ಅಂಡರ್-19 ಏಷ್ಯಾಕಪ್‌: ಫೈನಲ್‌ನಲ್ಲಿ ಮತ್ತೆ ಪಾಕ್ ಬಗ್ಗುಬಡಿಯಲು ಭಾರತ ಯುವ ಪಡೆ ರೆಡಿ!

ಅಂಡರ್-19 ಏಷ್ಯಾಕಪ್‌:  ಫೈನಲ್‌ನಲ್ಲಿ ಮತ್ತೆ ಪಾಕ್ ಬಗ್ಗುಬಡಿಯಲು ಭಾರತ ಯುವ ಪಡೆ ರೆಡಿ!

ಅಂಡರ್-19 ಏಷ್ಯಾಕಪ್‌:  ಫೈನಲ್‌ನಲ್ಲಿ ಮತ್ತೆ ಪಾಕ್ ಬಗ್ಗುಬಡಿಯಲು ಭಾರತ ಯುವ ಪಡೆ ರೆಡಿ!

ದುಬೈ: 12ನೇ ಆವೃತ್ತಿಯ ಅಂಡರ್‌-19 ಏಷ್ಯಾಕಪ್‌ ಫೈನಲ್‌ ಭಾನುವಾರ ನಡೆಯಲಿದ್ದು, ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಕುರಿತಾದ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ

ಆಯುಷ್ ಮಾಥ್ರೆ ನೇತೃತ್ವದ ಭಾರತ ತಂಡವು ದಾಖಲೆಯ 9ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಪಾಕ್‌ 2ನೇ ಕಪ್‌ ಗೆಲ್ಲಲು ಹೋರಾಡಲಿದೆ.

ಎರಡೂ ತಂಡಗಳು ಈ ಬಾರಿ ಒಂದೇ ಗುಂಪಿನಲ್ಲಿದ್ದವು. ಗುಂಪು ಹಂತದ ಮುಖಾಮುಖಿಯಲ್ಲಿ ಭಾರತ ತಂಡ ಪಾಕ್ ವಿರುದ್ಧ ಗೆದ್ದಿತ್ತು.

ಆಡಿದ 3 ಪಂದ್ಯಗಳಲ್ಲೂ ಗೆದ್ದು ನಾಕೌಟ್‌ಗೇರಿದ್ದ ಭಾರತ, ಶುಕ್ರವಾರ ಸೆಮಿಫೈನಲ್‌ನಲ್ಲಿ ಶ್ರೀಲಂಕಾವನ್ನು ಮಣಿಸಿದೆ.

ಮತ್ತೊಂದೆಡೆ 3 ಪಂದ್ಯಗಳ ಪೈಕಿ 2ರಲ್ಲಿ ಗೆದ್ದು ಸೆಮೀಸ್‌ಗೇರಿದ್ದ ಪಾಕಿಸ್ತಾನ, ಬಾಂಗ್ಲಾದೇಶವನ್ನು ಸೋಲಿಸಿ ಫೈನಲ್‌ಗೇರಿದೆ. ಭಾರತ ತಂಡ 2021ರಲ್ಲಿ ಕೊನೆ ಬಾರಿ ಟ್ರೋಫಿ ಗೆದ್ದಿತ್ತು. ಇದೀಗ 4 ವರ್ಷಗಳ ಮತ್ತೊಮ್ಮೆ ಕಪ್‌ ಗೆಲ್ಲುವ ವಿಶ್ವಾಸದಲ್ಲಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಅಂಡರ್ 19 ಏಷ್ಯಾಕಪ್ ಫೈನಲ್‌ ಪಂದ್ಯವು ಇಂದು 10.30ಕ್ಕೆ ಆರಂಭವಾಗಲಿದ್ದು, ಸೋನಿ ಸ್ಪೋರ್ಟ್ಸ್‌ ಹಾಗೂ ಸೋನಿ ಲೈವ್‌ನಲ್ಲಿ ಪ್ರಸಾರವಾಗಲಿದೆ.

ಭಾರತ-ಪಾಕ್‌ ತಂಡಗಳು ಏಷ್ಯಾಕಪ್‌ ಫೈನಲ್‌ನಲ್ಲಿ 3ನೇ ಬಾರಿ ಮುಖಾಮುಖಿಯಾಗುತ್ತಿವೆ. 2012ರ ಫೈನಲ್‌ ಟೈ ಆಗಿ ಟ್ರೋಫಿ ಹಂಚಿಕೊಳ್ಳಲಾಗಿತ್ತು. 2013-14ರಲ್ಲಿ ಭಾರತ ಗೆದ್ದಿತ್ತು.

Source link

Leave a Reply

Your email address will not be published. Required fields are marked *