ಜುಲೈ, ಡಿಸೆಂಬರ್ 15: ಭಾರತದಲ್ಲಿ ಸ್ಟಾರ್ಟಪ್‌ಗಳು ಹುಲುಸಾಗಿ ಬೆಳೆಯುವ ರೀತಿಯ ಇಕೋಸಿಸ್ಟಂ ನಿರ್ಮಾಣವಾಗಿದೆ. ವರ್ಷ ವರ್ಷವೂ ಸಾವಿರಾರು ಹೊಸ ಸ್ಟಾರ್ಟಪ್‌ಗಳು ಪ್ರಾರಂಭವಾಗುತ್ತಿವೆ. ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ (ಪಿಯೂಷ್ ಗೋಯಲ್) ತಮ್ಮ ಎಕ್ಸ್‌ನಲ್ಲಿ ಹಾಕಿರುವ ಪೋಸ್ಟ್ ಪ್ರಕಾರ, ಭಾರತದಲ್ಲಿ ಮಾನ್ಯವಾಗಿರುವ ಸ್ಟಾರ್‌ಟಾಪ್‌ಗಳ ಸಂಖ್ಯೆ ಎರಡು ಲಕ್ಷ ಗಡಿ ದಾಟಿದೆ. ಸರ್ಕಾರದಿಂದ ಮಾನ್ಯತೆ ಪಡೆದಿರುವ ಸ್ಟಾರ್ಟಪ್ಗಳ ಪ್ರಮಾಣವೇ ಇಷ್ಟವಾಗುತ್ತಿರುವುದು ಗಮನಾರ್ಹ.
2025ರಲ್ಲಿ 44,000ಕ್ಕೂ ಅಧಿಕ ಸ್ಟಾರ್ಟಪ್‌ಗಳು ನೋಂದಾವಣಿ ಆಗಿವೆ. ಸ್ಟಾರ್ಟಪ್ ಇಂಡಿಯಾ ಆರಂಭಗೊಂಡಾಗಿನಿಂದ ಯಾವುದೇ ಯೋಜನೆ ಕಂಡ ಗರಿಷ್ಠ ಸ್ಟಾರ್ಟಪ್ ಸಂಖ್ಯೆ ಇದಾಗಿದೆ. ಸ್ಟಾರ್ಟಪ್ ಇಕೋಸಿಸ್ಟಂನಲ್ಲಿ ಮಹತ್ತರವಾಗಿರುವ ಕೆಲವು ಅಂಶಗಳು ಪೀಯೂಶ್ ಗೋಯಲ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ. ಅವುಗಳ ಪಟ್ಟಿ ಇಲ್ಲಿದೆ:
ಇದನ್ನೂ ಓದಿ: ಎಫ್‌ಡಿ, ಸಾಲ, ಷೇರು, ಚಿನ್ನ, ವಿಮೆ, ಸೇವಿಂಗ್ಸ್ ಕುರಿತು ಈ ತಪ್ಪು ಅಭಿಪ್ರಾಯ ನಿಮಗಿದೆಯಾ? ಈಗಲೇ ಸರಿಪಡಿಸಿಕೊಳ್ಳಿ
- ಸ್ಟಾರ್ಟಪ್ಸ್ ಸ್ಕೀಮ್ನ ಫಂಡ್ ಆಫ್ ಫಂಡ್ಸ್ ಅಡಿಯಲ್ಲಿ 1,350ಕ್ಕೂ ಅಧಿಕ ಸ್ಟಾರ್ಟಪ್ಗಳಲ್ಲಿ ಆಲ್ಟರ್ನೇಟಿವ್ ಇನ್ವೆಸ್ಟ್ ಫಂಡ್ಗಳು 25,320 ಕೋಟಿ ರೂ.
- ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಅಡಿಯಲ್ಲಿ ಸ್ಟಾರ್ಟಪ್‌ಗಳಿಗೆ 775 ಕೋಟಿ ರೂ.
- ಸ್ಟಾರ್ಟ್ಯಾಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್ ಅಡಿಯಲ್ಲಿ ಇನ್ಕುಬೇಟರ್ಗಳು 3,200 ಕ್ಕೂ ಅಧಿಕ ಸ್ಟಾರ್ಟ್ಯಾಪ್ಗಳಿಗೆ 585 ಕೋಟಿ ರೂ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.
- ಸ್ಟಾರ್ಟಪ್‌ಗಳಿಂದ ಸಲ್ಲಿಕೆಯಾಗಿರುವ ಹೊಸ ಪೇಟೆಂಟ್ ಅರ್ಜಿಗಳು 16,400ಕ್ಕೂ ಅಧಿಕ.
ಇದನ್ನೂ ಓದಿ: ವಿಐಗೆ ಸರ್ಕಾರದಿಂದ ನೆರವಿನ ಹಸ್ತ?; ಎಜಿಆರ್ ಬಾಕಿ ಪಾವತಿಯಲ್ಲಿ ಹಲವು ರಿಯಾಯಿತಿ?
2025 ರ ಅಂತ್ಯಕ್ಕೆ ನಂಬಲಾಗದ ಮೈಲಿಗಲ್ಲು!
ಭಾರತವು ಈಗ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ-ಮಾನ್ಯತೆ ಪಡೆದ ಸ್ಟಾರ್ಟ್ಅಪ್ಗಳಿಗೆ ನೆಲೆಯಾಗಿದೆ, ಈ ವರ್ಷವೊಂದರಲ್ಲೇ 44,000 ಕ್ಕೂ ಹೆಚ್ಚು ಘಟಕಗಳನ್ನು ಗುರುತಿಸಲಾಗಿದೆ, ಇದು ಪ್ರಾರಂಭವಾದ ನಂತರ ಒಂದು ವರ್ಷದಲ್ಲಿ ಅತಿ ಹೆಚ್ಚು @StartupIndia ಉಪಕ್ರಮ.
ಈ ಯಶಸ್ಸನ್ನು ಮಧುರವಾಗಿಸುವುದು ಏನೆಂದರೆ… pic.twitter.com/5p6aHh16Uk
— ಪಿಯೂಷ್ ಗೋಯಲ್ (@PiyushGoyal) ಡಿಸೆಂಬರ್ 12, 2025
‘ಹೊಸ ವರ್ಷ ಪ್ರವೇಶಿಸಲು ಸಜ್ಜಾಗುತ್ತಿರುವಂತೆಯೇ, ನಾವೀನ್ಯತೆ ಮತ್ತು ಉದ್ದಿಮೆಗಾರಿಕೆಯ ಶಕ್ತಿಯು ಎಲ್ಲರಿಗೂ ಅವಕಾಶ, ಸಮೃದ್ಧಿ ಮತ್ತು ಬೆಳವಣಿಗೆಯನ್ನು ತರುತ್ತದೆ’ ಎಂದು ಪಿಯೂಶ್ ಗೋಯಲ್ ಹೇಳಿದ್ದಾರೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ