ದುಬೈ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಆಯೋಜನೆಗೆ ಇದ್ದಂತಹ ಅಡ್ಡಿ ಆತಂಕಗಳು ಕೊನೆಗೂ ನಿವಾರಣೆಯಾಗಿದ್ದು, ಭಾರತ ಎದುರು ಮ್ಯಾಚ್ ಆಡಲು ಪಾಕಿಸ್ತಾನ ಒಪ್ಪಿಕೊಂಡಿರುವುದಾಗಿ ಪಾಕ್ ಸರ್ಕಾರ ಘೋಷಿಸಿದೆ. ಇದರ ಜತೆಗೆ ಐಸಿಸಿ, ಪಾಕ್ ಡಿಮ್ಯಾಂಡ್ ರಿಜೆಕ್ಟ್ ಮಾಡಿದೆ.

ಬಾಂಗ್ಲಾದೇಶವನ್ನು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಗಿಟ್ಟಿದ್ದನ್ನು ವಿರೋಧಿಸಿ, ಪಾಕಿಸ್ತಾನ ಸರ್ಕಾರವು ಇದೇ ಫೆಬ್ರವರಿ 15ರಂದು ನಿಗದಿಯಾಗಿರುವ ಭಾರತ ಎದುರಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಮೈದಾನಕ್ಕಿಳಿಯುವುದಿಲ್ಲ ಎಂದು ಘೋಷಿಸಿತ್ತು. ಒಂದು ವೇಳೆ ಭಾರತ ಎದುರು ಮ್ಯಾಚ್ ಆಡಬೇಕಿದ್ರೆ ಮೂರು ಪ್ರಮುಖ ಡಿಮ್ಯಾಂಡ್ ಐಸಿಸಿ ಪೂರೈಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಪಟ್ಟು ಹಿಡಿದಿತ್ತು.

ಮೊದಲಿಗೆ ಬಾಂಗ್ಲಾದೇಶ ಭದ್ರತೆಯ ನೆಪವೊಡ್ಡಿ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳ ಮೊದಲು ಟಿ20 ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿದಿತ್ತು. ಇನ್ನು ಬಾಂಗ್ಲಾದೇಶ ಕಿಕೌಟ್ ಮಾಡಿದ್ದನ್ನು ಖಂಡಿಸಿ, ಪಾಕಿಸ್ತಾನ ಭಾರತ ಎದುರಿನ ಮ್ಯಾಚ್ ಬಾಯ್ಕಾಟ್ ಮಾಡುವುದಾಗಿ ಐಸಿಸಿ ಬೆದರಿಕೆ ಹಾಕಿತ್ತು. ಆದರೆ ಐಸಿಸಿ ಈ ಎರಡೂ ದೇಶಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆಯೇ ಮೆತ್ತಗಾಗಿ ಪಾಕ್ ಐಸಿಸಿ ಮುಂದೆ ಕೆಲವು ಡಿಮ್ಯಾಂಡ್ ಇಟ್ಟಿತ್ತು.

ಅದರಲ್ಲಿನ ಪ್ರಮುಖ ಬೇಡಿಕೆಯೆಂದರೇ, ಮೊದಲನೆಯದ್ದು ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿಯನ್ನು ಆಯೋಜಿಸಬೇಕು ಎನ್ನುವ ಬೇಡಿಕೆಯಿಟ್ಟಿತ್ತು. ಭಾರತ ಹಾಗೂ ಪಾಕಿಸ್ತಾನ ನಡುವೆ 2012-13ರಲ್ಲಿ ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿ ನಡೆದಿತ್ತು. ಇದಾದ ಬಳಿಕ ರಾಜತಾಂತ್ರಿಕ ಬಿಕ್ಕಟ್ಟಿನಿಂದ ಇಂಡೋ-ಪಾಕ್ ನಡುವೆ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಆದರೆ ಐಸಿಸಿ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಈ ಬೇಡಿಕೆ ರಿಜೆಕ್ಟ್ ಮಾಡಿದೆ.

ಭಾರತ-ಪಾಕ್ ನಡುವಿನ ವಿಶ್ವಕಪ್ ಪಂದ್ಯದಲ್ಲಿ ₹2200 ಕೋಟಿ ಲಾಭವನ್ನು ಅಂದಾಜಿಸಲಾಗಿತ್ತು. ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದರೆ ಅಲ್ಲೂ ಕೋಟಿಗಟ್ಟಲೆ ಹಣ ಹರಿದುಬರುತ್ತದೆ. ಇದೇ ಕಾರಣಕ್ಕೆ ಭಾರತ ವಿರುದ್ಧ ದ್ವಿಪಕ್ಷೀಯ ಸರಣಿ, ತ್ರಿಕೋನ ಸರಣಿಗೆ ಪಾಕ್, ಬಾಂಗ್ಲಾ ಬೇಡಿಕೆ ಇಟ್ಟಿದ್ದವು. ಈ ಬೇಡಿಕೆಗಳನ್ನು ಐಸಿಸಿ ರಿಜೆಕ್ಟ್ ಮಾಡಿದೆ ಎಂದು ವರದಿಯಾಗಿದೆ.

ಇನ್ನು ಇದಷ್ಟೇ ಅಲ್ಲದೇ ಭಾರತ-ಪಾಕ್-ಬಾಂಗ್ಲಾ ಒಳಗೊಂಡ ತ್ರಿಕೋನ ಸರಣಿ, ಭಾರತ ತಂಡದ ಬಾಂಗ್ಲಾ ಪ್ರವಾಸ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದ್ದು, ಇದು ತನ್ನ ವ್ಯಾಪ್ತಿಗೆ ಬರಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ.

ಈ ಮೂಲಕ ಕ್ರಿಕೆಟ್ ಜಗತ್ತಿನ ಮುಂದೆ ಬಿಸಿಸಿಐ ತಲೆಬಾಗಿಸುವಂತೆ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್‌ಗೆ ಭ್ರಮನಿರಸನವಾಗಿದೆ. ಪಾಕ್ ಇದೀಗ ಭಾರತ ಎದುರು ಫೆಬ್ರವರಿ 15ರಂದು ಕೊಲಂಬೊದಲ್ಲಿ ಟಿ20 ವಿಶ್ವಕಪ್ ಪಂದ್ಯವನ್ನಾಡಲು ಕಣಕ್ಕಿಳಿಯಲಿದೆ.

Source link
'ಭಾರತ ಎದುರು ಆಡಬೇಕಂದ್ರೆ..?' ಪಾಕಿಸ್ತಾನದ ಮೂರೂ ಡಿಮ್ಯಾಂಡ್ ರಿಜೆಕ್ಟ್ ಮಾಡಿದಿ ಐಸಿಸಿ! ಕೊನೆಗೂ ತೆಪ್ಪಗಾದ ಪಿಸಿಬಿ