Headlines

ಎರಡು ಬಿಲಿಯನ್ ಡಾಲರ್ ಮೈಲಿಗಲ್ಲು ದಾಟಿದ ಭಾರತದ ಕ್ರೀಡಾ ಆರ್ಥಿಕತೆ

ಎರಡು ಬಿಲಿಯನ್ ಡಾಲರ್ ಮೈಲಿಗಲ್ಲು ದಾಟಿದ ಭಾರತದ ಕ್ರೀಡಾ ಆರ್ಥಿಕತೆ


ಎರಡು ಬಿಲಿಯನ್ ಡಾಲರ್ ಮೈಲಿಗಲ್ಲು ದಾಟಿದ ಭಾರತದ ಕ್ರೀಡಾ ಆರ್ಥಿಕತೆ

ಜನವರಿ 24: ಭಾರತದ ಕ್ರೀಡಾ ಆರ್ಥಿಕತೆ ಬಹಳ ವೇಗದಲ್ಲಿ ಬೆಳೆಯುತ್ತಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಕ್ರೀಡಾ ಆರ್ಥಿಕತೆಯ (ಇಂಡಿಯನ್ ಸ್ಪೋರ್ಟ್ಸ್ ಎಕಾನಮಿ) ಗಾತ್ರ ಎರಡು ಭಾರತೀಯ ಡಾಲರ್ ದಾಟಿದೆ. ಡಬ್ಲ್ಯುಪಿಪಿ ಮೀಡಿಯಾದ ವರದಿಯ ಪ್ರಕಾರ ಸ್ಪೋರ್ಟ್ಸ್ ಏಕನಾಮಿ ಗಾತ್ರ 2.13 ಬಿಲಿಯನ್ ಡಾಲರ್ ಮುಟ್ಟಿದೆ. ಅಂದರೆ, 18,864 ಕೋಟಿ ರೂ ಗಾತ್ರದ ಆರ್ಥಿಕತೆಯು ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಅಡಕವಾಗಿದೆ.

ಭಾರತೀಯ ಕ್ರೀಡಾ ಕ್ಷೇತ್ರದ ಆರ್ಥಿಕತೆ ಕಳೆದ ನಾಲ್ಕು ವರ್ಷದಿಂದ ಅದ್ವಿತೀಯವಾಗಿ ಹಿಗ್ಗಿದೆ. ಶೇ. 19ರ ಸಿಎಜಿಆರ್‌ನಲ್ಲಿ ಬೆಳೆದಿದೆ. ನಾಲ್ಕು ವರ್ಷದ ಹಿಂದೆ ಇದ್ದುದಕ್ಕೆ ಅದರ ಗಾತ್ರ ಎರಡು ಪಟ್ಟು ಹೆಚ್ಚಿದೆ. ಅಂದರೆ, ನಾಲ್ಕೇ ವರ್ಷದಲ್ಲಿ ಡಬಲ್ ಆಗಿದೆ.

ಕ್ರಿಕೆಟ್ ಸಿಕ್ಕಾಪಟ್ಟೆ ವೇಗದಲ್ಲಿ ಬೆಳವಣಿಗೆ

ಭಾರತದ ಆರ್ಥಿಕತೆಗೆ ಅತಿಹೆಚ್ಚು ಕೊಡುಗೆ ಕೊಡುತ್ತಿದೆ. ಶೇ 89ರಷ್ಟು ಕೊಡುಗೆ ಇದೆ. 2024ರಲ್ಲಿ ಸಾಮಾನ್ಯವಾಗಿ ಕ್ರೀಡಾ ಆರ್ಥಿಕತೆಯಲ್ಲಿ ಕ್ರಿಕೆಟ್‌ನ ಪಾಲು ಶೇ. 84 ಇತ್ತು. ಕುತೂಹಲ ಎಂದರೆ 2024ರಲ್ಲಿ ಒಟ್ಟಾರೆ ಭಾರತೀಯ ಕ್ರೀಡಾ ಆರ್ಥಿಕತೆ ಹೊಂದಿದ್ದ ಗಾತ್ರಕ್ಕಿಂತ ದೊಡ್ಡದಾಗಿ ಕ್ರಿಕೆಟ್ ಈಗ ಬೆಳೆದಿದೆ ಎಂಬುದು ಡಬ್ಲ್ಯುಪಿಪಿ ಮೀಡಿಯಾದ ‘ಸ್ಪೋರ್ಟಿಂಗ್ ನೇಷನ್: ಬ್ಯೂಲ್ಡಿಂಗ್ ಎ ಲೆಗಸಿ’ ವರದಿಯಿಂದ ತಿಳಿದುಬರುತ್ತದೆ.

ಇದನ್ನೂ ಓದಿ: ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿಯವರೆಗೆ, ಮಾರ್ಚ್ 31ಕ್ಕೆ ಡೆಡ್ಲೈನ್ ​​ಇರುವ ಕೆಲವು ಪ್ರಮುಖ ಹಣಕಾಸು ಕಾರ್ಯಗಳು

ಕ್ರೀಡಾ ಆರ್ಥಿಕತೆಯ ಗಾತ್ರವನ್ನು ಅಳೆಯುವುದು ಹೇಗೆ?

ಡಬ್ಲ್ಯುಪಿಪಿ ಮಾಧ್ಯಮದ ಅಧ್ಯಯನದಲ್ಲಿ, ಕ್ರೀಡಾ ಆರ್ಥಿಕತೆಯ ಗಾತ್ರವನ್ನು ಅಳೆಯಲು ಮೂರು ಘಟಕಗಳನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಪ್ರಾಯೋಜತ್ವ, ವೈದ್ಯರ ಪ್ರಚಾರ, ಜಾಹೀರಾತು ವೆಚ್ಚ, ಈ ಮೂರು ಆದಾಯದ ಮೂಲಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಭಾರತದಲ್ಲಿ ಪ್ರಾಬಲ್ಯ ನಿಚ್ಚಳವಾಗಿ ಕಾಣುತ್ತದೆ. ಶೇ. 89ರಷ್ಟು ಕ್ರೀಡಾ ಆರ್ಥಿಕತೆಯು ಕ್ರಿಕೆಟ್‌ನದ್ದಾಗಿದೆ. ಇತರ ಕ್ರೀಡೆಗಳ ಪಾಲು ಶೇ. 11 ಮಾತ್ರ. ಫುಟ್ಬಾಲ್ ಕಳೆದ ವರ್ಷ ಹೆಚ್ಚಿನ ಬೆಳವಣಿಗೆ ಇಲ್ಲದಿರುವುದು ಇದಕ್ಕೆ ಕಾರಣ. ಪ್ರೋಕಬಡ್ಡಿ ಲೀಗ್ ಮೂಲಕ ಕಬಡ್ಡಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಇದನ್ನೂ ಓದಿ: ನಿಷ್ಕ್ರಿಯ ಐಪಿಎಫ್ ಖಾತೆಗಳಿಗೆ ಬಡ್ಡಿ ಸಿಗುತ್ತಾ? ಯಾವುದಕ್ಕೆ ಟ್ಯಾಕ್ಸ್ ಇರುತ್ತೆ?

ಆದರೆ, ಆದಾಯ ಗಳಿಕೆ ಮತ್ತು ವೀಕ್ಷಣೆ ಎರಡರಲ್ಲೂ ಕ್ರಿಕೆಟ್‌ಗೆ ಭಾರತದಲ್ಲಿ ಯಾವ ಕ್ರೀಡೆಯೂ ಸಾಟಿ ಇಲ್ಲ. ಅದರಲ್ಲೂ ಐಪಿಎಲ್ ಕೊಡುಗೆಯೂ ಗಣನೀಯವಾಗಿ ಇದೆ. ಮಹಿಳಾ ಕ್ರಿಕೆಟ್ ಕೂಡ ಇತ್ತಿಚಿನ ವರ್ಷಗಳಲ್ಲಿ ಕೊಡುಗೆ ನೀಡುತ್ತಿದೆ.

ಕ್ರೀಡಾ ಆರ್ಥಿಕತೆಗೆ ಮಾಧ್ಯಮ ವೆಚ್ಚದ ಕೊಡುಗೆ ಶೇ. 50ರಷ್ಟು ಇದೆ. 9,571 ಕೋಟಿ ರೂ ಮಾಧ್ಯಮಗಳು ಕ್ರೀಡಾ ಪ್ರಸಾರಕ್ಕೆ ವ್ಯಯಿಸುತ್ತವೆ. ಇದರಲ್ಲಿ ಕ್ರಿಕೆಟ್‌ಗೆ ಮಾಡುವ ವೆಚ್ಚವೇ 9,026 ಕೋಟಿ ರೂ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *