ಹಿಂದಿ ಮಾತನಾಡುವವರು ನಿಜವಾದ ಇಂಡಿಯನ್ಸ್​​​​, ದಕ್ಷಿಣ ಭಾರತೀಯರು ಜೋಕರ್​​: ಭಾಷಾ ಸಂಘರ್ಷಕ್ಕೆ ಮತ್ತೊಂದು ಕಿಡಿ

ಹಿಂದಿ ಮಾತನಾಡುವವರು ನಿಜವಾದ ಇಂಡಿಯನ್ಸ್​​​​, ದಕ್ಷಿಣ ಭಾರತೀಯರು ಜೋಕರ್​​: ಭಾಷಾ ಸಂಘರ್ಷಕ್ಕೆ ಮತ್ತೊಂದು ಕಿಡಿ


ಸಾಮಾಜಿಕ ಜಾಲತಾಣದಲ್ಲಿ ಭಾಷಾವಾರು (India language) ಗಲಾಟೆ ನಡೆಯತ್ತ ಇರುತ್ತದೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ಭಾಷೆಯ ವಿಷಯವಾಗಿ ಭಾರೀ ಜಗಳಗಳು ನಡೆದಿವೆ. ಬೆಂಗಳೂರಿನಲ್ಲೂ ಕೂಡ ಹಿಂದಿ ಏರಿಕೆ ಆಗುತ್ತಿದೆ ಎಂಬ ಕೂಗು ಕೂಡ ಕೇಳಿ ಬರುತ್ತಿದೆ. ಇದರ ನಡುವೆ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಇದು ದಕ್ಷಿಣ ಹಾಗೂ ಉತ್ತರ ಭಾರತ ನಡುವಿನ ವಿಚಾರವಾಗಿ ಹೊಸ ವಿವಾದವನ್ನು ಹುಟ್ಟು ಹಾಕಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ‘ಉತ್ತರ ಭಾರತ ಮತ್ತು ದಕ್ಷಿಣ ಭಾರತ’ ನಡುವಿನ ಭಾಷಾ ಸಂಘರ್ಷ ಅಥವಾ ವಿವಾದದ ಒಂದು ಮುಖವನ್ನು ತೋರಿಸಲಾಗುತ್ತಿದೆ. ಈ ಮೀಮ್ (meme) ಮೂಲಕ ಉತ್ತರ ಭಾರತೀಯರು ತಾವು ಕೇವಲ ಭಾರತೀಯರು ಎಂದು ಗುರುತಿಸಿಕೊಳ್ಳುತ್ತಾರೆ ಮತ್ತು ಹಿಂದಿ-ಇಂಗ್ಲಿಷ್ ಬಳಸುತ್ತಾರೆ ಎಂಬ ಹೆಮ್ಮೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದಾರೆ.

ದಕ್ಷಿಣ ಭಾರತದ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಮಾತನಾಡುವವರ ‘ಕ್ಲೌನ್’ (ಕ್ಲೌನ್) ಎಮೋಜಿಗಳನ್ನು ತೋರಿಸಲಾಗಿದೆ. ಈ ಮೂಲಕ ಭಾಷಾ ಪ್ರೇಮವನ್ನು ಹಾಸ್ಯದ ರೀತಿಯಲ್ಲಿ ಇಲ್ಲಿ ಪೋಸ್ಟ್‌ನಲ್ಲಿ ಹಾಕಿದ್ದಾರೆ. ದಕ್ಷಿಣ ಭಾರತೀಯರು ಜೋಕರ್ ಎಂಬ ರೀತಿಯಲ್ಲಿ ಇಲ್ಲಿ ಬಿಂಬಿಸಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಬಳಸುವುದರಿಂದ ಇಡೀ ದೇಶಕ್ಕೆ ಒಂದು ಸಾಮಾನ್ಯ ಭಾಷೆ ಸಿಗುತ್ತದೆ ಮತ್ತು ಅದು “ರಾಷ್ಟ್ರೀಯತೆಯ” ಸಂಕೇತ ಎಂದು ಹೇಳಲಾಗಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ (ಫೆಡರಲಿಸಂ) ಪ್ರತಿಯೊಂದು ಭಾಷೆಯೂ ಸಮಾನ ಮತ್ತು ಗೌರವ. ತನ್ನ ಭಾಷೆಯನ್ನು ಪ್ರೀತಿಸುವುದು ಎಂದರೆ ದೇಶವನ್ನು ದ್ವೇಷಿಸುವುದು ಎಂದಲ್ಲ.

ಇಲ್ಲಿದೆ ನೋಡಿ ವೈರಲ್ ಪೋಸ್ಟ್:

ಇದರೊಂದಿಗೆ ಮತ್ತೊಂದು ಪೋಸ್ಟ್ ಅನ್ನು ಕೂಡ ಹಂಚಿಕೊಳ್ಳಲಾಗಿದೆ. ಅದರ ಬಗ್ಗೆ ಇರುವಷ್ಟೇ ಕಳಕಳಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಏಕಿಲ್ಲ ಎಂದು ಈ ಪೋಸ್ಟ್‌ನಲ್ಲಿ ಕೇಳಿದ್ದಾರೆ. ಇನ್ನು “ಏಕರೂಪತೆ” (ಏಕರೂಪತೆ) ಕೇವಲ ಭಾಷೆಗೆ ಸೀಮಿತವಾಗದೆ, ಎಲ್ಲ ಧರ್ಮದವರಿಗೂ ಸಮಾನ ಕಾನೂನು ಮತ್ತು ಸ್ವಾಯತ್ತತೆ ಸಿಗುವಲ್ಲಿಯೂ ಇರಬೇಕು. ಸಾಂಸ್ಕೃತಿಕ ಹೆಮ್ಮೆಯು ಅಂಧಾಭಿಮಾನವಾಗಬಾರದು. ಭಾಷೆಯ ಜೊತೆಗೆ ನೀವು ಹೇಳಿದಂತೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಬಗ್ಗೆಯೂ ಸುಸಂಬದ್ಧವಾದ ಚರ್ಚೆ ನಡೆಯುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ ಎಂದು ಈ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಯುವತಿಯರೇ ನಿಮ್ಮ ಖಾಸಗಿ ಫೋಟೋ ಇಟ್ಟುಕೊಂಡು ಯಾರಾದರೂ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರಾ? ಹೀಗೆ ಮಾಡಿದ್ರೆ ಸಾಕು

ಇನ್ನು ಈ ಬಗ್ಗೆ ಉತ್ತರ ಭಾರತದ ಪಂಜಾಬ್ ಹಾಗೂ ಈಶಾನ್ಯ ಭಾರತದ ಪಶ್ಚಿಮ ಬಂಗಾಳದ ಜನರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಬೆಂಗಾಲಿಗಳು ಹಿಂದಿ ಅಲ್ಲ, ಬಂಗಾಳಿ ಮಾತನಾಡುತ್ತಾರೆ. ನಾವು ಇಂಗ್ಲಿಷ್ ಅನ್ನು ಸಂಪರ್ಕ ಭಾಷೆಯಾಗಿ ನಮ್ಮ ದೇಶವನ್ನು ಮತ್ತೆ ಒಗ್ಗೂಡಿಸಬೇಕು ಎಂದು ನೆಟ್ಟಿಗರು ಹೇಳಿದ್ದಾರೆ. ಅದೇ ರೀತಿ ಪಂಜಾಬ್‌ನಲ್ಲಿ ನಾವು ಪಂಜಾಬಿ ಮಾತನಾಡುತ್ತೇವೆ. ಇನ್ನು ಈ ಪೋಸ್ಟ್‌ಗೆ ಕಮೆಂಟ್‌ನಲ್ಲಿ ಸಂಪೂರ್ಣ ಪೋಸ್ಟ್ ಅನ್ನು ಕಮೆಂಟ್ ಮಾಡಲಾಗಿದೆ. ಹಿಂದಿಯವರು ನೀವು ಪಾಕಿಸ್ತಾನದ ಹಿಂದಿ ಹಾಗೂ ಉರ್ದು ಮಾತನಾಡಿ, ಪಶ್ಚಿಮ ಬಂಗಾಳ ಸೇರಿದಂತೆ ದಕ್ಷಿಣ ಭಾರತೀಯರು ನಿಜವಾದ ಭಾರತೀಯರು ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 6:37 pm, ಮಂಗಳವಾರ, 3 ಫೆಬ್ರವರಿ 26





Source link

Leave a Reply

Your email address will not be published. Required fields are marked *