ಇಂಡೋ-ಪಾಕ್ ಹೈವೋಲ್ಟೇಜ್‌ ಮ್ಯಾಚ್‌: ಶೇಕ್‌ಹ್ಯಾಂಡ್‌ ಇರುತ್ತಾ? ಟೀಂ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹೇಳಿದ್ದೇನು?

ಇಂಡೋ-ಪಾಕ್ ಹೈವೋಲ್ಟೇಜ್‌ ಮ್ಯಾಚ್‌: ಶೇಕ್‌ಹ್ಯಾಂಡ್‌ ಇರುತ್ತಾ? ಟೀಂ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹೇಳಿದ್ದೇನು?

ಇಂಡೋ-ಪಾಕ್ ಹೈವೋಲ್ಟೇಜ್‌ ಮ್ಯಾಚ್‌: ಶೇಕ್‌ಹ್ಯಾಂಡ್‌ ಇರುತ್ತಾ? ಟೀಂ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹೇಳಿದ್ದೇನು?

ಕೊಲಂಬೊ: ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಮ್ಯಾಚ್ ಇಂದು ನಡೆಯಲಿದೆ. ಈ ಮ್ಯಾಚ್‌ನಲ್ಲಿ ಆಟಗಾರರ ನಡುವೆ ಶೇಕ್‌ಹ್ಯಾಂಡ್ ಇರುತ್ತಾ ಎನ್ನುವ ಪ್ರಶ್ನೆಗೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಉತ್ತರಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಲವು ಸರ್ಕಸ್‌ಗಳ ನಡುವೆ ಇಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಮ್ಯಾಚ್ ನಿಗದಿಯಾಗಿದೆ. ಮೊದಲು ಭಾರತದ ಮ್ಯಾಚ್ ಬಾಯ್ಕಾಟ್ ಮಾಡುವುದಾಗಿ ಬೆದರಿಸಿದ್ದ ಪಾಕಿಸ್ತಾನ, ಐಸಿಸಿ ವಾರ್ನಿಂಗ್‌ಗೆ ಬೆಚ್ಚಿಬಿದ್ದು ಇಂದು ಭಾರತ ಎದುರು ಮ್ಯಾಚ್ ಆಡಲು ಒಪ್ಪಿಕೊಂಡಿದೆ.

ಇಂದಿನ ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಇದಕ್ಕೂ ಅರ್ಧಗಂಟೆ ಮೊದಲು ಅಂದರೆ ಸಂಜೆ 6.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಈ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.

ಇನ್ನು ಕೆಲ ತಿಂಗಳ ಹಿಂದಷ್ಟೇ ನಡೆದ ಏಷ್ಯಾಕಪ್ ಟೂರ್ನಿಯ ವೇಳೆಯಲ್ಲಿ ಭಾರತೀಯ ಆಟಗಾರರು ಪಹಲ್ಗಾಂ ಉಗ್ರದಾಳಿಯನ್ನು ಖಂಡಿಸಿ ಪಾಕಿಸ್ತಾನ ಆಟಗಾರರ ಜತೆ ಹಸ್ತಲಾಘವ ಮಾಡಲು ನಿರಾಕರಿಸುತ್ತಾ ಬಂದಿದ್ದಾರೆ. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉಭಯ ದೇಶದ ಕ್ಯಾಪ್ಟನ್ಸ್ ಪ್ರತಿಕ್ರಿಯೆ ನೀಡಿದ್ದಾರೆ.

ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತೀಯ ಕ್ರಿಕೆಟಿಗರು ಪಾಕಿಸ್ತಾನ ಆಟಗಾರರಿಗೆ ಹಸ್ತಲಾಘವ ನಿರಾಕರಿಸುತ್ತಿದ್ದಾರೆ. ಭಾನುವಾರದ ಪಂದ್ಯದಲ್ಲೂ ಭಾರತೀಯರ ‘ನೋ ಶೇಕ್‌ಹ್ಯಾಂಡ್‌’ ನಿಲುವು ಬದಲಾಗುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ. ಈ ನಡುವೆ, ಉಭಯ ತಂಡಗಳ ಆಟಗಾರರು ಕೂಡಾ ಶೇಕ್‌ಹ್ಯಾಂಡ್‌ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ ಸೂರ್ಯಕುಮಾರ್‌ ಯಾದವ್‌, ‘24 ಗಂಟೆ ಕಾಯಿರಿ. ಅದರ ಬಗ್ಗೆ ಈಗ ಚಿಂತೆ ಯಾಕೆ? ನಾವು ಕ್ರಿಕೆಟ್‌ ಆಡಲು ಬಂದಿದ್ದೇವೆ’ ಎಂದಿದ್ದಾರೆ.

ಪಾಕ್‌ನ ಸಲ್ಮಾನ್‌ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಅದರ ಬಗ್ಗೆ ನಾಳೆ ನೋಡೋಣ’ ಎಂದು ಹೇಳಿದ್ದಾರೆ. ಹೀಗಾಗಿ ಇಂದು ನಡೆಯಲಿರುವ ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಶೇಕ್‌ಹ್ಯಾಂಡ್ ಇರುತ್ತೋ ಇಲ್ಲವೋ ಎನ್ನುವುದಕ್ಕೆ ಮ್ಯಾಚ್ ಮುಗಿಯುವವರೆಗೂ ಕಾಯಲೇಬೇಕಾಗಿದೆ.

Source link

Leave a Reply

Your email address will not be published. Required fields are marked *