Headlines

Vehicle sales: ನವೆಂಬರ್​ನಲ್ಲಿ ವಾಹನಗಳ ಮಾರಾಟ ಹೆಚ್ಚಳ; ಡಿಸೆಂಬರ್​ನಲ್ಲೂ ಇದೇ ಟ್ರೆಂಡ್

Vehicle sales: ನವೆಂಬರ್​ನಲ್ಲಿ ವಾಹನಗಳ ಮಾರಾಟ ಹೆಚ್ಚಳ; ಡಿಸೆಂಬರ್​ನಲ್ಲೂ ಇದೇ ಟ್ರೆಂಡ್


ನವೆಂಬರ್, ಡಿಸೆಂಬರ್ 9: ಭಾರತದಲ್ಲಿ ನವೆಂಬರ್ ತಿಂಗಳ ವಾಹನೋದ್ಯಮಕ್ಕೆ (ಆಟೋಮೊಬೈಲ್ ಉದ್ಯಮ) ಪಾಸಿಟಿವ್ ಆಗಿದೆ. ಆ ತಿಂಗಳು ಭಾರತದಲ್ಲಿ ಒಟ್ಟಾರೆ ವಾಹನಗಳ ಮಾರಾಟದಲ್ಲಿ (ವಾಹನಗಳ ಮಾರಾಟ) ಶೇ. 2.14ರಷ್ಟು ಆಗಿದೆ. ದ್ವಿಚಕ್ರ ವಾಹನಗಳ ಸೇಲ್ಸ್ ಕಡಿಮೆ ಆಗಿದ್ದಾಗ್ಯೂ ಒಟ್ಟಾರೆ ಮಾರಾಟ ಏರಿಕೆಯಾಗಿರುವುದು ಗಮನಾರ್ಹ. ಕಾರು, ಬಸ್ಸು ಮೊದಲಾದ ಪ್ಯಾಸೆಂಜರ್ ಮತ್ತು ಕಮರ್ಷಿಯಲ್ ವಾಹನಗಳಿಗೆ ಬೇಡಿಕೆ ಹೆಚ್ಚಿದೆ. ವಾಹನಗಳ ಮೇಲೆ ಜಿಎಸ್ ಟಿ ದರವನ್ನು ಕಡಿಮೆಗೊಳಿಸಿದ ಪ್ರತಿಫಲ ಇದು ಎಂದೆನ್ನುತ್ತಿದೆ. ಡೀಲರ್‌ಗಳ ಪ್ರಕಾರ, ಇದೇ ಪಾಸಿಟಿವ್ ಟ್ರೆಂಡ್ ಡಿಸೆಂಬರ್‌ನಲ್ಲೂ ಮುಂದುವರಿಯಲಿದೆ.

ಅಕ್ಟೋಬರ್ ತಿಂಗಳವರೆಗೆ ಭಾರತದಲ್ಲಿ ಹಬ್ಬದ ಪ್ರಸ್ತುತ ಇದೆ. ಆಫರ್‌ಗಳ ಕಾರಣ ವಾಹನಗಳ ಮಾರಾಟವೂ ಭರ್ಜರಿಯಾಗಿಯೇ ಇರುತ್ತದೆ. ಆದರೆ, ನವೆಂಬರ್‌ನಲ್ಲಿ ಮಾರಾಟ ಸ್ವಲ್ಪ ಕುಂಠಿತವಾಗಿದೆ. ಆದರೆ, ಈ ಬಾರಿಯ ವಾಹನಗಳ ಮಾರಾಟ ಹೆಚ್ಚಿರುವುದು ಗಮನಾರ್ಹ.

ಸೆಪ್ಟೆಂಬರ್ ಕೊನೆಯಲ್ಲಿ ಜಿಎಸ್ಟಿ ದರ ಕಡಿತ

ಸೆಪ್ಟೆಂಬರ್ ತಿಂಗಳಿನಲ್ಲಿ ವಾಹನಗಳ ಮೇಲಿನ ಜಿಎಸ್ಟಿ ದರಗಳನ್ನು ಸರ್ಕಾರ ಪರಿಷ್ಕರಿಸಿತ್ತು. ಸಣ್ಣ ಕಾರುಗಳ ಮೇಲೆ ಜಿಎಸ್ಟಿ ಶೇ. 28 ರಿಂದ ಶೇ. 18ಕ್ಕೆ ಇಳಿಸಲಾಯಿತು. 1,500 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಇರುವ ಎಸ್ ಯುವಿಗಳ ಮೇಲಿನ ಜಿಎಸ್ ಟಿಯನ್ನು ಶೇ. 50 ರಿಂದ ಶೇ. 40ಕ್ಕೆ ಇಳಿಸಲಾಗಿದೆ.

ಇದನ್ನೂ ಓದಿ: ಮನೆಯಲ್ಲಿ ತಯಾರಿಸುವ ಸಸ್ಯಾಹಾರ, ಮಾಂಸಾಹಾರ ಅಡುಗೆ ವೆಚ್ಚದಲ್ಲಿ ಇಳಿಕೆ; ತರಕಾರಿ, ಕೋಳಿ ಬೆಲೆ ಇಳಿಕೆ ಪರಿಣಾಮ

ಇದರ ಪರಿಣಾಮವಾಗಿ ಅಕ್ಟೋಬರ್ ತಿಂಗಳಿನಲ್ಲಿ ವಾಹನಗಳ ರೀಟೇಲ್ ಮಾರಾಟದಲ್ಲಿ ದಾಖಲೆಯ ಶೇ. 40.5ರಷ್ಟು ಏರಿಕೆಯಾಗಿದೆ. ತೆರಿಗೆ ಕಡಿತದ ಜೊತೆಗೆ ಫೆಸ್ಟಿವಲ್ ಸೀಸಲ್ ಇದ್ದದ್ದು ಕೂಡ ಅಕ್ಟೋಬರ್ ನಲ್ಲಿ ವಾಹನ ಮಾರಾಟಕ್ಕೆ ಧಮಾಕ.

ನವೆಂಬರ್ ತಿಂಗಳಿನಲ್ಲಿ ಒಟ್ಟಾರೆ ವಾಹನಗಳ ರೀಟೇಲ್ ಮಾರಾಟ ಶೇ. 2.14ರಷ್ಟು ಏರಿಕೆಯಾಗಿದೆ. ಆದರೆ, ಈ ಅವಧಿಯಲ್ಲಿ ದ್ವಿಚಕ್ರ ವಾಹನಗಳ ಸೇಲ್ಸ್ ಶೇ. 3.1ರಷ್ಟು ಕಡಿಮೆ ಆಗಿದೆ. ಭಾರತದ ವಾಹನ ಮಾರಾಟದಲ್ಲಿ ಮುಕ್ಕಾಲು ಪಾಲು ದ್ವಿಚಕ್ರ ವಾಹನಗಳೇ ಇರುತ್ತವೆ. ಆದಾಗ್ಯೂ ಸಾಮಾನ್ಯ ವಾಹನ ಮಾರಾಟ ಹೆಚ್ಚಿರುವುದು ಗಮನಾರ್ಹ.

ಇದನ್ನೂ ಓದಿ: ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ತಯಾರಕರಲ್ಲಿ ಭಾರತದ ಮೂರು ಕಂಪನಿಗಳು

ಆಟೊಮೊಬೈಲ್ ಡೀಲರ್‌ಗಳ ಸಂಘಟನೆಯಾದ ಫಾಡಾ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ನವೆಂಬರ್‌ನಲ್ಲಿ 33 ಲಕ್ಷ ಹೊಸ ವಾಹನಗಳು ನೋಂದಾವಣಿ ಆಗಿವೆ. ಪ್ಯಾಸೆಂಜರ್ ವಾಹನಗಳ ಸೇಲ್ಸ್ ಶೇ. 19.7ರಷ್ಟು ಏರಿಕೆ ಆಗಿದೆ. ಕಮರ್ಷಿಯಲ್ ವಾಹನಗಳ ಮಾರಾಟ ಶೇ. 19.94 ಮತ್ತು ಟ್ರಾಕ್ಟರ್‌ಗಳ ಮಾರಾಟ ಶೇ. 56.55ರಷ್ಟು ಏರಿಕೆಯಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *