ಪೆರೆಡ್‌ನಲ್ಲಿ ಮುಖ್ಯ ಅತಿಥಿಗಳಾಗಿದ್ದಾರೆ. ಜನವರಿ 27 ರಂದು ನಡೆಯಲಿರುವ 16ನೇ ಭಾರತ ಯೂರೋಪಿಯನ್ ಶೃಂಗಸಭೆಯಲ್ಲೂ ಭಾಗವಹಿಸಲಿದ್ದಾರೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ