T20 ವಿಶ್ವಕಪ್ 2026: T20 ನಿಂದ ದ್ವಿತೀಯ ಸುತ್ತಿಗೆ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 21 ರಂದು ನಡೆಯಲಿರುವ ಸೂಪರ್-8 ರೌಂಡ್‌ನ ಮೊದಲ ಮ್ಯಾಚ್‌ನಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ. ಇನ್ನು ಫೆಬ್ರವರಿ 22 ರಂದು ನಡೆಯಲಿರುವ ಮೊದಲ ಬಾಲಕಿಯರ ಇಂಗ್ಲೆಂಡಿನಲ್ಲಿ ಮತ್ತು ಶ್ರೀಲಂಕಾ ಕಣಕ್ಕಿಳಿದರೆ, ದ್ವಿತೀಯ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣಸಲಿವೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲ್ಲವೆನ್ ಬದಲಿಸಲಿದೆಯಾ ಎಂಬ ಪ್ರಶ್ನೆ. ಏಕೆಂದರೆ ಟೀಮ್ ಇಂಡಿಯಾ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ ಕಳೆದ ಮೂರು ಮ್ಯಾಚ್‌ಗಳಲ್ಲಿ ಸೊನ್ನೆ ಹಾಡುತ್ತಿದ್ದಾರೆ.
ಇದಾಗ್ಯೂ ಅಭಿಷೇಕ್ ಶರ್ಮಾ ಅವರನ್ನು ಆಡುವ ಬಳಗದಿಂದ ಕೈ ಬಿಡುವ ಸಾಧ್ಯತೆಯಿಲ್ಲ. ಏಕೆಂದರೆ ತಂಡದಲ್ಲಿರುವ ಮತ್ತೋರ್ವ ಆರಂಭಿಕ ದಾಂಡಿಗ ಸಂಜು ಸ್ಯಾಮ್ಸನ್ ಫಾರ್ಮ್‌ನಲ್ಲ. ಹೀಗಾಗಿ ಅಭಿಷೇಕ್‌ಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಹೆಚ್ಚು.
ಅಷ್ಟೇ ಅಲ್ಲದೆ ಕಳೆದ ಅಂಗಡಿ ಕಣಕ್ಕಿಳಿದ ಬಳಗವೇ ಸೌತ್ ಆಫ್ರಿಕಾ ವಿರುದ್ಧ ಕೂಡ ಆಡುವ ಸಾಧ್ಯತೆಯಿದೆ. ಏಕೆಂದರೆ ನೆದರ್‌ಲ್ಯಾಂಡ್ಸ್ ವಿರುದ್ಧ ಪಂದ್ಯ ನಡೆದಿರುವುದು ಕೂಡ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ. ಹೀಗಾಗಿ ಅದೇ ಪ್ಲೇಯಿಂಗ್ ಇಲ್ಲವೇ ಈ ಮ್ಯಾಚ್ನಲ್ಲೂ ಮುಂದುವರೆಯುವ ಸಾಧ್ಯತೆಯಿದೆ.
ಅದರಂತೆ ಟೀಮ್ ಇಂಡಿಯಾ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಕಣಕ್ಕಿಳಿಯಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಆಡಿದ್ರೆ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸಲಿದ್ದಾರೆ.
ಇನ್ನು ಆಲ್ರೌಂಡರ್‌ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್‌ಗೆ ಸ್ಥಾನ ಸಿಗಲಿದೆ. ಜೊತೆಗೆ ಫಿನಿಶರ್ ಪಾತ್ರದಲ್ಲಿ ರಿಂಕು ಸಿಂಗ್ ಕಣಕ್ಕಿಳಿಯಲಿದ್ದಾರೆ. ಇನ್ನುಳಿದಂತೆ ಬೌಲರ್‌ಗಳಾಗಿ ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲ್ಲವೆನ್ ಈ ಕೆಳಗಿನಂತಿರುತ್ತದೆ…
- ಇಶಾನ್ ಕಿಶನ್
- ಅಭಿಷೇಕ್ ಶರ್ಮಾ
- ತಿಲಕ್ ವರ್ಮಾ
- ಸೂರ್ಯಕುಮಾರ್ ಯಾದವ್
- ಹಾರ್ದಿಕ್ ಪಾಂಡ್ಯ
- ಅಕ್ಷರ್ ಪಟೇಲ್
- ಶಿವಂ ದುಬೆ
- ರಿಂಕು ಸಿಂಗ್
- ವರುಣ್ ಚಕ್ರವರ್ತಿ
- ಅರ್ಷದೀಪ್ ಸಿಂಗ್
- ಜಸ್ಪ್ರೀತ್ ಬುಮ್ರಾ.
ಇದನ್ನೂ ಓದಿ: ಟೀಮ್ ಇಂಡಿಯಾ ಸೆಮಿಫೈನಲ್‌ಗೆ ತಲುಪಿಲ್ಲ: ಪಾಕ್ ಕ್ರಿಕೆಟಿಗನ ಭವಿಷ್ಯ
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ಸಿಂಗ್ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್.