ಕಿವೀಸ್‌ ವಿರುದ್ಧ ಏಕದಿನಕ್ಕೆ ಇಂದು ಭಾರತ ತಂಡ ಆಯ್ಕೆ; ಶಮಿ ಸೇರಿ ಯಾರಿಗೆಲ್ಲಾ ಸಿಗುತ್ತೆ ಚಾನ್ಸ್?

ಕಿವೀಸ್‌ ವಿರುದ್ಧ ಏಕದಿನಕ್ಕೆ ಇಂದು ಭಾರತ ತಂಡ ಆಯ್ಕೆ; ಶಮಿ ಸೇರಿ ಯಾರಿಗೆಲ್ಲಾ ಸಿಗುತ್ತೆ ಚಾನ್ಸ್?

ಕಿವೀಸ್‌ ವಿರುದ್ಧ ಏಕದಿನಕ್ಕೆ ಇಂದು ಭಾರತ ತಂಡ ಆಯ್ಕೆ; ಶಮಿ ಸೇರಿ ಯಾರಿಗೆಲ್ಲಾ ಸಿಗುತ್ತೆ ಚಾನ್ಸ್?

ನವದೆಹಲಿ: ಭಾರತ ಹಾಗೂ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಇಂದು ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡವನ್ನು ಪ್ರಕಟಿಸಲಿದೆ. ಇದು ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲಗಳನ್ನು ಹುಟ್ಟುಹಾಕಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

ನ್ಯೂಜಿಲೆಂಡ್‌ ವಿರುದ್ಧ ಜನವರಿ 11ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಶನಿವಾರ ಭಾರತ ತಂಡದ ಆಯ್ಕೆ ನಡೆಯಲಿದೆ.

ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿಯು ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಗೆ ಇಂದು 15 ಸದಸ್ಯರ ತಂಡವನ್ನು ಆಯ್ಕೆ ಮಾಡಲಿದೆ.

ರಿಷಭ್‌ ಪಂತ್‌, ಮೊಹಮದ್‌ ಸಿರಾಜ್‌, ಮೊಹಮದ್‌ ಶಮಿ ಸೇರಿ ಕೆಲ ಆಟಗಾರರ ಏಕದಿನ ಕ್ರಿಕೆಟ್‌ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.

ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚುತ್ತಿರುವ ಮೊಹಮ್ಮದ್ ಶಮಿ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಿದೆ. ಇದರ ಬಗ್ಗೆ ಬಿಸಿಸಿಐ ಅಧಿಕಾರಿಗಳು ಈಗಾಗಲೇ ಸುಳಿವು ನೀಡಿದ್ದರು.

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 2024ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿಗೆ ಭಾರತ ಏಕದಿನ ತಂಡವನ್ನು ಪ್ರತಿನಿಧಿಸಿದ್ದರು. ಹೀಗಾಗಿ ಪಂತ್ ಆಯ್ಕೆಯ ಕುರಿತಂತೆ ಸಾಕಷ್ಟು ಕುತೂಹಲವಿದೆ.

ಇಶಾನ್‌ ಕಿಶನ್‌, ದೇವದತ್‌ ಪಡಿಕ್ಕಲ್‌, ಧೃವ್‌ ಜುರೆಲ್‌ ಸೇರಿ ಹಲವು ಆಟಗಾರರು ಆಯ್ಕೆ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಇಶಾನ್ ಕಿಶನ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವುದರಿಂದ ಕಿಶನ್‌ ಮತ್ತೆ ಏಕದಿನ ತಂಡ ಕೂಡಿಕೊಳ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ

ಆಸ್ಟ್ರೇಲಿಯಾ ಎದುರಿನ ಸಿಡ್ನಿ ಏಕದಿನ ಪಂದ್ಯದ ವೇಳೆ ಗಾಯಗೊಂಡು ತಂಡದಿಂದ ಹೊರಗುಳಿದಿರುವ ಶ್ರೇಯಸ್ ಅಯ್ಯರ್, ತಂಡಕ್ಕೆ ಕಮ್‌ಬ್ಯಾಕ್ ಮಾಡ್ತಾರೋ ಅಥವಾ ಇಲ್ಲವೇ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ.

ಭವಿಷ್ಯದ ಮಹತ್ವದ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಆಲ್ರೌಂಡರ್ ಹಾರ್ದಿಕ್‌ ಪಾಂಡ್ಯ ಹಾಗೂ ಮಾರಕ ವೇಗಿ ಜಸ್ಪ್ರೀತ್ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡಬಹುದು ಎನ್ನಲಾಗಿದೆ.

Source link

Leave a Reply

Your email address will not be published. Required fields are marked *