ಪಾಕಿಸ್ತಾನ್ ಆಟಗಾರರಿಗೆ ಹ್ಯಾಂಡ್​ಶೇಕ್ ನೀಡಲು ನಿರಾಕರಿಸಿದ ಭಾರತ ತಂಡ

ಪಾಕಿಸ್ತಾನ್ ಆಟಗಾರರಿಗೆ ಹ್ಯಾಂಡ್​ಶೇಕ್ ನೀಡಲು ನಿರಾಕರಿಸಿದ ಭಾರತ ತಂಡ


ಕ್ರೀಡಾ ಅಂಗಳದಲ್ಲಿ ಭಾರತ ಮತ್ತು ಪಾಕಿಸ್ತಾನ್ ಆಟಗಾರ ನಡುವಣ ಹ್ಯಾಂಡ್ ಶೇಕ್ ತಿರಸ್ಕಾರ ಪರ್ವ ಮುಂದುವರೆದಿದೆ. ಏಷ್ಯಾಕಪ್ ಕ್ರಿಕೆಟ್ ಆಟದ ಮೂಲಕ ಶುರುವಾದ ಈ ಪರ್ವವು ಇದೀಗ ಕಬಡ್ಡಿ ಅಂಗಳಕ್ಕೂ ಕಾಲಿಟ್ಟಿದೆ. ಬಹ್ರೇನ್‌ನಲ್ಲಿ ನಡೆದ 3ನೇ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಭಾರತದ ಕಬಡ್ಡಿ ತಂಡವು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಲಾಗಿದೆ. ಇದೀಗ ಈ ತಿರಸ್ಕಾರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪ್ರದರ್ಶನ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡವು 86-21 ಅಂಕಗಳ ಅಂತರದಿಂದ ಪಾಕಿಸ್ತಾನ ತಂಡವನ್ನು ಬಗ್ಗು ಬಡಿದಿದೆ. ಅಂದರೆ ಈ ಪಾಕಿಸ್ತಾನ್ ತಂಡ 21 ಅಂಕಗಳನ್ನು ಕಲೆಹಾಕಿದರೆ, ಭಾರತವು 86 ಅಂಕಗಳನ್ನು ಗಳಿಸಿ ಭರ್ಜರಿ ಜಯ ಸಾಧಿಸಿದೆ.



Source link

Leave a Reply

Your email address will not be published. Required fields are marked *