ಭಾರತ-ಅಮೆರಿಕ ಟ್ರೇಡ್ ಡೀಲ್ ಮಾತುಕತೆ ಬಹುತೇಕ ಪೂರ್ಣ: ವಾಣಿಜ್ಯ ಕಾರ್ಯದರ್ಶಿ

ಭಾರತ-ಅಮೆರಿಕ ಟ್ರೇಡ್ ಡೀಲ್ ಮಾತುಕತೆ ಬಹುತೇಕ ಪೂರ್ಣ: ವಾಣಿಜ್ಯ ಕಾರ್ಯದರ್ಶಿ


ನವದೆಹಲಿ, ಫೆಬ್ರುವರಿ 2: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಭಾರತ ಯುಎಸ್ಎ) ಅಂತಿಮ ಹಂತದಲ್ಲಿದೆ, ಮುಖ್ಯ ವ್ಯಾಪಾರ ಒಪ್ಪಂದವನ್ನು ಆಯೋಜಿಸಲಾಗಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಹಾಗೂ ಈ ಡೀಲ್‌ಗೆ ಭಾರತದ ಸಂಧಾನರಾದ ರಾಜೇಶ್ ಅಗರ್ವಾಲ್ ಹೇಳಿದ್ದಾರೆ. ಡೀಲ್ ಮುಗಿದೇ ಹೋಯಿತು ಎಂದು ಮಿಂಚಿ ಮಾಯವಾಗುತ್ತಿದ್ದ ಭರವಸೆಗೆ ರಾಜೇಶ್ ಅಗರ್ವಾಲ್ ಜೀವ ತುಂಬಿದ್ದಾರೆ. ಎರಡು ದೇಶಗಳ ನಡುವೆ ವ್ಯಾಪಾರ ಸಂಧಾನ ಸರಿಯಾದ ದಿಸೆಯಲ್ಲಿದೆ ಎಂಬ ಸುಳಿವನ್ನು ಅವರು ಹೊಂದಿದ್ದಾರೆ.

ದೊಡ್ಡ ಡೀಲ್‌ಗೆ ಹೆಚ್ಚು ಸಮಯ ಬೇಕು

ದೊಡ್ಡ ಆರ್ಥಿಕತೆಗಳ ನಡುವೆ ವ್ಯಾಪಾರ ಒಪ್ಪಂದ ಏರ್ಪಡಲು ಸಮಯ ಹಿಡಿಯುತ್ತದೆ ಎಂದು ವಾಣಿಜ್ಯ ಕಾರ್ಯದರ್ಶಿಗಳು ಈ ವೇಳೆ ಸ್ಪಷ್ಟಪಡಿಸಿದ್ದಾರೆ. ‘ಅಮೆರಿಕವು ದೊಡ್ಡ ಆರ್ಥಿಕತೆಯ ಸಮಗ್ರವಾದ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಹೆಚ್ಚು ಸಮಯ ಹಿಡಿಯುತ್ತದೆ’ ಅವರು. ಆದರೆ, ವಿಸ್ತೃತವಾದ ಒಪ್ಪಂದ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತ ಕಳೆದ ತಿಂಗಳಷ್ಟೇ ಐರೋಪ್ಯ ಒಕ್ಕೂಟದ ಜೊತೆ ಬಹಳ ದೊಡ್ಡ ಒಪ್ಪಂದ ಮಾಡಿಕೊಂಡಿದೆ. ಬ್ರಿಟನ್, ಐಎಫ್‌ಟಿಎ ದೇಶಗಳಿಗೂ ಭಾರತ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜೇಶ್ ಅಗರ್ವಾಲ್, ‘ಈ ಎಲ್ಲಾ ಒಪ್ಪಂದಗಳಿಗೆ ಚಾಲನೆ ಬಂದ ಬಳಿಕ ಶೇ. 55-60ರಷ್ಟು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ರಫ್ತಿಗೆ ಆದ್ಯತೆಯ ಪ್ರವೇಶ ಸಿಗುತ್ತದೆ. ಇದರಿಂದ ರಫ್ತು ಸ್ಪರ್ಧಾತ್ಮಕತೆ ಭಾರತದ ಬಲವಾಗಿದೆ’ ಎಂದು ವಾಣಿಜ್ಯ ಕಾರ್ಯದರ್ಶಿಯಾದ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಬಗ್ಗೆ ಇಲಾನ್ ಮಾಸ್ಕ್ ಟ್ವೀಟ್; ರಾಹುಲ್ ಮತ್ತು ವಿಪಕ್ಷಗಳನ್ನು ಝಾಡಿಸಿದ ಕೇಂದ್ರ ಸಚಿವರು

ಭಾರತ 2024-25ರಲ್ಲಿ 825 ಬಿಲಿಯನ್ ಡಾಲರ್‌ನಷ್ಟು ರಫ್ತು ಮಾಡಿತ್ತು. 2025-26ರಲ್ಲಿ 850 ಬಿಲಿಯನ್ ಡಾಲರ್ ರಫ್ತಿಗೆ ಗುರಿ ಇಡಲಾಗಿದೆ. ಭಾರತದ ರಫ್ತಿಗೆ ಅಮೆರಿಕವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಆದರೆ, ಶೇ. 50ರಷ್ಟು ಟ್ಯಾರಿಫ್ ಇರುವ ಪರಿಣಾಮ ಭಾರತದ ರಫ್ತು ಹೆಚ್ಚಿಗೆ ಪ್ರಮುಖ ತಡೆಯಾಗಿದೆ. ಐರೋಪ್ಯ ಒಕ್ಕೂಟ ಸೇರಿದಂತೆ ವಿವಿಧ ದೇಶಗಳ ನಡುವೆ ಮಾಡಿಕೊಂಡಿರುವ ಟ್ರೇಡ್ ಡೀಲ್‌ಗಳು ಭಾರತದ ರಫ್ತಿಗೆ ಹೆಚ್ಚಿನ ವೈವಿಧ್ಯತೆ ಮತ್ತು ವಿಸ್ತೃತತೆಯನ್ನು ತರಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *