Headlines

ಷೇರು ಮಾರುಕಟ್ಟೆ ಭಾರೀ ಕುಸಿತ; ಸಿಕ್ಕಾಪಟ್ಟೆ ನಷ್ಟ ಕಂಡ ಸೆನ್ಸೆಕ್ಸ್, ನಿಫ್ಟಿ; ಈ ಪರಿ ಕುಸಿತಕ್ಕೆ ಕಾರಣಗಳೇನು?

ಷೇರು ಮಾರುಕಟ್ಟೆ ಭಾರೀ ಕುಸಿತ; ಸಿಕ್ಕಾಪಟ್ಟೆ ನಷ್ಟ ಕಂಡ ಸೆನ್ಸೆಕ್ಸ್, ನಿಫ್ಟಿ; ಈ ಪರಿ ಕುಸಿತಕ್ಕೆ ಕಾರಣಗಳೇನು?


ಷೇರು ಮಾರುಕಟ್ಟೆ ಭಾರೀ ಕುಸಿತ; ಸಿಕ್ಕಾಪಟ್ಟೆ ನಷ್ಟ ಕಂಡ ಸೆನ್ಸೆಕ್ಸ್, ನಿಫ್ಟಿ; ಈ ಪರಿ ಕುಸಿತಕ್ಕೆ ಕಾರಣವೇನು?

ಜುಲೈ, ಮಾರ್ಚ್ 19: ಭಾರತದ ಷೇರು ಮಾರುಕಟ್ಟೆ (Stock Market) ಯುಗಾದಿ ಹಬ್ಬದ ದಿನದಂದು ಅಕ್ಷರಶಃ ಗಡಗಡ ಅಲುಗಾಡಿದೆ. ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಹೆಚ್ಚೂಕಡಿಮೆ ಶೇ. 3ರಷ್ಟು ಕುಸಿತವನ್ನು ಕಂಡಿವೆ. ಮೂರು ದಿನ ಪಾಸಿಟಿವ್ ಆಗಿದ್ದ ಈ ಇಂಡೆಕ್ಸ್ ಗುರುವಾರ ನೆಲಕಚ್ಚಿವೆ. ಸೆನ್ಸೆಕ್ಸ್ 2,496 ಅಂಕಗಳನ್ನು ಕಳೆದುಕೊಂಡಿತು 74,207.24 ಮಟ್ಟಕ್ಕೆ ಮುಟ್ಟಿದೆ. ನಿಫ್ಟಿ50 ಇಂಡೆಕ್ಸ್ 775.65 ಅಂಕಗಳನ್ನು ಕಳೆದುಕೊಂಡು 23,002.15 ಮಟ್ಟ ಮುಟ್ಟಿದೆ.

ಈ ಇಂಡೆಕ್ಸ್‌ನಲ್ಲಿರುವ ಹತ್ತಾರು ಕಂಪನಿಗಳಷ್ಟೇ ಹಿನ್ನಡೆಯಿಲ್ಲ, ಒಟ್ಟಾರೆ ಷೇರು ಮಾರುಕಟ್ಟೆಯ ಹೆಚ್ಚಿನ ಕಂಪನಿಗಳ ಷೇರುಗಳಿಗೆ ಹಿನ್ನಡೆಯಾಗಿದೆ. ಎನ್ಎಸ್ಎಸ್ಇನಲ್ಲಿ ಪಟ್ಟಿ ಆಗಿರುವ ಸುಮಾರು 4,000 ಷೇರುಗಳು 3,048 ಷೇರುಗಳು ನಕಾರಾತ್ಮಕವಾಗಿವೆ. 864 ಷೇರುಗಳು ಮಾತ್ರವೇ ಗುರುವಾರ ಲಾಭ ಕಂಡಿರುವುದು.

ಇದನ್ನೂ ಓದಿ: ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ

ಎಚ್ಡಿಎಫ್ಸಿ ಬ್ಯಾಂಕ್, ಎಟರ್ನಲ್, ಶ್ರೀರಾಮ್ ಫೈನಾನ್ಸ್ ಷೇರುಗಳು ಅತಿಹೆಚ್ಚು ಕಳೆದುಕೊಂಡಿರುವುದು. ಗುರುವಾರ ಗಳಿಕೆ ಕಂಡಿರುವ ಷೇರುಗಳಲ್ಲಿ ಹೆಚ್ಚಿನವು ತೈಲ ಮತ್ತು ಇಂಧನ ಕಂಪನಿ ಕಂಪನಿ.

ಷೇರು ಮಾರುಕಟ್ಟೆ ಕುಸಿತಕ್ಕೆ ಕೆಲವು ಸಂಭಾವ್ಯ ಕಾರಣಗಳು:

  • ಅಮೆರಿಕ ಇರಾನ್ ಸಂಘರ್ಷ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ತನ್ನನ್ನು ಹೊಡೆದರೆ ತಾನು ಯಾರನ್ನೂ ಬಿಡುವುದಿಲ್ಲ ಎಂದು ಇರಾನ್ ಮಾಡು ಇಲ್ಲ ಮಡಿ ಹೋರಾಟಕ್ಕೆ ಸಿದ್ಧವಾಯಿತು. ಇದು ಎಲ್ಲೆಡೆ ಭಯ ಮೂಡಲು ಕಾರಣ.
  • ಇರಾನ್ ಯುದ್ಧದಿಂದಾಗಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 110 ಡಾಲರ್ ದಾಟಿದೆ. ಇದು ಜಾಗತಿಕವಾಗಿ ಹಣದುಬ್ಬರ ಏರಿಕೆಗೆ ಮತ್ತು ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ, ಮಾರುಕಟ್ಟೆ ಭಯಗ್ರಸ್ತವಾಗಿದೆ.
  • ಎಚ್‌ಡಿಎಫ್‌ಸಿ ಬ್ಯಾಂಕ್‌ನ ಚೇರ್ಮನ್ ಅತಾನು ಚಕ್ರಬರ್ತಿ ಅವರು ನೈತಿಕ ಕಾರಣವೊಡ್ಡಿ ರಾಜೀನಾಮೆ ನೀಡಿರುವುದು ಅದರ ಷೇರು ಕುಸಿತಕ್ಕೆ ಎಡೆ ಮಾಡಿಕೊಟ್ಟಿದೆ. ಎಚ್ಡಿಎಫ್ಸಿ ಬ್ಯಾಂಕ್ನ ಷೇರುಬೆಲೆ ಒಂದೇ ದಿನದಲ್ಲಿ ಶೇರ್ ಮಾಡಿ. 8ರಷ್ಟು ಕುಸಿತವಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್ಪಿಜಿ ಟ್ಯಾಂಕರ್ ಗ್ಯಾಸ್‌ನಲ್ಲಿ ಎಷ್ಟು ದಿನಕ್ಕಾಗುತ್ತಿದೆ ಗೊತ್ತಾ?

ಹಾಗೆಯೇ, ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆಯು ದುಬ್ಬರ ಏರಬಹುದು ಎಂದು ಹೇಳಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ಮುಂದುವರಿದಿದೆ, ಎಫ್ ಐಐಐಗಳ ಷೇರುಗಳ ಬಿಕರಿಯಾಗುತ್ತಿದೆ ಇವೆಲ್ಲವೂ ಭಾರತದ ಷೇರು ಮಾರುಕಟ್ಟೆಯ ಹಿನ್ನಡೆಗೆ ಕಾರಣವಾಗುತ್ತವೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *