Headlines

ರೈಸಿಂಗ್ ಸ್ಟಾರ್ ಏಷ್ಯಾಕಪ್​ಗೆ ಭಾರತ ತಂಡ ಪ್ರಕಟ: ಜಿತೇಶ್ ಶರ್ಮಾಗೆ ನಾಯಕತ್ವ

ರೈಸಿಂಗ್ ಸ್ಟಾರ್ ಏಷ್ಯಾಕಪ್​ಗೆ ಭಾರತ ತಂಡ ಪ್ರಕಟ: ಜಿತೇಶ್ ಶರ್ಮಾಗೆ ನಾಯಕತ್ವ


ಖತಾರ್‌ನಲ್ಲಿ ನಡೆಯುತ್ತಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಸ್ಪರ್ಧೆಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಮಂದಿ ಸದಸ್ಯರು ಈ ತಂಡವನ್ನು ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಮುನ್ನಡೆಸಲಿದ್ದಾರೆ. ಹಾಗೆಯೇ ಉಪನಾಯಕನಾಗಿ ನಮನ್ ಧೀರ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಈ ತಂಡದಲ್ಲಿ ಯುವ ಸ್ಫೋಟಕ ದಾಂಡಿಗರಾದ ವೈಭವ್ ಸೂರ್ಯವಂಶಿ ಹಾಗೂ ಪ್ರಿಯಾಂಶ್ ಆರ್ಯ ಕೂಡ ಸ್ಥಾನ ಪಡೆದಿದ್ದಾರೆ. ಕಳೆದ ಸೀಸನ್ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ರಾಜಸ್ಥಾನ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಅತ್ತ ಪ್ರಿಯಾಂಶ್ ಆರ್ಯ ಪಂಜಾಬ್ ಕಿಂಗ್ಸ್ ಪರ ಇನಿಂಗ್ಸ್ ಆರಂಭಿಸಿದ್ದರು. ಇದೀಗ ಈ ಇಬ್ಬರು ಯುವ ದಾಂಡಿಗರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಹಾಗೆಯೇ ನೆಹಾಲ್ ವಧೇರಾ, ಸೂರ್ಯಾಂಶ್ ಶೆಡ್ಗೆ, ರಮಣ್ ದೀಪ್, ಅಶುತೋಷ್ ಶರ್ಮಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಯುವ ಆಲ್ರೌಂಡರ್ ಹರ್ಷ್ ದುಬೆ ಕೂಡ ಕಾಣಿಸಿಕೊಂಡಿದ್ದಾರೆ.

ಇನ್ನು ಬೌಲರ್‌ಗಳ ಪಟ್ಟಿಯಲ್ಲಿ ಕನ್ನಡಿಗ ವಿಜಯಕುಮಾರ್ ವೈಶಾಕ್, ಯಶ್ ಠಾಕೂರ್, ಸುಯಶ್ ಶರ್ಮಾ ಸ್ಥಾನ ಪಡೆದಿದ್ದಾರೆ. ಅದರಂತೆ ಉದಯೋನ್ಮುಖ ಏಷ್ಯಾಕಪ್ ಟಿ20 ಆವೃತ್ತಿಗೆ ಭಾರತ ಎ ತಂಡ ಈ ಕೆಳಗಿನಂತಿದೆ…

ಭಾರತ ಎ ತಂಡ: ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್ ವಧೇರಾ, ನಮನ್ ಧೀರ್ (ಉಪನಾಯಕ), ಸೂರ್ಯಾಂಶ್ ಶೆಡ್ಗೆ, ಜಿತೇಶ್ ಸಿಂಗ್ ಶರ್ಮಾ (ನಾಯಕ) ರಮಣದೀಪ್ ಸಿಂಗ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಹರ್ಷ್ ದುಬೆ, ಅಶುತೋಷ್ ಶರ್ಮಾ, ಯಶ್ ಠಾಕೂರ್, ವಿಜಯಕುಮಾರ್, ಸುರ್ಜಪ್ಯತ್ ಸಿಂಗ್ ಚರಕ್,

ಮೀಸಲು ಆಟಗಾರರು: ಶೇಖ್ ರಶೀದ್, ಗುರ್ನೂರ್ ಸಿಂಗ್ ಬ್ರಾರ್, ಕುಮಾರ್ ಕುಶಾಗ್ರಾ, ತನುಷ್ ಕೋಟ್ಯಾನ್, ಸಮೀರ್ ರಿಝ್ವಿ.

ಇದನ್ನೂ ಓದಿ: IPL 2026: ಹೆಚ್ಚುವರಿ 10 ಪಂದ್ಯಗಳು… ಐಪಿಎಲ್‌ನಲ್ಲಿ ಮಹತ್ವದ ಬದಲಾವಣೆ

ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ – ಭಾರತ
ಇಲ್ಲ. ದಿನ ದಿನಾಂಕ ಮುಖಾಮುಖಿ ಪಂದ್ಯ
1 ಶುಕ್ರವಾರ ನವೆಂಬರ್ 14 ಭಾರತ vs ಯುಇಐ ಗ್ರೂಪ್ ಬಿ ಪಂದ್ಯ ಪಂದ್ಯ
2 ಭಾನುವಾರ ನವೆಂಬರ್ 16 ಭಾರತ vs ಪಾಕಿಸ್ತಾನ ಗ್ರೂಪ್ ಬಿ ಪಂದ್ಯ ಪಂದ್ಯ
3 ಮಂಗಳವಾರ ನವೆಂಬರ್ 18 ಭಾರತ vs ಓಮನ್ ಗ್ರೂಪ್ ಬಿ ಪಂದ್ಯ ಪಂದ್ಯ
4 ಶುಕ್ರವಾರ ನವೆಂಬರ್ 21 ಸೆಮಿಫೈನಲ್ -1 ಪಂದ್ಯ
5 ಶುಕ್ರವಾರ ನವೆಂಬರ್ 21 ಸೆಮಿಫೈನಲ್ – 2 ಪಂದ್ಯ
6 ಭಾನುವಾರ ನವೆಂಬರ್ 23 ಅಂತಿಮ

ರಂದು ಪ್ರಕಟಿಸಲಾಗಿದೆ – 11:29 am, ಮಂಗಳವಾರ, 4 ನವೆಂಬರ್ 25



Source link

Leave a Reply

Your email address will not be published. Required fields are marked *