ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರ ಪ್ರೇಮಕಥೆ ಫೇಸ್ಬುಕ್ನಲ್ಲಿ ಒಂದು ‘Hi’ ಸಂದೇಶದಿಂದ ಪ್ರಾರಂಭವಾಯಿತು. ಹಿಂದೂ ಧರ್ಮದ ಚಾರುಲತಾ ಮತ್ತು ಕ್ರೈಸ್ತ ಸಮುದಾಯದ ಸಂಜು, ತಮ್ಮ ಕುಟುಂಬಗಳನ್ನು ಒಪ್ಪಿಸಿ ಅಂತರ್ಧರ್ಮೀಯ ವಿವಾಹವಾದರು.

ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲು ಭಾರತ ಸಜ್ಜಾಗುತ್ತಿದೆ. ಇಂಗ್ಲೆಂಡ್ ವಿರುದ್ಧ ಓಪನರ್ ಸಂಜು ಸ್ಯಾಮ್ಸನ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲಿಷ್ ವೇಗಿ ಜೋಫ್ರಾ ಆರ್ಚರ್ ಅವರ ಬೌಲಿಂಗ್ ದಾಳಿಯನ್ನು ಸಂಜು ಹೇಗೆ ಎದುರಿಸುತ್ತಾರೆ ಎಂದು ಕಾಯುತ್ತಿದ್ದಾರೆ ಫ್ಯಾನ್ಸ್.

ಕ್ರಿಕೆಟ್ ಅಂಗಳದಲ್ಲಿ ಏಳು-ಬೀಳು ಸಹಜವೇ. ಆದರೆ ಇದರ ನಡುವೆಯೇ, ಸಂಜು ಸ್ಯಾಮ್ಸನ್ ಅವರ ರೋಚಕ ಲವ್ ಸ್ಟೋರಿ ಈಗ ಸದ್ದು ಮಾಡುತ್ತಿದೆ. ಕ್ರೈಸ್ತ ಸಮುದಾಯದವರಾಗಿರುವ ಸಂಜು ಅವರು ಹಿಂದೂ ಧರ್ಮದವರಾದ ಚಾರುಲತಾ ಅವರೊಂದಿಗೆ ಹೇಗೆ ಲವ್ನಲ್ಲಿ ಬಿದ್ದು, ಕೊನೆಗೆ ಮದುವೆಯಾದರು ಎನ್ನುವ ರೋಚಕ ಲವ್ ಸ್ಟೋರಿ ಇದಾಗಿದೆ.

ಫೇಸ್ಬುಕ್ನಲ್ಲಿ Hi ಯಿಂದು ಶುರುವಾಗಿತ್ತು ಇವರ ಸ್ನೇಹ. ಅವರ ಸಂಭಾಷಣೆ ಸ್ನೇಹವಾಗಿ, ನಂತರ ಪ್ರೀತಿಯಾಗಿ ಅರಳಿತು. ಸಂಜು ಮತ್ತು ಚಾರುಲತಾ ತಮ್ಮ ಕುಟುಂಬಗಳನ್ನು ಮನವೊಲಿಸಿ ನಂತರ ವಿವಾಹವಾದರು. ಅವರ ವಿಭಿನ್ನ ಧಾರ್ಮಿಕ ಹಿನ್ನೆಲೆಗಳ ಹೊರತಾಗಿಯೂ, ಅವರ ಬಂಧವು ಬಲವಾಯಿತು, ಪ್ರೀತಿಗೆ ಯಾವುದೇ ಮಿತಿಗಳಿಲ್ಲ ಎಂದು ಸಾಬೀತುಪಡಿಸಿತು.

ಸಂಜು ಸ್ಯಾಮ್ಸನ್ ಮತ್ತು ಚಾರುಲತಾ ರಮೇಶ್ ಅವರ ಪ್ರೇಮಕಥೆ ತಿರುವನಂತಪುರದ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಪ್ರಾರಂಭವಾಯಿತು. ಅವರು ಮೊದಲು ಭೇಟಿಯಾದದ್ದು ಅಲ್ಲಿಯೇ. ಆದರೆ ಲವ್ಸ್ಟೋರಿ ಮುಂದುವರೆದಿರಲಿಲ್ಲ.

ಆ ಬಳಿಕ, ಸಂಜು ಫೇಸ್ಬುಕ್ನಲ್ಲಿ ಚಾರುಲತಾ ಅವರಿಗೆ Hi ಸಂದೇಶ ಕಳುಹಿಸಿದರು. ಆ ಸಂದೇಶವು ಲವ್ಸ್ಟೋರಿಗೆ ಅಡಿಪಾಯ ಹಾಕಿತು. ಶೀಘ್ರದಲ್ಲೇ ಆಳವಾದ ಸಂಬಂಧವಾಗಿ ಅರಳಿತು. ಅವರ ಸಂಬಂಧವು ಸ್ನೇಹದಿಂದ ಆಳವಾದ ಬಂಧಕ್ಕೆ ಬೆಳೆಯಿತು.

ಐಪಿಎಲ್ ಪಂದ್ಯಗಳ ಸಮಯದಲ್ಲಿ ಕ್ರೀಡಾಂಗಣದಲ್ಲಿ ಅವರನ್ನು ಹುರಿದುಂಬಿಸುತ್ತಿರಲಿ ಅಥವಾ ಪರದೆಯ ಹಿಂದೆ ಮೌನವಾಗಿ ಅವರನ್ನು ಬೆಂಬಲಿಸುತ್ತಲೇ ಬಂದರು ಚಾರು. ಇದು ಅವರ ನಡುವೆ ಇನ್ನಷ್ಟು ಗಾಢ ಪ್ರೀತಿಯನ್ನು ಹುಟ್ಟುಹಾಕಿತು. ಬಳಿಕ ಜೋಡಿ ಮದುವೆಯಾಯಿತು. ವಿಭಿನ್ನ ಧಾರ್ಮಿಕ ಹಿನ್ನೆಲೆಯಿಂದ ಬಂದಿದ್ದರೂ, ಈ ವ್ಯತ್ಯಾಸಗಳು ತಮ್ಮ ಸಂಬಂಧದ ಮೇಲೆ ಬೀಳದಂತೆ ನೋಡಿಕೊಂಡರು. ಪ್ರೀತಿ, ಗೌರವದಿಂದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ.

Source link
Sanju Weds Charu: ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅಂತರ್ಧರ್ಮೀಯ ರೋಚಕ ಫೇಸ್ಬುಕ್ ಲವ್ ಸ್ಟೋರಿ!