Headlines

ಯುವಜನರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಹೊಸ Gen-Z ಅಂಚೆ ಕಚೇರಿ ಸ್ಥಾಪಿಸಿದ ಇಂಡಿಯಾ ಪೋಸ್ಟ್

ಯುವಜನರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಹೊಸ Gen-Z ಅಂಚೆ ಕಚೇರಿ ಸ್ಥಾಪಿಸಿದ ಇಂಡಿಯಾ ಪೋಸ್ಟ್


ಕೇಂದ್ರ ಸರ್ಕಾರ ಅಂಚೆ ಕಚೇರಿಗಳನ್ನು (ಭಾರತ ಅಂಚೆ) ಉಳಿಸಲು ಹಾಗೂ ಮತ್ತೆ ಹೆಚ್ಚು ಕಾರ್ಯನಿರ್ವಹಿಸಲು ಹೊಸ ಯೋಜನೆ ಮಾಡಿದೆ. Gen Z (ಜೆನ್-ಜಿ) 1997 ರಿಂದ 2012 ರ ನಡುವೆ ಜನಿಸಿದ ತಲೆಮಾರಿಗಾಗಿ ಹೊಸ ಯೋಜನೆ ಅಂಚೆ ಕಚೇರಿ ಮೂಲಕ ಪರಿಚಯಿಸಲಾಗಿದೆ. ಡಿಸೆಂಬರ್ 9 ರಂದು ಇಂಡಿಯಾ ಪೋಸ್ಟ್ ಎರಡು ಆಧುನಿಕ ಮತ್ತು ವಿದ್ಯಾರ್ಥಿ ಕೇಂದ್ರಿತ Gen-Z ಅಂಚೆ ಕಚೇರಿಗಳನ್ನು ಸ್ಥಾಪಿಸಲಾಗಿದೆ. ಒಂದನ್ನು ಕೇರಳದ ಕೊಟ್ಟಾಯನ್ನ CMS ಕಾಲೇಜು, ಮತ್ತೊಂದು ವಿಶಾಖಪಟ್ಟಣದ ಆಂಧ್ರ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಯಿತು. ಈ ಹೊಸ ಅಂಚೆ ಕಚೇರಿಗಳ ವಿನ್ಯಾಸಗಳು ಮತ್ತು ತಂತ್ರಜ್ಞಾನದಿಂದ ಕೂಡಿದೆ. Gen-Z ಆಧಾರಿತ ಅಂಚೆ ಕಚೇರಿಗಳು ಇಂದಿನ ಮಕ್ಕಳಿಗೆ ಅಗತ್ಯವಾಗಿವೆ. ಇದು ಹೆಚ್ಚು ಸಂಶೋಧನೆ ಮಾಡಲು ಸಹಾಯ ಮಾಡುತ್ತದೆ.

ಕೇರಳದ ಕೊಟ್ಟಾಯಂನಲ್ಲಿರುವ ಸಿಎಂಎಸ್ ಕಾಲೇಜಿನಲ್ಲಿ ಎರಡು ಆಧುನಿಕ ಶೈಲಿಯ ಜೆನ್-ಝಡ್-ವಿಷಯದ ಅಂಚೆ ಕಚೇರಿಗಳನ್ನು ತೆರೆಯಲಾಗಿದೆ. ಇನ್ನೊಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಆಂಧ್ರ ವಿಶ್ವವಿದ್ಯಾಲಯದಲ್ಲಿ. ಮೊದಲ Gen-Z ಅಂಚೆ ಕಚೇರಿಯನ್ನು ಐಐಟಿ ದೆಹಲಿಯಲ್ಲಿ ತೆರೆಯಲಾಗಿದೆ. ಇದು ಅಂಚೆ ಸೇವೆಗಳಿಗೆ ಆಧುನಿಕ ಸ್ಪರ್ಶವನ್ನು ತರುವ ಪ್ರಯತ್ನದ ಭಾಗವಾಗಿದೆ. ಕೇರಳ ಮತ್ತು ಆಂಧ್ರದಲ್ಲಿರುವ ಎರಡು Gen-Z ಅಂಚೆ ವಿಶಿಷ್ಟವಾದ ಆಧುನಿಕ ಅಲಂಕಾರಗಳನ್ನು ಹೊಂದಿದೆ. ಉತ್ತಮ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಯುವಕರಿಗೆ ವಿಶ್ರಾಂತಿ ವಾತಾವರಣವನ್ನು ನೀಡುತ್ತವೆ. ಇನ್ನು ಕೇರಳದ ಅಂಚೆ ಕಚೇರಿ ಸ್ಥಳವನ್ನು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಪೋಸ್ಟ್ ಮಾಡಲು ಬಯಸಿದ್ದಾರೆ.

ಇದನ್ನೂ ಓದಿ: ಇಂಥಾ ಸುಗಂಧ ದ್ರವ್ಯ ನೋಡಿರಲು ಸಾಧ್ಯವೇ ಇಲ್ಲ, ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರ

ಎಕ್ಸ್ ಪೋಸ್ಟ್ ಇಲ್ಲಿದೆ ನೋಡಿ:

ಇದು QR-ಆಧಾರಿತವಾಗಿದೆ, ‘ಮೈ ಸ್ಟಾಂಪ್’ ಮುದ್ರಕವನ್ನು ಹೊಂದಿದೆ. ಅಂಚೆ ಕಛೇರಿಗಳನ್ನು ಹೆಚ್ಚು ಬಳಸಿ ಮತ್ತು ಇಂಡಿಯಾ ಪೋಸ್ಟ್ ಭಾರತದ ಯುವಜನರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಈ ಪ್ರಯತ್ನವನ್ನು ಮಾಡಿದೆ. ಯುವಕ -ಯುವತಿಯರನ್ನು ಹೆಚ್ಚು ಆಕರ್ಷಿಸಲು ಸರ್ಕಾರ ಈ ಹೊಸ ಯೋಜನೆ ಮಾಡಿದೆ. ಹೊಸ ಕಛೇರಿಗಳು ಅಂಚೆ ಸೇವೆಗಳನ್ನು ಹೆಚ್ಚು ಸುಲಭವಾಗಿ ಮತ್ತು ಅನುಕೂಲಕರವಾಗಿಸಿವೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *