ಇಸ್ರೇಲ್ ಪ್ರಧಾನಿ ನರೇಂದ್ರ ಮೋದಿ
ಜೆರುಸಲೆಂ, ಫೆಬ್ರುವರಿ 26: ನರೇಂದ್ರ ಮೋದಿ ಅವರ ಎರಡು ದಿನಗಳ ಇಸ್ರೇಲ್ ಭೇಟಿ ಹಲವು ಫಲಗಳನ್ನು ನೀಡುತ್ತಿದೆ. ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿ, ಶಿಕ್ಷಣ, ಕೃಷಿ ಮತ್ತು ಇನ್ನೂ ಹಲವು ವಿಭಾಗಗಳಲ್ಲಿ ಭಾರತ ಮತ್ತು ಇಸ್ರೇಲ್ ದೇಶಗಳ ನಡುವೆ ಬಹು ಒಪ್ಪಂದಗಳು ಮತ್ತು ಎಂಒಯು ಲಭ್ಯತೆ. ಪ್ರಬಲವಾಗಿರುವ ಎರಡೂ ದೇಶಗಳ ಸಂಬಂಧ (ಭಾರತ ಇಸ್ರೇಲ್ ಸಂಬಂಧ) ಇದೀಗ ಮತ್ತಷ್ಟು ಗಟ್ಟಿಯಾಗಿದೆ.
ಇಸ್ರೇಲ್ ತಂತ್ರಜ್ಞಾನಗಳಲ್ಲಿ ಕ್ಷಮತೆ ಹೊಂದಿದೆ. ಡಿಫೆನ್ಸ್ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಹೊಸತನಗಳನ್ನು ಮಾಡಿದೆ. ಕೃಷಿ, ಹಲವು ಕ್ಷೇತ್ರಗಳಲ್ಲಿ ಇಸ್ರೇಲಿ ಸಂಸ್ಥೆಗಳು ನಾವೀನ್ಯತೆ ಹೊಂದಿವೆ. ಇಸ್ರೇಲ್ ಜೊತೆಗಿನ ಈ ಸಂಬಂಧದಿಂದ ಭಾರತಕ್ಕೆ ವಿವಿಧ ಸ್ತರಗಳಲ್ಲಿ ಲಾಭವಾಗುವ ನಿರೀಕ್ಷೆ ಇದೆ. ಎರಡೂ ದೇಶಗಳ ನಡುವೆ ಡಿಫೆನ್ಸ್ ಸಹಕಾರ ಹೆಚ್ಚಬಹುದು.
ಇದನ್ನೂ ಓದಿ: ಆಂತರಿಕ ಜಗಳಗಳು ಅಲ್ಲಿಯೂ ಇವೆ, ಆದರೆ ಇಸ್ರೇಲ್ನ ವಿಪಕ್ಷ ನಾಯಕರು ಪ್ರಧಾನಿ ಮೋದಿ ಭಾಷಣವನ್ನು ಭಹಿಷ್ಕರಿಸಲಿಲ್ಲ
ಭಾರತೀಯರ ಕೌಶಲ್ಯಗಳೂ ಕೂಡ ಇಸ್ರೇಲ್ಗೆ ವರದಾನವಾಗಿದೆ. ಇಸ್ರೇಲ್ ಕಟ್ಟಡ ನಿರ್ಮಾಣ ಮತ್ತು ಕೇರ್ಗಿವಿಂಗ್ ಸೆಕ್ಟರ್ಗಳಲ್ಲಿ ಭಾರತೀಯರ ಕೊಡುಗೆ ಗಮನಾರ್ಹವಾಗಿದೆ. ಇಸ್ರೇಲ್ ಭೇಟಿ ವೇಳೆ ನರೇಂದ್ರ ಮೋದಿ ಅವರು ಈ ವಿಚಾರ ಪ್ರಸ್ತಾಪಿಸಿ 2023ರ ಮ್ಯಾನ್ ಪವರ್ ಮೊಬಿಲಿಟಿ ಅಗ್ರೀಮೆಂಟ್ಗೆ ಸಾಲ ಕೊಟ್ಟಿದ್ದಾರೆ.
ಎರಡೂ ದೇಶಗಳ ಲಾಭ ತರುವಂತಹ ಟ್ರೇಡ್ ಡೀಲ್ ಸದ್ಯದಲ್ಲೇ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತ್ಯಾನಹು ಅವರನ್ನು ಮಾಡಿದ ನರೇಂದ್ರ ಮೋದಿ ಹಲವು ವಿಚಾರಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಬಹಳ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದದ ವಿಚಾರವನ್ನೂ ಚರ್ಚಿಸಲಾಗಿದೆ. ಈ ಭೇಟಿಯ ಬಳಿಕ ಇಬ್ಬರೂ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿ, ‘ಪರಸ್ಪರ ಲಾಭವಾಗುವಂತಹ ಮುಕ್ತ ವ್ಯಾಪಾರ ಒಪ್ಪಂದವನ್ನು ಕಾರ್ಯಗತಗೊಳಿಸುತ್ತೇವೆ’.
ಇದನ್ನೂ ಓದಿ: ಮೋದಿ ಜಾಕೆಟ್ ತೊಟ್ಟು ಪ್ರಧಾನಿ ಮೋದಿಗೆ ಸರ್ಪ್ರೈಸ್ ಕೊಟ್ಟ ಇಸ್ರೇಲ್ ಪ್ರಧಾನಿ ನೇತನ್ಯಾಹು
ಅವರ ಹೇಳಿಕೆ ಬಹಳ ಮಹತ್ವದ್ದೆನಿಸಿದೆ. ಭಾರತ ಮತ್ತು ಇಸ್ರೇಲ್ ನಡುವೆ ಎಫ್ಟಿಎಗಾಗಿ ನಡೆದ ಮಾತುಕತೆ ಮತ್ತು ಸಂಧಾನಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆಯಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 6:02 pm, ಗುರುವಾರ, 26 ಫೆಬ್ರವರಿ 26