ಭಾರತ vs ಸೌತ್ ಆಫ್ರಿಕಾ 2ನೇ ಟಿ20 ಪಂದ್ಯ ಯಾವಾಗ, ಎಲ್ಲಿ?

ಭಾರತ vs ಸೌತ್ ಆಫ್ರಿಕಾ 2ನೇ ಟಿ20 ಪಂದ್ಯ ಯಾವಾಗ, ಎಲ್ಲಿ?


ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 5 ಪಂದ್ಯಗಳ ಟಿ20 ಸರಣಿಯು ಆರಂಭವಾಗಿದೆ. ಈ ಸರಣಿಯ ಮೊದಲ ಪ್ರದರ್ಶನ ಸೌತ್ ಆಫ್ರಿಕಾ ತಂಡವನ್ನು ಹೀನಾಯವಾಗಿ ಸೋಲಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಇದೀಗ ಉಭಯ ತಂಡಗಳು ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಈ ಪಂದ್ಯ ಯಾವಾಗ? ಎಲ್ಲಿ? ಎಷ್ಟು ಗಂಟೆಗೆ ಶುರು? ಎಂಬಿತ್ಯಾದಿ ಮಾಹಿತಿಗಳು ಈ ಕೆಳಗಿನಂತಿದೆ…

ಭಾರತ vs ಸೌತ್ ಆಫ್ರಿಕಾ 2ನೇ ಟಿ20 ಪಂದ್ಯ ಯಾವಾಗ?

ಐದು ಪಂದ್ಯಗಳ ಸರಣಿಯ ದ್ವಿತೀಯ ಮ್ಯಾಚ್ ಡಿಸೆಂಬರ್ 11 ರಂದು. ಅಂದರೆ ಗುರುವಾರ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗಲಿದೆ.

ದ್ವಿತೀಯ ಪಂದ್ಯ ನಡೆಯುವುದು ಎಲ್ಲಿ?

ಭಾರತ vs ಸೌತ್ ಆಫ್ರಿಕಾ ನಡುವಣ 2ನೇ ಟಿ20 ಪಂದ್ಯವು ಚಂಡೀಗಢದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಮುಲ್ಲನ್‌ಪುರದಲ್ಲಿರುವ ಪಿಸಿಎ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಭಾರತ-ಸೌತ್ ಆಫ್ರಿಕಾ ನಡುವಣ ಪಂದ್ಯಗಳು ಎಷ್ಟು ಗಂಟೆಗೆ ಶುರು?

ಈ ಸರಣಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಿದೆ. ಇನ್ನು ಟಾಸ್ ಪ್ರಕ್ರಿಯೆಯು 6.30ಕ್ಕೆ ಸರಿಯಾಗಿ.

ಯಾವ ಚಾನೆಲ್ ನಲ್ಲಿ ನೇರ ಪ್ರಸಾರ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿಯ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಇರಲಿದೆ. ಇದರ ಜೊತೆಗೆ ಜಿಯೋ ಹಾಟ್ ಸ್ಟಾರ್ ವೆಬ್‌ಸೈಟ್ ಮತ್ತು ಆಯಪ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.

ಉಭಯ ತಂಡಗಳು:

ಸೌತ್ ಆಫ್ರಿಕಾ ಟಿ20 ತಂಡ: ಐಡನ್ ಮಾರ್ಕ್‌ರಾಮ್ (ನಾಯಕ), ಓಟ್ನಿಲ್ ಬಾರ್ಟ್‌ಮನ್, ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಡೊನೊವನ್ ಫೆರೇರಾ, ರೀಸ್ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಜಾರ್ಜ್ ಲಿಂಡೆ, ಲುಂಗಿ ಎನ್‌ಡಿಗಿಯಮ್ ಟ್ರಿಸ್ಟನ್ ಸ್ಟಬ್ಸ್.

ಇದನ್ನೂ ಓದಿ: ಕೇವಲ ೧ ರನ್ ನಿಂದ ವಿಶ್ವ ದಾಖಲೆ ತಪ್ಪಿಸಿಕೊಂಡ ಟೀಮ್ ಇಂಡಿಯಾ

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ಚಕ್ರವರ್ತಿ, ಹರ್ಷಿತ್ ಚಕ್ರವರ್ತಿ.



Source link

Leave a Reply

Your email address will not be published. Required fields are marked *