Headlines

IND vs SA: ನಾಲಾಯಕ್ ನಾಯಕ, ಉಪನಾಯಕ; ಭಾರತ ಟಿ20 ತಂಡದಲ್ಲಿರುವುದು 9 ಆಟಗಾರರಷ್ಟೆ

IND vs SA: ನಾಲಾಯಕ್ ನಾಯಕ, ಉಪನಾಯಕ; ಭಾರತ ಟಿ20 ತಂಡದಲ್ಲಿರುವುದು 9 ಆಟಗಾರರಷ್ಟೆ


ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ತಂಡ ಇಂಡಿಯಾ 51 ರನ್‌ಗಳ ಸೋಲುಕಂಡಿತು. ತಂಡದ ಸೋಲಿಗೆ ಬ್ಯಾಟಿಂಗ್ ವಿಭಾಗದ ಕಳಪೆ ಪ್ರದರ್ಶನವೇ ಪ್ರಮುಖ ಕಾರಣ ಎನ್ನಬಹುದು. ಅದರಲ್ಲೂ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಉಪನಾಯಕ ಶುಭಮನ್ ಗಿಲ್ ಅವರ ಕಳಪೆ ಪ್ರದರ್ಶನ ತಂಡವನ್ನು ಸೋಲಿನ ದವಡೆಗೆ ತಳ್ಳಿತು ಎಂದರೆ ತಪ್ಪಾಗಲಾರದು. ಈ ಇಬ್ಬರು ಆಟಗಾರರಲ್ಲಿ ಪ್ರತಿಭೆಗೆ ಯಾವ ಕೊರತೆಯೂ ಇಲ್ಲ. ಆದರೆ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಈ ಇಬ್ಬರು ಆಟಗಾರರು ಒತ್ತಡಕ್ಕೊಳಗಾಗುವಂತೆ ಮಾಡಲು ಯಾವುದೇ ಅನುಮಾನವಿಲ್ಲ. ಇದು ಕೇವಲ ಪಂದ್ಯಗಳ ಕಥೆಯಲ್ಲ. ಬದಲಾಗಿ ಇಡೀ ವರ್ಷ ಇವರಿಬ್ಬರ ಬ್ಯಾಟ್ ಮೌನಕ್ಕೆ ಶರಣಾಗಿರುವುದು ತಂಡವನ್ನು ಆತಂಕಕ್ಕೀಡುಮಾಡಿದೆ.

ನಾವು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನೇ ತೆಗೆದುಕೊಂಡರೆ, ಮೊದಲ ಪಂದ್ಯದಲ್ಲೂ ಇವರಿಬ್ಬರ ಆಟ ನಡೆದಿಲ್ಲ. ಉಪನಾಯಕ ಶುಭಮನ್ ಗಿಲ್ 4 ರನ್ ಗಳಿಗೆ ಓಟಾದರೆ, ನಾಯಕ ಸೂರ್ಯಕುಮಾರ್ ಯಾದವ್ 12 ರನ್ ಬಾರಿಸುವಷ್ಟರಲ್ಲೇ ಸುಸ್ತಾದರು. ಆದಾಗ್ಯೂ ಇತರ ಆಟಗಾರರ ಪ್ರದರ್ಶನದಿಂದಾಗಿ ತಂಡಕ್ಕೆ ಗೆಲುವು ದಕ್ಕಿತು. ಆದರೆ ಎರಡನೇ ಟಿ20 ಅದು ನಡೆಯಲಿಲ್ಲ. ಈ ಪಂದ್ಯದಲ್ಲೂ ಇವರಿಬ್ಬರ ಆಟ ಹೀನವಾಗಿತ್ತು. ಉಪನಾಯಕ ಗಿಲ್ ಸೊನ್ನೆ ಸುತ್ತಿದರೆ, ನಾಯಕ ಸೂರ್ಯ 4 ರನ್ ಬಾರಿಸಲಷ್ಟೇ ಶಕ್ತರಾದರು. ಇವರಿಬ್ಬರು ಈ ರೀತಿಯ ಕಳಪೆ ಪ್ರದರ್ಶನ ನೀಡುತ್ತಿರುವುದು ಈ ಸರಣಿಯಲ್ಲಿ, ಈ ಇಡೀ ವರ್ಷ ಇವರಿಬ್ಬರ ಆಟ ನಡೆದಿರುವುದು ಹೀಗೆ.

ಐಸಿಯುನಲ್ಲಿರುವ ಸೂರ್ಯ

ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಕಳೆದ 20 ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಜೊತೆಗೆ ಈ 20 ಪಂದ್ಯಗಳಲ್ಲಿ ಸೂರ್ಯ ಕಲೆಹಾಕಿರುವ ರನ್ಗಳು ಕೇವಲ 227. ಇನ್ನೊಂದು ಅವಮಾನಕರ ಸಂಗತಿಯೆಂದರೆ ಸೂರ್ಯ ಅವರ ಬ್ಯಾಟಿಂಗ್ ಸರಾಸರಿ ಕೇವಲ 13.35 ಮತ್ತು ಸ್ಟ್ರೈಕ್ ರೇಟ್ 120 ಕ್ಕಿಂತ ಕಡಿಮೆಯಿದೆ. ಸೂರ್ಯಕುಮಾರ್ ಯಾದವ್ ತಮ್ಮ ಕೊನೆಯ 20 ಇನ್ನಿಂಗ್ಸ್‌ಗಳಲ್ಲಿ ಕೇವಲ ಎರಡು ಬಾರಿ 30ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಉಳಿದಂತೆ ಮೂರು ಬಾರಿ ಸೊನ್ನೆ ಸುತ್ತಿರುವ ಸೂರ್ಯ, 10 ಇನ್ನಿಂಗ್ಸ್‌ಗಳಲ್ಲಿ 5ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ.

ಶುಭ್ಮನ್ ಗಿಲ್ ಕಥೆಯೂ ಇದೆ

ಶುಭಮನ್ ಗಿಲ್ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಟಿ20ಮಾದರಿಯಲ್ಲಿ ಮಾತ್ರ ಅವರ ಪ್ರದರ್ಶನ ತೀರ ಕಳಪೆಯಾಗಿದೆ. ಒಂದೇ ವರ್ಷದ 3 ಟಿ20 ಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರಿದ್ದರೂ ಗಿಲ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳದ ಗಿಲ್, ಕೊನೆಯ 14 ಟಿ20ಇನ್ನಿಂಗ್ಸ್‌ನಲ್ಲಿ 23.90 ಸರಾಸರಿಯಲ್ಲಿ ಕೇವಲ 263 ರನ್ ಗಳಿಸಿದ್ದಾರೆ. ಈ ವರ್ಷ, ಗಿಲ್ ಟಿ20ಮಾದರಿಯಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಹಾಗಿದ್ದರೂ ಆಯ್ಕೆ ಮಂಡಳಿ ಗಿಲ್‌ಗೆ ಮಣೆ ಹಾಕುತ್ತಿರುವುದು ಅನುಭವಿಗಳ ಹಾಗೂ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಇವರಿಬ್ಬರು ಲೆಕ್ಕಕುಂಟು ಆಟಕ್ಕಿಲ್ಲ

ಸೂರ್ಯಕುಮಾರ್ ಯಾದವ್ ಮತ್ತು ಶುಭಮನ್ ಗಿಲ್ ಕಳೆದ 15-20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಇದರರ್ಥ ಇವರಿಬ್ಬರ ತಂಡದಲ್ಲಿ ಯಾವುದಾದರೂ ಪ್ರಯೋಜನವಾಗುತ್ತಿಲ್ಲ. ಅಂದರೆ ಈ ಇಬ್ಬರು ನಾಮಕಾವಸ್ತೆಗೆ ತಂಡದಲ್ಲಿದ್ದರೆ, ತಂಡದಲ್ಲಿ ಉಳಿದ 9 ಆಟಗಾರರು ಗೆಲ್ಲಲು ಹೋರಾಟ ನಡೆಸಬೇಕಾಗಿದೆ. ಪ್ರತಿಭೆಗಳಿಗೆ ಕೊರೆತ ಇಲ್ಲದಿರುವಾಗ ಇವರಿಬ್ಬರಿಗೆ ಇಷ್ಟು ಅವಕಾಶಗಳನ್ನು ನೀಡುತ್ತಿರುವುದು ಪ್ರತಿಭಾವಂತರಿಗೆ ಬಿಸಿ ಮುಟ್ಟಿಸುತ್ತಿರುವುದು ದ್ರೋಹವಲ್ಲದೆ ಮತ್ತೇನು ಹೇಳಿ?. ಇದೆಲ್ಲದರ ಜೊತೆಗೆ ಟಿ20 ಹತ್ತಿರವಾಗುತ್ತಿರುವ ನಾಯಕ ಮತ್ತು ಉಪನಾಯಕನ ಕಳಪೆ ಫಾರ್ಮ್ ಭಾರತೀಯ ತಂಡದ ನಿರ್ವಹಣೆಗೆ ನಿಜವಾದ ಕಳವಳಕಾರಿಯಾಗಿದೆ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *