ಜಿಡಿಪಿಯಲ್ಲಿ 4ನೇ ಸ್ಥಾನ, ತಲಾದಾಯದಲ್ಲಿ 126ನೇ ಸ್ಥಾನ; ಭಾರತದ ಆರ್ಥಿಕ ಅಂತರ ಎತ್ತಿತೋರಿಸಿದ ಸ್ಟೀವ್ ಹ್ಯಾಂಕ್

ಜಿಡಿಪಿಯಲ್ಲಿ 4ನೇ ಸ್ಥಾನ, ತಲಾದಾಯದಲ್ಲಿ 126ನೇ ಸ್ಥಾನ; ಭಾರತದ ಆರ್ಥಿಕ ಅಂತರ ಎತ್ತಿತೋರಿಸಿದ ಸ್ಟೀವ್ ಹ್ಯಾಂಕ್


ಜಿಡಿಪಿಯಲ್ಲಿ 4ನೇ ಸ್ಥಾನ, ತಲಾದಾಯದಲ್ಲಿ 126ನೇ ಸ್ಥಾನ; ಭಾರತದ ಆರ್ಥಿಕ ಅಂತರ ಎತ್ತಿತೋರಿಸಿದ ಸ್ಟೀವ್ ಹ್ಯಾಂಕ್

ಜನವರಿ, ಏಪ್ರಿಲ್ 5: ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತ, ಜಿಡಿಪಿ ತಲಾದಾಯದಲ್ಲಿ (ಜಿಡಿಪಿ ತಲಾ ಆದಾಯ) ಬಹಳ ಹಿಂದುಳಿದಿದೆ. ಬಡವರು ಮತ್ತು ಕೆಳಮಧ್ಯಮ ವರ್ಗದವರ ಸಂಖ್ಯೆಯೇ ಅತಿಹೆಚ್ಚು ಇರುವುದು. ವಿಶ್ವಖ್ಯಾತ ಆರ್ಥಿಕ ತಜ್ಞ ಸ್ಟೀವ್ ಹ್ಯಾಂಕ್ (ಸ್ಟೀವ್ ಹ್ಯಾಂಕೆ) ಅವರು ಈ ವಿಚಾರವನ್ನು ಪ್ರಸ್ತಾಪಿಸಿ ಮಾಡಿದ ಟ್ವೀಟ್‌ವೊಂದು ಚರ್ಚೆ ಹುಟ್ಟುಹಾಕಿದೆ.

ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಜಿಡಿಪಿ ಹೊಂದಿದೆ. ಆದರೆ, ತಲಾದಾಯದಲ್ಲಿ 126ನೇ ಸ್ಥಾನದಲ್ಲಿದೆ ಎಂದಿರುವ ಅವರು 1980ರಲ್ಲಿ ಚೀನಾಕ್ಕಿಂತ ಭಾರತದ ಜಿಡಿಪಿ ತಲಾದಾಯ ಹೆಚ್ಚು ಇದ್ದದ್ದು, ಈಗ ಅರ್ಧದಷ್ಟು ಇರುವ ಸಂಗತಿಯನ್ನು ಎತ್ತಿ ತೋರಿಸಿದ್ದಾರೆ.

ಇದನ್ನೂ ಓದಿ: ಟಾಟಾ ಟ್ರಸ್ಟ್ನ ಬಾಯ್ ಹಿರಾಬಾಯ್ ಟ್ರಸ್ಟ್ನಿಂದ ಹೊರಬಿದ್ದ ವೇಣು ಶ್ರೀನಿವಾಸನ್

ಪ್ರೊಫೆಸರ್ ಸ್ಟೀವ್ ಹ್ಯಾಂಕ್ ಅವರ ಈ ಟ್ವೀಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಆರ್ಥಿಕತೆ ಈಗ ವೇಗವಾಗಿ ಬೆಳೆಯುತ್ತಿದೆಯಾದರೂ ಜನಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಜಿಡಿಪಿ ತಲಾದಾಯ ಭಾರತದಲ್ಲಿ ಕಡಿಮೆಯಾಗಿದೆ ಎಂದು ಹೆಚ್ಚಿನ ಜನರು ವಾದಿಸಿದ್ದಾರೆ.

ಸ್ಟೀವ್ ಹ್ಯಾಂಕ್ ಅವರ ಟ್ವೀಟ್

2001ರಲ್ಲಿ ಭಾರತದ ಜಿಡಿಪಿ ತಲಾದಾಯ 450 ಡಾಲರ್ ಇತ್ತು. ಇವತ್ತು ಆದರೆ 2,700 ಡಾಲರ್ ಹೆಚ್ಚಾಗಿದೆ. 25 ವರ್ಷದ ಆರು ಪಟ್ಟು ಹೆಚ್ಚಿದೆ. ದೊಡ್ಡ ಗಾತ್ರದ ಆರ್ಥಿಕತೆಗಳು ಪದರಗಳಲ್ಲಿ ಬೆಳವಣಿಗೆ ಹೊಂದುತ್ತವೆ. ಮೊದಲು ಜಿಡಿಪಿ ಹಿಗ್ಗುತ್ತದೆ. ನಂತರ ಆದಾಯ ಹಂಚಿಕೆ ಬಹಳ ಕ್ರಮೇಣವಾಗಿ ಸುಧಾರಿಸುತ್ತದೆ ಎಂದು ಒಬ್ಬರು ಕಾಮೆಂಟಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್‌ನಿಂದ ಹೈಟೆಕ್ ಟೋಲ್‌ಬೂತ್; ಯುಯಾನ್, ಕ್ರಿಪ್ಟೋದಲ್ಲಿ ಟೋಲ್ ಕಟ್ಟಿರಿ, ಸೀಕ್ರೆಟ್ ಕೋಡ್ ಪಡೆಯಿರಿ

ಭಾರತದ ತಲಾದಾಯವನ್ನು ನಾಮಿನಲ್ ಜಿಡಿಪಿ ಬದಲಿಗೆ ಪಿಪಿಪಿ ಆಧಾರದಲ್ಲಿ ಅಳೆಯುವುದು ಸೂಕ್ತ. ನಾಮಿನಲ್ ಜಿಡಿಪಿ ತಲಾದಾಯವನ್ನು ಡಾಲರ್ ಮೌಲ್ಯದ ಮೂಲಕ ಗಣಿಸಲಾಗುತ್ತದೆ. ಆದರೆ, ಪಿಪಿಪಿ ಮಾಡಲ್ ನಲ್ಲಿ ಜನರ ಜೀವನಮಟ್ಟವನ್ನು ಹೆಚ್ಚು ನಿಖರವಾಗಿ ತಿಳಿಯಬಹುದು ಎಂಬುದು ಕೆಲವರ ವಾದ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *