ಆಸ್ಟ್ರೇಲಿಯಾದ ಈ ಗೆಲುವಿನ ಕ್ರೆಡಿಟ್ ಮ್ಯಾಥ್ಯೂ ಶಾರ್ಟ್‌ಗೆ ಸಲ್ಲಬೇಕು. ಇದರ ಜೊತೆಗೆ ಅವರಿಗೆ ಮೂರು ಮೂರು ಜೀವದಾನ ನೀಡಿದ ಟೀಂ ಇಂಡಿಯಾ ಫಿಲ್ಡರ್‌ಗಳಿಗೆ ಸಲ್ಲಬೇಕು. ವಾಸ್ತವವಾಗಿ ಆಸೀಸ್ ಇನ್ನಿಂಗ್ಸ್‌ನ 16 ನೇ ಸ್ಥಾನದಲ್ಲಿ, ನಿತೀಶ್ ರೆಡ್ಡಿ ಬೌಲಿಂಗ್‌ನಲ್ಲಿ ಪಾಯಿಂಟ್‌ನಲ್ಲಿ ನಿಂತಿದ್ದ ಅಕ್ಷರ್ ಪಟೇಲ್ ಶಾರ್ಟ್ ಅವರ ಸುಲಭ ಕ್ಯಾಚ್ ಅನ್ನು ಕೈಬಿಟ್ಟರು. ಆ ಸಮಯದಲ್ಲಿ ಶಾರ್ಟ್ 24 ರನ್ ಬಾರಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಒಂದು ವೇಳೆ ಅಕ್ಷರ್ ಕ್ಯಾಚ್ ತೆಗೆದುಕೊಂಡಿದ್ದಾರೆ, ಪಂದ್ಯ ಭಾರತದತ್ತ ವಾಲುತ್ತಿತ್ತು.