ಸೋಫಿ ಶೈನ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಶಿಖರ್ ಧವನ್; ವಿಡಿಯೋ ವೈರಲ್

ಸೋಫಿ ಶೈನ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಶಿಖರ್ ಧವನ್; ವಿಡಿಯೋ ವೈರಲ್


ಭಾರತ ಕ್ರಿಕೆಟ್ ತಂಡದ ಮಾಜಿ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ವೈಯಕ್ತಿಕ ಬದುಕಿನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ವಾಸ್ತವವಾಗಿ ಫೆಬ್ರವರಿ 21 ರ ಶನಿವಾರದಂದು ತಮ್ಮ ಪ್ರೇಯಸಿ ಸೋಫಿ ಶೈನ್ ಅವರೊಂದಿಗೆ ಶಿಖರ್ ಧವನ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಶಿಖರ್ ಧವನ್‌ಗೆ ಇದು ಎರಡನೇ ಮದುವೆ ಎಂದು ಹೊಸದಾಗಿ ಹೇಳಬೇಕಾಗಿಲ್ಲ. 2012 ರಲ್ಲಿ ಆಯೇಷಾ ಮುಖರ್ಜಿ ಅವರನ್ನು ಮದುವೆಯಾಗಿದ್ದ ಧವನ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ದಂಪತಿಗಳಿಬ್ಬರು 2023 ರಲ್ಲಿ ವಿಚ್ಛೇದನ ಪಡೆದಿದ್ದರು.

ಆ ಬಳಿಕ ಐರಿಶ್ ಮೂಲದ ಸೋಫಿ ಶೈನ್ ಜೊತೆ ಒಂದೂವರೆ ವರ್ಷದಿಂದ ಪ್ರೀತಿಯಲ್ಲಿ ಬಿದ್ದಿದ್ದ ಧವನ್, ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ, ಸುಮಾರು 40 ದಿನಗಳ ನಂತರ ಮದುವೆಯಾಗಿದ್ದಾರೆ. ಭಾರತೀಯ ಪದ್ಧತಿಗಳ ಪ್ರಕಾರ ಇವರಿಬ್ಬರ ವಿವಾಹ ನೆರವೇರಿದ್ದು, ಮೆಹಂದಿ ಮತ್ತು ಹಲ್ದಿಯಂತಹ ಕಾರ್ಯಕ್ರಮಗಳಲ್ಲಿ ಈ ಜೋಡಿ ಸಂಭ್ರಮದಲ್ಲಿ ಮಿಂದೆದ್ದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಶಿಖರ್ ಮತ್ತು ಸೋಫಿ ಅವರ ವಿವಾಹದಲ್ಲಿ ಅವರ ಕುಟುಂಬಗಳು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಕೂಡ ಈ ಸಮಾರಂಭದಲ್ಲಿ ಭಾಗವಹಿಸಿದ್ದರು, ಅದರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.



Source link

Leave a Reply

Your email address will not be published. Required fields are marked *