Headlines

ಭಾರತ ಅತೀ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರು ಲಿಸ್ಟ್, 4.75 ಲಕ್ಷ ರೂನಿಂದ ಆರಂಭ

ಭಾರತ ಅತೀ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರು ಲಿಸ್ಟ್, 4.75 ಲಕ್ಷ ರೂನಿಂದ ಆರಂಭ

ಭಾರತ ಅತೀ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರು ಲಿಸ್ಟ್, 4.75 ಲಕ್ಷ ರೂನಿಂದ ಆರಂಭ

ಭಾರತ ಅತೀ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರು ಲಿಸ್ಟ್, 4.75 ಲಕ್ಷ ರೂನಿಂದ ಆರಂಭ, ಭಾರತದಲ್ಲಿ ಮಾತ್ರ ಇಷ್ಟು ಕಡಿಮೆ ಬೆಲೆಗೆ ಆಟೋಮ್ಯಾಟಿಕ್ ಕಾರು ಲಭ್ಯವಿದೆ. ಟಾಪ್ 5 ಆಟೋಮ್ಯಾಟಿಕ್ ಕಾರು ಲಭ್ಯವಿದೆ.

ಆಟೋಮ್ಯಾಟಿಕ್ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಸುಲಭ ಡ್ರೈವಿಂಗ್, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಪ್ರಯಾಸವಿಲ್ಲದೆ ಚಾಲನೆ ಮಾಡಲು ಸಾಧ್ಯವಾಗುತ್ತಿದೆ. ಗೇರ್, ಕ್ಲಚ್ ಕಿರಿಕಿರಿ ಇಲ್ಲದೆ ಚಾಲನೆ ಮಾಡಬಹುದು. ಭಾರತದಲ್ಲಿ ಕೈಗೆಟುಕುವ ದರದಲ್ಲಿ ಆಟೋಮ್ಯಾಟಿಕ್ ಕಾರು ಲಭ್ಯವಿದೆ. ವಿಶೇಷ ಅಂದರೆ ಕೇವಲ 4.75 ಲಕ್ಷ ರೂಪಾಯಿ ಬೆಲೆಯಿಂದ ಆರಂಭಗೊಳ್ಳುವ ಆಟೋಮ್ಯಾಟಿಕ್ ಕಾರು ಭಾರಿ ಬೇಡಿಕೆಯ ಕಾರಾಗಿ ಹೊರಹೊಮ್ಮಿದೆ. ಭಾರತದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳ ಪಟ್ಟಿ ಇಲ್ಲಿದೆ.

ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಕಾರು ಆಟೋಮ್ಯಾಟಿಕ್ ಆಯ್ಕೆಯಲ್ಲಿ ಲಭ್ಯವಿದೆ. 998cc ಎಂಜಿನ್ ಹೊಂದಿರುವ ಕಾರು 65 bhp ಪವರ್ ಹೊಂದಿದೆ. ಈ ಆಟೋಮ್ಯಾಟಿಕ್ ಕಾರಿನ ಬೆಲೆ 4.75 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತದೆ. ವಿಶೇಷ ಅಂದರೆ ಒಂದು ಲೀಟರ್‌ಗೆ 25 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಸಣ್ಣ ಕಾರುಗಳ ಪೈಕಿ ಮಾರುತಿ ಸುಜುಕಿ ಅಲ್ಟೋ ಅತ್ಯಂತ ಬೇಡಿಕೆಯ ಕಾರು. ವಿಶೇಷ ಅಂದರೆ ಈ ಮಾಡೆಲ್‌ನಲ್ಲಿ ಆಟೋಮ್ಯಾಟಿಕ್ ಕಾರು ಲಭ್ಯವಿದೆ. 998cc ಪೆಟ್ರೋಲ್ ಎಂಜಿನ್ ಆಟೋಮ್ಯಾಟಿಕ್ ಕಾರಿನ ಬೆಲೆ 4.95 ಲಕ್ಷ ರೂನಿಂದ 5.6 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). 24.9 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ.

ರೆನಾಲ್ಟ್ ಕ್ವಿಡ್ ಭಾರತದಲ್ಲಿ ಸಣ್ಣ ಕಾರುಗಳ ಪೈಕಿ ಭಾರಿ ಜನಪ್ರಿಯತೆ ಹೊಂದಿದೆ. 999 ಸಿಸಿ ಹೊಂದಿರುವ ಕ್ವಿಡ್ ಕಾರು 1.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಅಟೋಮ್ಯಾಟಿಕ್ ಕಾರಿನ ಬೆಲೆ 5 ರಿಂದ 5.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಒಂದು ಲೀಟರ್ ಪೆಟ್ರೋಲ್‌ಗೆ 22 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಮಾರುತಿ ಸುಜುಕಿ ಸೆಲೆರಿಯೋ ಹಲವು ಬದಲಾವಣೆ ಮೂಲಕ ಅತ್ಯಂತ ಆಕರ್ಷಕವಾಗಿ ರಸ್ತೆಗೆ ಇಳಿದಿದೆ. ಬಹುತೇಕರು ಸೆಲೆರಿಯೋ ಕಾರನ್ನು ನೆಚ್ಚಿಕೊಂಡಿದ್ದಾರೆ. ಅಟೋಮ್ಯಾಟಿಕ್ ಕಾರಿನ ಬೆಲೆ 5.6 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಇದರ ಮೈಲೇಜ್ ಅಚ್ಚರಿ ನೀಡಿದೆ. ಒಂದು ಲೀಟರ್ ಪೆಟ್ರೋಲ್‌ಗೆ 26.6 ಕಿಲೋಮೀಟರ್ ಎಂದು ಕಂಪನಿ ಹೇಳಿದೆ.

ಟಾಟಾ ಕಾರುಗಳ ಪೈಕಿ ಎಂಟ್ರಿ ಲೆವೆಲ್ ಕಾರು ಸಣ್ಣ ಕಾರು ಮಾತ್ರವಲ್ಲ ಅತ್ಯಂತ ಪವರ್‌ಫುಲ್ ಎಂಜಿನ್ ಹೊಂದಿದೆ. ಕಾರಣ ಈ ಕಾರು 1.2 ಲೀಟರ್ ಎಂಜಿನ್ ಹೊಂದಿದೆ. ಇದರ ಬೆಲೆ 6.8 ರಿಂದ 7 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಟಿಯಾಗೋ ಆಟೋಮ್ಯಾಟಿಕ್ ಕಾರಿನ ಮೈಲೇಜ್ 20 ಕಿಲೋಮೀಟರ್.

ಸೂಚನೆ: ಕಾರಿನ ಬೆಲೆಗಳು ನಗರದಿಂದ ನಗರಕ್ಕೆ , ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ ಸಾಧ್ಯತೆ ಇದೆ. ಹತ್ತಿರದ ಡೀಲರ್ ಸಂಪರ್ಕಿಸಿ ಬೆಲೆ ಖಚಿತಪಡಿಸಿಕೊಳ್ಳಿ

ಟಾಟಾ ಟಿಯಾಗೋ

Source link

Leave a Reply

Your email address will not be published. Required fields are marked *