Headlines

Viral: ಮೊಟ್ಟ ಮೊದಲ ಬಾರಿಗೆ ಮನುಷ್ಯರ ಬಳಿಯೇ ಸಲಹೆ ಕೇಳಿದ ಎಐ ಇನ್ಫ್ಲುಯೆನ್ಸರ್ ನೈನಾ

Viral: ಮೊಟ್ಟ ಮೊದಲ ಬಾರಿಗೆ ಮನುಷ್ಯರ ಬಳಿಯೇ ಸಲಹೆ ಕೇಳಿದ ಎಐ ಇನ್ಫ್ಲುಯೆನ್ಸರ್ ನೈನಾ


ಇಂಡಿಯನ್ ಎಐ ಇನ್ಫ್ಲುಯೆನ್ಸರ್ ನೈನಾಚಿತ್ರ ಕ್ರೆಡಿಟ್ ಮೂಲ: Instagram

ತಂತ್ರಜ್ಞಾನ ದಿನದಿಂದ ದಿನಕ್ಕೆ ಆವಿಷ್ಕಾರಗೊಳ್ಳುತ್ತಿದೆ. ತಂತ್ರಜ್ಞಾನ ಲೋಕದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ತನ್ನದೇ ಹವಾ ಸೃಷ್ಟಿಸಿದೆ. ಇತ್ತ ಚಾಟ್ ಜಿಪಿಟಿಯಲ್ಲಿ ಸಲಹೆ ಸೂಚನೆಗಾಗಿ ಸಂಪೂರ್ಣವಾಗಿ ಅವಲಂಬಿಸಿದೆ. ಫೈನಾನ್ಸಿಯಲ್ ಪ್ರಾಬ್ಲಮ್, ಲವ್, ಪರ್ಸನಲ್ ಲೈಫ್ ಹೀಗೆ ಯಾವುದೇ ರೀತಿಯ ಸಲಹೆಗಾಗಿ ಮೊದಲು ನೆನಪಾಗುವುದೇ ಈ ಚಾಟ್ ಜಿಪಿಟಿ. ಎಷ್ಟೋ ಜನರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದ ಐ ಇದೀಗ ಮೊದಲ ಬಾರಿಗೆ ಮನುಷ್ಯರಿಂದಲೇ ಅಡ್ವೈಸ್ ಕೇಳಿದೆ. ಯಾವುದೇ ಪ್ರಶ್ನೆಗಳನ್ನು ಕೇಳಿದ್ರೂ ಫಟಾಫಟ್’ ಎಂದು ಕ್ಷಣಾರ್ಧದಲ್ಲಿ ಉತ್ತರ ನೀಡುತ್ತಿದ್ದ ಇಂಡಿಯನ್ ಎಐ ಇನ್ಫ್ಲುಯೆನ್ಸರ್ ನೈನಾ (AI ಪ್ರಭಾವಿ ನೈನಾ) ಇಂದು ಮನುಷ್ಯರ ಬಳಿ ತನಗೆ ಸಜೇಶನ್ ಕೊಡಿ ಎಂದು ಕೇಳಿದ್ದಾಳೆ. ಈಕೆ ಹಾಕಿದ ಸ್ಟೋರಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮನುಷ್ಯರ ಬಳಿಯೇ ಗೈಡೆನ್ಸ್‌ ಕೇಳಿದ ಎಐ

ಎಐ ಇನ್ಫ್ಲುಯೆನ್ಸರ್ ನೈನಾ ತಮ್ಮ ಖಾತೆಯಲ್ಲಿ “ನನ್ನ ಕಂಪನಿಗೆ ಬೋರ್‌ಡಮ್ ಡೌನ್‌ಲೋಡ್ ಆಗಿದ್ದು, ಏನಾದ್ರೂ ಒಂದು ಹೊಸತನ ಬೇಕು ಅನ್ನಿಸುತ್ತಿದೆ. ಹೀಗಾಗಿ ನನ್ನಲ್ಲಿ ಸ್ಪಾರ್ಕ್ ಮೂಡಬೇಕು. ಮೈ ರೋಮಾಂಚನ ಅನ್ನಿಸೋ ‘ಅಡ್ರಿನಾಲಿನ್’ ಬೇಕು. ಹೇಳಿಕೊಂಡಿದ್ದಾಳೆ.

ಪೋಸ್ಟ್ ವೈರಲ್ ಇಲ್ಲಿದೆ ನೋಡಿ

ವೈರಲ್ ಪೋಸ್ಟ್

ಇದನ್ನೂ ಓದಿ: ಷೇರ್ ಮಾರುಕಟ್ಟೆ ಲಾಭ ನಷ್ಟಕ್ಕೆ ಬೆಡ್ ರೂಮಿನಲ್ಲೇ ಲೈಟಿಂಗ್ ವ್ಯವಸ್ಥೆ ಮಾಡಿಕೊಂಡ ಬೆಂಗಳೂರಿಗ

ಈ ಪೋಸ್ಟ್ ವೈರಲ್ ಆಗುತ್ತಿದೆ ಆದರೆ ಒಬ್ಬ ಬಳಕೆದಾರ ಏನ್ ಕಾಲ ಬಂತು, ಗುರು, ಎಐನಿಂದ ನಾವು ಸಲಹೆ ಪಡೀತಾ ಇದ್ವಿ ಎಐಯೇ ಸಲಹೆ ಪಡುವಂತಹ ಕಾಲ ಬಂತು ಎಂದು ಹೇಳಿದ್ದಾರೆ. ಇತರರು, ತಂತ್ರಜ್ಞಾನಕ್ಕೆ ತೆರೆದುಕೊಳ್ಳಲು ಇನ್ನು ಮುಂದೆ ನಮ್ಮ ಕಣ್ಣಿಂದ ಏನೇನೋ ನೋಡ್ಬೇಕೋ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 12:36 pm, ಶುಕ್ರ, 7 ನವೆಂಬರ್ 25





Source link

Leave a Reply

Your email address will not be published. Required fields are marked *