Headlines

IND vs SA: ಭಾರತ- ದಕ್ಷಿಣ ಆಫ್ರಿಕಾ ನಡುವೆ 5 ಪಂದ್ಯಗಳ ಟಿ20 ಸರಣಿ; ವೇಳಾಪಟ್ಟಿ ಪ್ರಕಟ

IND vs SA: ಭಾರತ- ದಕ್ಷಿಣ ಆಫ್ರಿಕಾ ನಡುವೆ 5 ಪಂದ್ಯಗಳ ಟಿ20 ಸರಣಿ; ವೇಳಾಪಟ್ಟಿ ಪ್ರಕಟ


IND vs SA: ಭಾರತ- ದಕ್ಷಿಣ ಆಫ್ರಿಕಾ ನಡುವೆ 5 ಪಂದ್ಯಗಳ ಟಿ20 ಸರಣಿ; ಪ್ರಕಟ

2025 ರ ಮಹಿಳಾ ಏಕದಿನ ಗೆದ್ದ ತಂಡ ಬಳಿಕ ಆಸ್ಟ್ರೇಲಿಯಾ ಪ್ರವಾಸ ಭಾರತ ಮಹಿಳಾ ಟಿ20 ಸರಣಿ, ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಸೋತಿತ್ತು. ಇದೀಗ ಹೊಸ ಪ್ರವಾಸಕ್ಕೆ ಸಜ್ಜಾಗಿರುವ ವನಿತಾ ಪಡೆ, ಐದು ಪಂದ್ಯಗಳ ಟಿ20 ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮಾಡಲಿದೆ. ಈ ಪ್ರವಾಸಕ್ಕಾಗಿ ಇದೀಗ ಬಿಸಿಸಿಸಿ, ತಂಡವನ್ನು ಸಹ ಪ್ರಕಟಿಸಿದೆ. ಈ ಪ್ರವಾಸಕ್ಕೆ 15 ಆಟಗಾರರ ತಂಡವನ್ನು ಘೋಷಿಸಿದ್ದು, ಎಂದಿನಂತೆ ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದಾರೆ.

ಇಬ್ಬರು ಆಟಗಾರರಿಗೆ ಮೊದಲ ಅವಕಾಶ

ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದೆ, ಇದಕ್ಕಾಗಿ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಪ್ರವಾಸಕ್ಕಾಗಿ ಮೊದಲ ಬಾರಿಗೆ ಟಿ20 ತಂಡಕ್ಕೆ ಇಬ್ಬರು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಈ ಇಬ್ಬರು ಆಟಗಾರ್ತಿಯರೆಂದರೆ ಕಾಶ್ವಿ ಗೌತಮ್ ಮತ್ತು ಅನುಷ್ಕಾ ಶರ್ಮಾ.

ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್, ಅರುಂಧತಿ ರೆಡ್ಡಿ, ರೇಣುಕಾ ಠಾಕೂರ್, ಕ್ರಾಂತಿಗೌಡ, ಶ್ರೀ ಚರಣಿ, ಶ್ರೇಯಂಕಾ ಪಾಟೀಲ್, ಕಾಶ್ವಿ ಗೌತಮ್, ಭಾರತಿ ಫುಲ್ಮಾಲಿ, ಭಾರತಿ ಫುಲ್ಮಾಲಿ.

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸವು ಏಪ್ರಿಲ್ 17 ರಂದು ನಡೆಯಲಿದೆ. ಪ್ರವಾಸವು ಐದು ಪಂದ್ಯಗಳ ಟಿ20 ಸರಣಿಯನ್ನು ಒಳಗೊಂಡಿದ್ದು, ಅಂತಿಮ ಪಂದ್ಯ ಏಪ್ರಿಲ್ 27 ರಂದು ನಡೆಯಲಿದೆ. ಮೊದಲ ಎರಡು ಪಂದ್ಯಗಳು ಏಪ್ರಿಲ್ 17 ಮತ್ತು 19 ರಂದು ಡರ್ಬನ್‌ನಲ್ಲಿ ನಡೆಯಲಿವೆ. ಮುಂದಿನ ಎರಡು ಪಂದ್ಯಗಳು ಏಪ್ರಿಲ್ 22 ಮತ್ತು 25 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿವೆ. ಸರಣಿಯ ಅಂತಿಮ ಪಂದ್ಯ ಏಪ್ರಿಲ್ 27 ರಂದು ಬೆನೋನಿಯಲ್ಲಿ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *