ಸೀಸ್​ಫೈರ್ ಮಾತ್ರವಲ್ಲ, ಭಾರತದ ಷೇರು ಮಾರುಕಟ್ಟೆ ಗರಿಗೆದರಲು ಇಲ್ಲಿವೆ 7 ಕಾರಣಗಳು

ಸೀಸ್​ಫೈರ್ ಮಾತ್ರವಲ್ಲ, ಭಾರತದ ಷೇರು ಮಾರುಕಟ್ಟೆ ಗರಿಗೆದರಲು ಇಲ್ಲಿವೆ 7 ಕಾರಣಗಳು


ಸೀಸ್‌ಫೈರ್, ಭಾರತದ ಮಾರುಕಟ್ಟೆ ಷೇರುಗಳು ಇಲ್ಲಿವೆ 7 ಕಾರಣಗಳು

ಜನವರಿ, ಏಪ್ರಿಲ್ 8: ಷೇರು ಮಾರುಕಟ್ಟೆಯ (ಸ್ಟಾಕ್ ಮಾರುಕಟ್ಟೆ) ಪ್ರಮುಖ ಭಾರತದ ಸೂಚ್ಯಂಕಗಳು ಇಂದು ಬುಧವಾರ ಸಿಕ್ಕಾಪಟ್ಟೆ ಹಿಗ್ಗಿವೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ಹತ್ತಿರ ಹತ್ತಿರ ಶೇ. 4ರಷ್ಟು ಹೆಚ್ಚಿವೆ. ಬಿಎಸ್‌ಇ ಸೆನ್ಸೆಕ್ಸ್ 2,946.32 ಅಂಕಗಳು (ಶೇ. 3.95) ಅಧಿಕಗೊಂಡು 77,562.90 ಮಟ್ಟ ಮುಟ್ಟಿದೆ. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 873.70 ಅಂಕಗಳು (ಶೇ 3.78) ಏರಿಕೆ ಕಂಡು 23,997.35 ಮಟ್ಟ ಮುಟ್ಟಿದೆ. ಈವತ್ತು ಹಿನ್ನಡೆ ಕಂಡ ಷೇರುಗಳ ಸಂಖ್ಯೆ 498 ಮಾತ್ರ. ಬರೋಬ್ಬರಿ 3,705 ಷೇರುಗಳು ಪಾಸಿಟಿವ್ ಆಗಿವೆ. ಐಟಿ ಮತ್ತು ಫಾರ್ಮಾ ಬಿಟ್ಟರೆ ಬೇರೆ 16 ಪ್ರಮುಖ ಸೆಕ್ಟರ್‌ಗಳ ಸೂಚ್ಯಂಕಗಳು ಪಾಸಿಟಿವ್ ಇವೆ. ಇವತ್ತು ಈ ಭಾರತದ ಕ್ವಿಟಿ ಮಾರುಕಟ್ಟೆ ಗರಿಗೆದರಲು ಕೆಲವು ಮುಖ್ಯಕಾರಣಗಳು ಇಂತಿವೆ:

ಅಮೆರಿಕ ಇರಾನ್ ಕದನ ವಿರಾಮ

ಅಮೆರಿಕ ಮತ್ತು ಇರಾನ್ ನಡುವೆ ಅತಿರೇಕಕ್ಕೆ ಹೋಗುವಂತಿದ್ದ ಯುದ್ಧಕ್ಕೆ ಅಲ್ಪ ವಿರಾಮ ಬಂದಿದೆ. ಎರಡೂ ದೇಶಗಳು ಎರಡು ವಾರಗಳಿಗೆ ಕದನ ವಿರಾಮ ಘೋಷಿಸಿವೆ. ಈ ಬೆಳವಣಿಗೆ ಜಾಗತಿಕವಾಗಿ ಒಟ್ಟಾರೆ ಪಾಸಿಟಿವ್ ವಾತಾವರಣ ನಿರ್ಮಿಸಿದೆ.

ಕಚ್ಚಾ ತೈಲ ಬೆಲೆ ಇಳಿಕೆ

ಬ್ಯಾರಲ್‌ಗೆ 110 ಡಾಲರ್ ದಾಟಿ ಹೋಗಿದ್ದ ಕಚ್ಛಾ ತೈಲ ಬೆಲೆ ಎರಡಂಕಿ ಡಾಲರ್ ಮೊತ್ತಕ್ಕೆ ಇಳಿದಿದೆ. ಕದನ ವಿರಾಮದ ಪರಿಣಾಮಗಳಲ್ಲಿ ಇದು ಒಂದು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಂದ ಟೋಲ್ ವಸೂಲಿಗೆ ಇರಾನ್ ಯೋಜನೆ; ಅಂತಾರಾಷ್ಟ್ರೀಯ ನಿಯಮಗಳು ಏನು ಹೇಳುತ್ತವೆ?

ಜಾಗತಿಕ ಮಾರುಕಟ್ಟೆಗಳಿಗೆ ಹಿಗ್ಗು

ವಿಶ್ವದ ಇತರ ಷೇರು ಮಾರುಕಟ್ಟೆಯ ಬದಲಾವಣೆಗಳ ಪರಿಣಾಮ ಭಾರತದ ಈ ಕ್ವಿಟಿ ಕ್ಷೇತ್ರದ ಮೇಲೂ ಆಗುತ್ತದೆ. ಏಷ್ಯಾನ್ ಮಾರುಕಟ್ಟೆಗಳಾದ ಜಪಾನ್, ಚೀನಾ, ಸೌತ್ ಕೊರಿಯಾ, ಹಾಂಕಾಂಗ್ನ ಈಕ್ವಿಟಿ ಸೂಚ್ಯಂಕಗಳು ಇಂದು ಉತ್ತಮ ಫಲ ಕೊಟ್ಟಿವೆ. ಈ ಪಾಸಿಟಿವ್ ವಾತಾವರಣವು ಭಾರತದ ಮಾರುಕಟ್ಟೆಯನ್ನೂ ಸವರಿಕೊಂಡು ಹೋಗಿದೆ.

ರುಪಾಯಿ ಮೌಲ್ಯ

ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 50 ಪೈಸೆ ಹೆಚ್ಚಿದೆ. ಇದರಲ್ಲೂ ಈಕ್ವಿಟಿ ಮಾರುಕಟ್ಟೆಗೆ ಅನುಕೂಲವಾಗಿದೆ.

ಆರ್ ಬಿಐ ರಿಪೋ ದರ

ಆರ್ಬಿಐ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಈ ಹಣಕಾಸು ವರ್ಷಕ್ಕೆ ಭಾರತ ಉತ್ತಮ ಎನಿಸುವ ಹಣದುಬ್ಬರ ಮತ್ತು ಜಿಡಿಪಿ ಸ್ಥಿತಿ ಹೊಂದಿರಬಹುದು ಎಂದು ಆರ್ ಬಿಐ ಅಂದಾಜಿಸಿದೆ. ಇದು ಮಾರುಕಟ್ಟೆಗೆ ಸಕಾರಾತ್ಮಕವಾಗಿದೆ.

ಇದನ್ನೂ ಓದಿ: ಯುಎಇಗೆ ಸಾಲ ವಾಪಸ್ ಕೊಟ್ಟರೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಏನಾಗಬಹುದು? ಇಲ್ಲಿದೆ ಇಂಟರೆಸ್ಟಿಂಗ್ ಲೆಕ್ಕಾಚಾರ

ಬ್ಯಾಂಕ್ ಷೇರುಗಳಿಗೆ ಡಿಮ್ಯಾಂಡ್

ಇವತ್ತು ಬ್ಯಾಂಕಿಂಗ್ ಕ್ಷೇತ್ರದ ಷೇರುಗಳಿಗೆ ಬಹಳ ಬೇಡಿಕೆ ಇತ್ತು. ಸೇರಿದಂತೆ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಷೇರುಗಳ ಬೆಲೆ ಶೇ. 9ರಷ್ಟು ಹೆಚ್ಚಿದೆ. ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ. 6ರಷ್ಟು ಹೆಚ್ಚಿದೆ.

ವಿಐಎಕ್ಸ್ ಇಳಿಕೆ

ಮಾರುಕಟ್ಟೆಯ ಪ್ರಕ್ಷುಬ್ದತೆಯ ಏರಿಳಿತವನ್ನು ಸೂಚಿಸುವ ಇಂಡಿಯಾ ವಿಐಎಕ್ಸ್ ಶೇ. 5ರಷ್ಟು ಕಡಿಮೆ ಆಗಿ 19.85ಕ್ಕೆ ಬಂದಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *