ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ; 2ನೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.2 ಬೆಳವಣಿಗೆ

ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ; 2ನೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.2 ಬೆಳವಣಿಗೆ


ಜನವರಿ, ನವೆಂಬರ್ 28: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್‌ನಲ್ಲಿ ಜಿಡಿಪಿ ನಿರೀಕ್ಷೆಮೀರಿ ಭರ್ಜರಿಯಾಗಿ ಬೆಳೆದಿದೆ. ಜುಲೈನಿಂದ ಸೆಪ್ಟೆಂಬರ್ ಅವಧಿಯ ಆರ್ಥಿಕ ಶೇ. 8.2ರಷ್ಟು ಹೆಚ್ಚಿದೆ ಎಂದು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಿಂದ ತಿಳಿದುಬರುತ್ತದೆ. ಈ ತ್ರೈಮಾಸಿಕದಲ್ಲಿ ಆರ್ಥಿಕತೆ ಈ ಪರಿ ಬೆಳೆಯುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಹೆಚ್ಚಿನ ಆರ್ಥಿಕ ತಜ್ಞರು ಮಾಡಿದ ಅಂದಾಜು ಶೇ. 7 ರಿಂದ ಶೇ. 7.5ರ ಶ್ರೇಣಿಯಲ್ಲಿತ್ತು. ಮೊದಲ ಕ್ವಾರ್ಟರ್‌ನಲ್ಲಿ ಬೆಳೆದ ಶೇ. 7.8ರ ದರವನ್ನೂ ಮೀರಿಸಿದ ಎರಡನೇ ಕ್ವಾರ್ಟರ್‌ನ ಬೆಳವಣಿಗೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, 2024-25ರ ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ರಿಯಲ್ ಜಿಡಿಪಿ 44.94 ಲಕ್ಷ ಕೋಟಿ ರೂ. ಈ ವರ್ಷದ ಎರಡನೇ ಕ್ವಾರ್ಟರ್‌ನಲ್ಲಿ ಇದು 48.63 ಲಕ್ಷ ಕೋಟಿ ರೂಗೆ ಏರಿದೆ. ಹಿಂದಿನ ಕ್ವಾರ್ಟರ್‌ಗೆ ವರ್ಷದ ಆರ್ಥಿಕತೆ ಶೇ. 8.2ರಷ್ಟು ಪ್ರಮಾಣ.

ನಿವ್ವಳ ಉತ್ಪನ್ನ ತೆರಿಗೆಗಳನ್ನು ಜಿಡಿಪಿಯಿಂದ ಕಳೆದರೆ ಉಳಿಯುವ ರಿಯಲ್ ಜಿವಿಎ 2025-26ರ 2ನೇ ಕ್ವಾರ್ಟರ್‌ನಲ್ಲಿ 44.77 ಲಕ್ಷ ಕೋಟಿ ರೂ ಇದೆ. ಹಿಂದಿನ ಇದೇ ಕ್ವಾರ್ಟರ್‌ಗೆ ದಾಖಲೆಯ ರಿಯಲ್ ಜಿವಿಎನಲ್ಲಿ ಶೇ. 8.1ರಷ್ಟು ಹೆಚ್ಚು.

ದತ್ತಾಂಶದ ಪ್ರಕಾರ, ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಶೇ. 9.1ರಷ್ಟು ಬೆಳೆದಿದೆ. ಕೃಷಿ ವಲಯ ಶೇ. 3.5ರಷ್ಟು ಹೆಚ್ಚಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಿ…



Source link

Leave a Reply

Your email address will not be published. Required fields are marked *