ಜುಲೈ, ಅಕ್ಟೋಬರ್ 28: ಈ ತಿಂಗಳ ಭಾರತ ಅಮೆರಿಕದಿಂದ ತೈಲ ಆಮದು (ಕಚ್ಚಾ ತೈಲ) ಹೆಚ್ಚಿಸಿದೆ. ಕೆಪ್ಲರ್ ದತ್ತಾಂಶದ (KPler ಡೇಟಾ) ಪ್ರಕಾರ ಅಕ್ಟೋಬರ್ ತಿಂಗಳ ಅಮೆರಿಕದಿಂದ ಭಾರತ ದಿನಕ್ಕೆ 5,40,000 ಬ್ಯಾರಲ್ ಕಚ್ಛಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅಮೆರಿಕದ ತೈಲವನ್ನು ಭಾರತ ಖರೀದಿಸುತ್ತಿದೆ 2022 ರ ನಂತರ ಇದೇ ಮೊದಲು. ಈ ನಡೆಯಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ತಾಪ ತಣ್ಣಗಾಗುವ ನಿರೀಕ್ಷೆಯಿದೆ.
ಅಮೆರಿಕದಿಂದ ತೈಲ ಆಮದು ಹೆಚ್ಚಿಸುವ ಒಂದು ಕ್ರಮದಿಂದ ಭಾರತ ಎರಡು ಗುರಿ ಸಾಧಿಸಲು ಸಾಧ್ಯವಾಗುತ್ತಿದೆ. ಮೊದಲನೆಯದು, ಭಾರತದ ಒಟ್ಟಾರೆ ತೈಲ ಆಮದಿನಲ್ಲಿ ಪಾಲು ಅತಿಹೆಚ್ಚು ಇತ್ತು. ಇದನ್ನು ಕಡಿಮೆಗೊಳಿಸಿ, ಆಮದು ಮೂಲಗಳನ್ನು ವಿಸ್ತರಿಸಿ. ಎರಡನೇ ಫಲ, ಡೊನಾಲ್ಡ್ ಟ್ರಂಪ್ ಅವರನ್ನು ಸಮಾಧಾನಗೊಳಿಸಿದೆ.
ಇದನ್ನೂ ಓದಿ: ಪ್ರಚಂಡ ವೇಗದಲ್ಲಿ ಹೆಚ್ಚುತ್ತಿರುವ ಭಾರತದ ಉತ್ಪಾದನೆಸ್ ರಫ್ತು; ಪೆಟ್ರೋಲಿಯಂ ಉತ್ಪನ್ನಗಳನ್ನೂ ಹಿಂದಿಕ್ಕುತ್ತಿದೆ
ಅಮೆರಿಕದ ತೈಲ ಬೆಲೆ ಈಗ ತುಸು ಕಡಿಮೆ…
ರಷ್ಯಾದ ತೈಲವನ್ನು ಭಾರತ ಖರೀದಿಸಲು ಪ್ರಮುಖ ಕಾರಣಗಳಲ್ಲಿ ಅಗ್ಗದ ಬೆಲೆಯೂ ಒಂದು. ಇದೀಗ ಅಮೆರಿಕದ ಡಬ್ಲ್ಯುಟಿಐ ತೈಲ ಬೆಲೆ ಕಡಿಮೆಯಾಗಿದೆ. ಹೀಗಾಗಿ, ಅಮೆರಿಕದ ತೈಲಕ್ಕೂ ಭಾರತ ಕೈಹಾಕುತ್ತಿದೆ.
ವರ್ಷದ ಹಿಂದೆ ಡಬ್ಲ್ಯುಟಿಐನಿಂದ ಭಾರತ ದಿನಕ್ಕೆ 3 ಲಕ್ಷ ಬ್ಯಾರಲ್ ತೈಲ ಪಡೆಯುತ್ತಿತ್ತು. ಇದೀಗ 4-5 ಲಕ್ಷ ಬ್ಯಾರಲ್‌ಗೆ ಏರಿದೆ. ಭಾರತದ ತೈಲ ಕಂಪನಿಗಳಿಗೆ ತಮ್ಮ ತೈಲಮೂಲಗಳನ್ನು ವಿಸ್ತರಿಸಲು ಅವಕಾಶ ಸಿಕ್ಕಿದೆ.
ಇದನ್ನೂ ಓದಿ: ಭಾರತದಿಂದ 7nm ಚಿಪ್ ಯೋಜನೆ; ಇದಲಿದೆ ಗೇಮ್ ಚೇಂಜರ್; ಯಾಕೆ ಈ ಚಿಪ್ ಮಹತ್ವದ್ದು ಗೊತ್ತಾ?
ರಷ್ಯಾ ತೈಲವನ್ನು ಭಾರತ ಕಡಿಮೆ ಮಾಡುತ್ತಿದೆಯಾ?
ಅಮೆರಿಕದ ತೈಲ ಖರೀದಿಯನ್ನು ಭಾರತ ಹೆಚ್ಚಿಸುತ್ತಿದೆಯಾದರೂ, ರಷ್ಯಾದಿಂದ ತೈಲ ಪಡೆಯುವುದನ್ನು ಕಡಿಮೆಗೊಳಿಸಿರುವುದು ಗಮನಾರ್ಹವಾಗಿದೆ. ಭಾರತದ ಮೂರನೇ ಒಂದು ಭಾಗದ ತೈಲ ಆಮದು ರಷ್ಯಾದಿಂದ ಆಗುತ್ತಿದೆ. ಅದು ಮುಂದುವರಿಯಲಿದೆ. ಇರಾಕ್ ಮತ್ತು ಸೌದಿ ಅರೇಬಿಯಾ ಟಾಪ್-3 ನಲ್ಲಿ ಇವೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ