ಆಸ್ಕರ್​​ಗೆ ಇನ್ನಷ್ಟು ಹತ್ತಿರವಾದ ‘ಹೋಮ್​​ಬೌಂಡ್’, ಇನ್ನೆಷ್ಟು ಹಂತ ಬಾಕಿ

ಆಸ್ಕರ್​​ಗೆ ಇನ್ನಷ್ಟು ಹತ್ತಿರವಾದ ‘ಹೋಮ್​​ಬೌಂಡ್’, ಇನ್ನೆಷ್ಟು ಹಂತ ಬಾಕಿ


ಸಿನಿಮಾಗಳಿಗಾಗಿ (ಸಿನಿಮಾ) ನೀಡಲಾಗುವ ವಿಶ್ವಶ್ರೇಷ್ಠ ಪ್ರಶಸ್ತಿ ಎಂದು ನಂಬಲಾಗಿದೆ ಆಸ್ಕರ್ಸ್ ಅಥವಾ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಭಾರತದ ಸಿನಿಮಾಗಳು ಪ್ರಶಸ್ತಿಯನ್ನು ಗಳಿಸಿದ್ದು, ಭಾರತದಿಂದ ಈ ಬಾರಿ ಅಧಿಕೃತವಾಗಿ ಆಸ್ಕರ್ಸ್‌ಗೆ ಆಯ್ಕೆ ಆಗಿರುವ ‘ಹೋಮ್‌ಬೌಂಡ್’ ಸಿನಿಮಾ ಕೆಲವು ಮೆಟ್ಟಿಲುಗಳನ್ನು ಹತ್ತಿದೆ. ಇದೀಗ ಆಸ್ಕರ್‌ಗೆ ಇನ್ನಷ್ಟು ಸನಿಹವಾಗಿದೆ ‘ಹೋಮ್‌ಬೌಂಡ್’ ಈ ಹಿಂದೆ ಪ್ರಾಥಮಿಕ ಹಂತ, ಅದರ ನಂತರದ ಅಂತಿಮ ಹದಿನೈದರ ಪಟ್ಟಿಗೆ ಸಹ ‘ಹೋಮ್‌ಬೌಂಡ್’ ಆಯ್ಕೆಯಾಗಿದೆ. ಈಗ ನಾಮಿನೇಷನ್ ಗೆ ಶಾರ್ಟ್ ಲಿಸ್ಟ್ ಆಗುವ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಕರಣ್ ಜೋಹರ್ ನಿರ್ಮಾಣ ಮಾಡಿರುವ ‘ಹೋಮ್‌ಬೌಂಡ್’ ಸಿನಿಮಾ ಧರ್ಮ ಮತ್ತು ಜಾತಿ ಮತ್ತು ಮಹಿಳಾ ದೌರ್ಜನ್ಯದ ವಸ್ತುವನ್ನು ಒಳಗೊಂಡ ಸಿನಿಮಾ ಆಗಿದ್ದು ಸಿನಿಮಾದಲ್ಲಿ ಇಶಾನ್ ಕಟ್ಟರ್, ಜಾನ್ಹವಿ ಕಪೂರ್ ಮತ್ತು ವಿಶಾಲ್ ಜೇಟ್ವಾ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ನೀರಜ್ ಗಯ್ವಾನ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆಸ್ಕರ್‌ನ ಅತ್ಯುತ್ತಮ ವಿದೇಶಿ ಸಿನಿಮಾ ಸ್ಪರ್ಧೆಯಲ್ಲಿರುವ ‘ಹೋಮ್‌ಬೌಂಡ್’ ಸಿನಿಮಾ ಅಂತಿಮ ಹದಿನೈದು ಸಿನಿಮಾಗಳ ಪಟ್ಟಿಗೆ ಆಯ್ಕೆಯಾಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.

ಇದನ್ನೂ ಓದಿ:ಕಮಲ್-ರಜನಿ ಕಾಂಬಿನೇಷನ್ ಸಿನಿಮಾ: ಯುವ ನಿರ್ದೇಶಕನಿಗೆ ಅದೃಷ್ಟ

ಈವರೆಗೆ ಐದು ಸಿನಿಮಾಗಳು ಮಾತ್ರವೇ ಭಾರತದ ಆಸ್ಕರ್ಸ್ ನ ಶಾರ್ಟ್ ಲಿಸ್ಟ್ ನಲ್ಲಿದೆ. ಐದು ಸಿನಿಮಾಗಳಲ್ಲಿ ‘ಹೋಮ್‌ಬೌಂಡ್’ ಸಹ ಉಳಿದಿದೆ. ನಾಮನಿರ್ದೇಶನಗಳ ಪಟ್ಟಿಯನ್ನು ಜನವರಿ 22 ರಂದು ಘೋಷಿಸಲಾಗುವುದು, ‘ಹೋಮ್‌ಬೌಂಡ್’ ಸಿನಿಮಾ ನಾಮಿನೇಷನ್ಸ್ ಎಂಟ್ರಿ ಕೊಟ್ಟಲ್ಲಿ, ಭಾರತೀಯ ಚಿತ್ರರಂಗದ ಪಾಲಿಗೆ ಹೆಮ್ಮೆಯ ವಿಷಯ. ಈ ಹಿಂದೆ ಕೇವಲ ‘ಲಗಾನ್’ ಸಿನಿಮಾ ಮಾತ್ರ ವಿದೇಶಿ ಸಿನಿಮಾಗಳಲ್ಲಿ ಆಸ್ಕರ್ಸ್ ನಾಮಿನೇಷನ್ ನಲ್ಲಿ ಸ್ಥಾನ ಪಡೆದಿರುವ ಭಾರತೀಯ ಸಿನಿಮಾ.

ಆದರೆ ‘ಹೋಮ್‌ಬೌಂಡ್’ಗೆ ಕಠಿಣ ಸ್ಪರ್ಧೆ ಕೂಡ ಇದೆ. ಇರಾಖ್‌ನ ‘ದಿ ಪ್ರೆಸಿಡೆಂಟ್ ಕೇಕ್’, ಪ್ಯಾಲೆಸ್ತೇನಿನ ‘ಪ್ಯಾಲೆಸ್ತೇನ್ 36’, ‘ದಕ್ಷಿಣ ಕೊರಿಯಾದ ‘ನೋ ಅದರ್ ಚಾಯ್ಸ್’ ಸಿನಿಮಾಗಳು ಕಠಿಣ ಸ್ಪರ್ಧೆ ಒಡ್ಡಲಿವೆ. ‘ಹೋಂಬೌಂಡ್’ ಸಿನಿಮಾಕ್ಕೆ ಮುಂದಿನ ಹಾದಿ ಕ್ರಮಿಸಲು ದೊಡ್ಡ ಮಟ್ಟದ ಪ್ರಚಾರದ ಅವಶ್ಯಕತೆಯೂ ಇದೆ.

‘ಹೋಮ್‌ಬೌಂಡ್’ ಸಿನಿಮಾ ಆಸ್ಕರ್ಸ್ ರೇಸಿನಲ್ಲಿ ಇದೆಯಾದರೂ ಸಿನಿಮಾ ಅಂತಿಮ ಹಂತ ತಲುಪಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಭರ್ಜರಿ ಪ್ರಚಾರವನ್ನೂ ಮಾಡಬೇಕಿದೆ. ಆದರೆ ಸಿನಿಮಾದ ನಿರ್ಮಾಪಕರುಗಳ್ಯಾರು ಈ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಂಡಂತಿಲ್ಲ. ಜನವರಿ 22 ರಂದು ನಾಮನಿರ್ದೇಶನದ ಘೋಷಣೆ ಆಗಲಿದೆ, ಅಂದು ‘ಹೋಮ್‌ಬೌಂಡ್’ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *