Headlines

Ind vs SA: ಟೈಮಿಂಗ್ಸ್‌ನಲ್ಲಿ ಬದಲಾವಣೆ, ಇಷ್ಟು ಗಂಟೆಯಿಂದ ಆರಂಭವಾಗತ್ತೇ ಎರಡನೇ ಟೆಸ್ಟ್ ಮ್ಯಾಚ್!

Ind vs SA: ಟೈಮಿಂಗ್ಸ್‌ನಲ್ಲಿ ಬದಲಾವಣೆ, ಇಷ್ಟು ಗಂಟೆಯಿಂದ ಆರಂಭವಾಗತ್ತೇ ಎರಡನೇ ಟೆಸ್ಟ್ ಮ್ಯಾಚ್!

Ind vs SA: ಟೈಮಿಂಗ್ಸ್‌ನಲ್ಲಿ ಬದಲಾವಣೆ, ಇಷ್ಟು ಗಂಟೆಯಿಂದ ಆರಂಭವಾಗತ್ತೇ ಎರಡನೇ ಟೆಸ್ಟ್ ಮ್ಯಾಚ್!

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಮುಕ್ತಾಯವಾಗಿದ್ದು, ಇದೀಗ ಎರಡನೇ ಪಂದ್ಯ ಯಾವಾಗ ಆರಂಭವಾಗಲಿದೆ? ಟೈಮಿಂಗ್ಸ್‌ನಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ? ಎಲ್ಲಿ ನೇರಪ್ರಸಾರ ವೀಕ್ಷಿಸಬಹುದು ತಿಳಿಯೋಣ ಬನ್ನಿ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ 30 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ತೆಂಬಾ ಬವುಮಾ ನೇತೃತ್ವದ ಹರಿಣಗಳ ಪಡೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಇದೀಗ ಎರಡನೇ ಟೆಸ್ಟ್‌ ಪಂದ್ಯವು ಇದೇ ನವೆಂಬರ್ 22ರ ಶನಿವಾರ ಗುವಾಹಟಿಯಲ್ಲಿ ಆರಂಭವಾಗಲಿದೆ. ಈ ಪಂದ್ಯ ಗೆದ್ದು ಸರಣಿ ಸಮಬಲ ಮಾಡಿಕೊಳ್ಳಲು ಟೀಂ ಇಂಡಿಯಾ ಎದುರು ನೋಡುತ್ತಿದೆ.

ಇನ್ನು ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದ ಆರಂಭದ ಸಮಯದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಮೊದಲ ಟೆಸ್ಟ್ ಪಂದ್ಯವು ಭಾರತೀಯ ಕಾಲಮಾನ ಬೆಳಗ್ಗೆ 9.30ಕ್ಕೆ ಆರಂಭವಾಗಿತ್ತು. ಇದೀಗ ಎರಡನೇ ಟೆಸ್ಟ್ ಪಂದ್ಯವು ಅರ್ಧಗಂಟೆ ಮುಂಚಿತವಾಗಿ ಆರಂಭವಾಗಲಿದೆ. ಇದಕ್ಕೆ ಕಾರಣವೂ ಇದೆ.

ಗುವಾಹಟಿಯಲ್ಲಿ ಬೇಗನೇ ಕತ್ತಲು ಆವರಿಸುವುದರಿಂದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯವನ್ನು ಅರ್ಧಗಂಟೆ ಮುಂಚಿತವಾಗಿ ಅಂದರೆ ಬೆಳಗ್ಗೆ 9 ಗಂಟೆಯಿಂದ ಆರಂಭಿಸಲು ತೀರ್ಮಾನಿಸಲಾಗಿದೆ.

ಪಂದ್ಯವು ಭಾರತೀಯ ಕಾಲಮಾನ 9 ಗಂಟೆಯಿಂದ ಆರಂಭವಾಗುವುದರಿಂದ ಟಾಸ್ ಕೂಡಾ ಅರ್ಧಗಂಟೆ ಮುಂಚಿತವಾಗಿ ಅಂದರೆ ಭಾರತೀಯ ಕಾಲಮಾನ 8.30ಕ್ಕೆ ನಡೆಯಲಿದೆ. ಮೊದಲ ಸೆಷನ್ 9 ಗಂಟೆಯಿಂದ ಆರಂಭವಾಗಲಿದ್ದು, ಸಂಜೆ ನಾಲ್ಕು ಗಂಟೆಗೆ ದಿನದಾಟ ಮುಕ್ತಾಯವಾಗಲಿದೆ.

ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವು ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಇನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿಯೂ ಈ ಟೆಸ್ಟ್ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ದಕ್ಷಿಣ ಆಫ್ರಿಕಾ ತಂಡವು ಇದುವರೆಗೂ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ, ಆದರೆ ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಡ್ರಾ ಮಾಡಿಕೊಂಡರೂ ಟೆಸ್ಟ್ ಸರಣಿ ಹರಿಣಗಳ ಪಾಲಾಗಲಿದೆ.

Source link

Leave a Reply

Your email address will not be published. Required fields are marked *