ಟೆಸ್ಟ್ ಸರಣಿಯಲ್ಲಿನ ಹೀನಯಾ ಸೋಲಿನ ಬಳಿಕ ಭಾರತ ತಂಡ ಏಕದಿನ ಸರಣಿಯಲ್ಲಿ ಸೌತ್ ಆಫ್ರಿಕಾ ತಂಡವನ್ನು ಎದುರಿಸಲು ಸಜ್ಜಾಗಿದೆ. ಇಂದಿನಿಂದ (ನ.30) ಶುರುವಾಗಲಿರುವ ಈ ಸರಣಿಯ ಮೊದಲ ಪಂದ್ಯಕ್ಕೆ ರಾಂಚಿಯ ಜೆಎಸ್‌ಸಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಎಷ್ಟು ಗಂಟೆಗೆ ಮ್ಯಾಚ್ ಶುರು?
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿಯು ಮಧ್ಯಾಹ್ನ 2 ಗಂಟೆಯಿಂದ ಶುರುವಾಗಿದೆ. ಇದಕ್ಕೂ ಮುನ್ನ 1.30 ಕ್ಕೆ ಟಾಸ್ ಪ್ರಕ್ರಿಯೆ.
ಯಾವ ಚಾನೆಲ್‌ನಲ್ಲಿ ಲೈವ್ ವೀಕ್ಷಿಸಬಹುದು?
ಈ ಸರಣಿಯ ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಲೈವ್ ವೀಕ್ಷಿಸಬಹುದು. ಜೊತೆಗೆ ಜಿಯೋ ಹಾಟ್ ಸ್ಟಾರ್ ಆಯಪ್ ಹಾಗೂ ವೆಬ್ ಸೈಟ್ ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ.
ಈ ಸರಣಿಯಲ್ಲಿ ಎಷ್ಟು ಪಂದ್ಯಗಳು ಮುಖ್ಯವಾಗಿ?
ಭಾರತ ಮತ್ತು ಸೌತ್ ಆಫ್ರಿಕಾ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ. ಮೊದಲ ಮ್ಯಾಚ್ ಇಂದು (ನ.30) ರಾಂಚಿಯಲ್ಲಿ ನಡೆಯಿತು, ದ್ವಿತೀಯ ಪಂದ್ಯವು ರಾಯಪುರದಲ್ಲಿ ನಡೆಯಿತು. ಇನ್ನೂ ಕೊನೆಯ ಮ್ಯಾಚ್‌ಗೆ ವಿಶಾಖಪಟ್ಟಣದ ಎಸ್‌ಐಎ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಸರಣಿಯ ಕೆಳಗಿನಂತಿದೆ…
- ಮೊದಲ ಏಕದಿನ ಪಂದ್ಯ- ನವೆಂಬರ್ 30 – ರಾಂಚಿ (ಮಧ್ಯಾಹ್ನ 2:00 PM)
- ಎರಡನೇ ಏಕದಿನ ಪಂದ್ಯ- ಡಿಸೆಂಬರ್ 03 – ರಾಯಪುರ (ಮಧ್ಯಾಹ್ನ 2:00 PM)
- 3ನೇ ಏಕದಿನ ಪಂದ್ಯ ಡಿಸೆಂಬರ್ 06 – ವಿಶಾಖಪಟ್ಟಣಂ (ಮಧ್ಯಾಹ್ನ 2:00 PM)
ಉಭಯ ತಂಡಗಳು:
ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ರುತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಧ್ರುರಾಜ್ ಸಿಂಗ್.
ಇದನ್ನೂ ಓದಿ: ಟ್ರಾವಿಸ್ ಹೆಡ್ ಸಿಡಿಲಬ್ಬರದಿಂದ ಆಸ್ಟ್ರೇಲಿಯಾಗೆ 17 ಕೋಟಿ ರೂ. ನಷ್ಟ!
ಸೌತ್ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಒಟ್ನೀಲ್ ಬಾರ್ಟ್‌ಮ್ಯಾನ್, ಕಾರ್ಬಿನ್ ಬಾಷ್, ಮ್ಯಾಥ್ಯೂ ಬ್ರೀಟ್ಜ್‌ಕೆ, ಡೆವಾಲ್ಡ್ ಬ್ರೆವಿಸ್, ನಾಂಡ್ರೆ ಬರ್ಗರ್, ಕ್ವಿಂಟನ್ ಡಿ ಕಾಕ್, ಟೋನಿ ಡಿ ಝೋರ್ಝಿ, ರೂಬಿನ್ ಹರ್ಮನ್, ಕೇಶವ್ ಮಹಾರಾಜ್, ಮಾರ್ಕೊ ಎನ್‌ಸೆನ್, ಐಡೆನ್ ಮಾರ್ಕ್, ಐಡೆನ್ ಮಾರ್ಕ್ ಪ್ರೆನೆಲನ್ ಸುಬ್ರಯೆನ್.