ಕೊನೆಯ ಕ್ಷಣದಲ್ಲಿ ಭಾರತ ಪಾಕ್ ಪಂದ್ಯಕ್ಕೆ ಎದುರಾಗುತ್ತಾ ವಿಘ್ನ? ತೆಲೆಕೆಡಿಸಿಕೊಳ್ಳಲ ಎಂದ ಸೂರ್ಯ? ಟೀಂ ಇಂಡಿಯಾ ನಾಯಕ ನಮಗೆ ಗೇಮ್ ಮಾತ್ರ ಫೋಕಸ್, ಇನ್ನುಳಿದ ವಿಚಾರಗಳ ಕುರಿತು ನಾವು ತಲೆಕೆಡಿಸಿಕೊಳ್ಳಲ ಎಂದಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿ ಮಹತ್ವದ ಪಂದ್ಯಕ್ಕೆ ಕೊಲೊಂಬೊ ಮೈದಾನ ಸಾಕ್ಷಿಯಾಗಲಿದೆ. ಹೌದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸಂಜೆ 7 ಗಂಟೆಗೆ ಆರಂಭಗೊಳ್ಳಲಿದೆ. ಪ್ರತಿ ಐಸಿಸಿ ಸರಣಿಗಳಲ್ಲಿ ಮಾಡುವಂತೆ ಈ ಬಾರಿಯೂ ಪಾಕಿಸ್ತಾನ ಮೊದಲಿಗೆ ಭಾರತದ ವಿರುದ್ಧ ಪಂದ್ಯ ಬಹಿಷ್ಕರಿಸಿತ್ತು. ಇದೀಗ ಪ್ಲೇಟ್ ತಿರುಗಿಸಿರುವ ಪಾಕಿಸ್ತಾನ ಮುಖಾಮುಖಿಗೆ ಸಜ್ಜಾಗಿದೆ. ಕೊನೆಯ ಕ್ಷಣದಲ್ಲಿ ಪಂದ್ಯಕ್ಕೆ ಎದುರಾಗುತ್ತಾ ವಿಘ್ನ

ಭಾರತ ಪಾಕಿಸ್ತಾನ ನಡುವಿನ ಪಂದ್ಯ ಸಂಜೆ 7 ಗಂಟೆಗೆ ಆರಂಭಗೊಳ್ಳಲಿದೆ. ಶ್ರೀಲಂಕಾದ ಹವಾಮಾನ ವರದಿ ಪ್ರಕಾರ ಭಾನುವಾರ ಕೊಲೊಂಬೊ ಹಾಗೂ ಸುತ್ತ ಮುತ್ತ ಮಳೆಯಾಗುವ ಸಾಧ್ಯತೆ ಶೇಕಡಾ 76ರಷ್ಟಿದೆ ಎಂದಿದೆ. ಭಾನುವಾರ ಬೆಳೆಗ್ಗೆಯಿಂದ ಸಂಜೆ ವರಗೆ ಮಳೆ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿದೆ. ಈ ಮಳೆ ಪಂದ್ಯದ ನಡುವೆ ಬಂದು ಅಡ್ಡಿಯಾಗುತ್ತಾ ಅನ್ನೋ ಆತಂಕವಿದೆ.

ಭಾರತ ಪಾಕಿಸ್ತಾನ ಪಂದ್ಯದ ನಡುವೆ ಮಳೆ ಸುರಿಯುತ್ತಾ? ಸಂಜೆ ವೇಳೆ ಮಳೆ ಸಾಧ್ಯತೆ ಶೇಕಡಾ 13ರಷ್ಟಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ಮೋಡ ಕವಿದ ವಾತಾವರಣ ಇರಲಿದೆ ಎಂದಿದೆ. ಪಂದ್ಯ ಆರಂಭಗೊಂಡ ಬಳಿಕ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಶ್ರೀಲಂಕಾ ಹವಾಮಾನ ಇಲಾಖೆ ಹೇಳಿದೆ.

ಮಳೆ ಸಾಧ್ಯತೆ ಕುರಿತು ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ. ಮಳೆ ಕುರಿತು ನಾವು ಚಿಂತಿಸುತ್ತಿಲ್ಲ. ಕಾರಣ ಮಳೆ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ. ನಾವು ಗೇಮ್ ಬಗ್ಗೆ ಮಾತ್ರ ಫೋಕಸ್ ಮಾಡುತ್ತೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ವಾಶಿಂಗ್ಟನ್ ಸುಂದರ್, ರಿಂಕ್ ಸಿಂಕ್

ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹಮ್ಮದ್, ಬಾಬರ್ ಅಜಮ್, ಫಹೀಮ್ ಅಶ್ರಫ್, ಫಕರ್ ಜಮಾನ್, ಖ್ವಾಜ ನಾಫಿ, ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ನಸೀಮ್ ಶಾ, ಶಹೀಬ್ದಾದಾ ಫರಾನ್, ಸೈಮ್ ಅಯುಬ್, ಶಹೀನ್ ಶಾ ಆಫ್ರಿದಿ, ಶದಬ್ ಖಾನ್, ಉಸ್ಮಾನ್ ಖಾನ್, ಉಸ್ಮಾನ್ ತಾರೀಖ್

ಪಾಕಿಸ್ತಾನ

Source link
ಕೊನೆಯ ಕ್ಷಣದಲ್ಲಿ ಭಾರತ ಪಾಕ್ ಪಂದ್ಯಕ್ಕೆ ಎದುರಾಗುತ್ತಾ ವಿಘ್ನ? ತೆಲೆಕೆಡಿಸಿಕೊಳ್ಳಲ ಎಂದ ಸೂರ್ಯ