ಜನವರಿ, ಮಾರ್ಚ್ 2: ಮಧ್ಯಪ್ರಾಚ್ಯ ಹೊತ್ತಿ ಉರಿಯುತ್ತಿದೆ. ಇಸ್ರೇಲ್, ಇರಾನ್ ಸಂಘರ್ಷದಲ್ಲಿ (ಮಧ್ಯಪ್ರಾಚ್ಯ ಬಿಕ್ಕಟ್ಟು) ಅಮೆರಿಕ ಅಖಾಡಕ್ಕೆ ಪ್ರವೇಶ ಮಾಡಿದೆ. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಸೇರಿದಂತೆ ಹಲವು ಪ್ರಮುಖ ಮುಖಂಡರನ್ನು ಅಮೆರಿಕ ಹಾಗೂ ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಕೊಂಡು ಹಾಕಿವೆ. ಗಲ್ಫ್ ದೇಶಗಳಿಂದ ತೈಲ ಪೂರೈಕೆಗೆ ಸೂಕ್ತವಾಗಿದೆ. ಜಾಗತಿಕವಾಗಿ ತೈಲ ಬೆಲೆ ಹೆಚ್ಚು ಮತ್ತು ಪೂರೈಕೆ ಮೊಟಕುಗೊಳ್ಳುವ ಸಾಧ್ಯತೆ ಹೆಚ್ಚು ಕಾಣುತ್ತಿದೆ.
ಒಂದು ವೇಳೆ, ತೈಲ ಪೂರೈಕೆ ನಿಂತು ಹೋದರೆ ಭಾರತಕ್ಕೆ ಏನು ತೊಂದರೆ? ಅತಿಹೆಚ್ಚು ಪೆಟ್ರೋಲ್ ಬಳಸುವ ದೇಶಗಳಲ್ಲಿ ಭಾರತ ಒಂದು. ಒಂದು ವೇಳೆ ತೈಲ ಪೂರೈಕೆ ಸ್ಥಗಿತಗೊಂಡರೆ ಭಾರತದಲ್ಲಿ ಪೆಟ್ರೋಲಿಯಂ ಸಂಗ್ರಹ ಈಗ ಎಷ್ಟು ದಿನಕ್ಕೆ ಸಾಕಾಗುತ್ತದೆ? ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಅವರು ಕಳೆದ ತಿಂಗಳು (ಫೆಬ್ರವರಿ) ಈ ಬಗ್ಗೆ ರಾಜ್ಯಸಭೆಯಲ್ಲಿ ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ಇರುವ ಪೆಟ್ರೋಲಿಯಂ ಸಂಗ್ರಹವು 74 ದಿನಗಳಿಗೆ ಸಾಕಾಗುವಷ್ಟು ಇದೆಯಂತೆ.
ಅಂತಾರಾಷ್ಟ್ರೀಯ ಸಂಘಟನೆಯಾದ ಐಐಎ (IEA) ಒಂದು ದೇಶದಲ್ಲಿ ಕನಿಷ್ಠ 90 ದಿನಗಳು ಆಗುವಷ್ಟು ಪೆಟ್ರೋಲ್ ಸಂಗ್ರಹವಾಗಿರಬೇಕು ಎಂದು ಶಿಫಾರಸು ಮಾಡಲಾಗಿದೆ. ತೈಲ ನಿಕ್ಷೇಪಗಳಿಲ್ಲದ ದೇಶಗಳಿಗೆ ಈ ನಿಯಮ ಅಥವಾ ಶಿಫಾರಸು ಅನ್ವಯವಾಗುತ್ತದೆ. ಹಲವು ಐರೋಪ್ಯ ದೇಶಗಳು ಈ ನಿಯಮವನ್ನು ಪಾಲಿಸುತ್ತಿವೆ. ಅವನನ್ನು ಬಿಟ್ಟು ಹೆಚ್ಚಿನ ದೇಶಗಳಲ್ಲಿ ಇಷ್ಟು ಸಂಗ್ರಹ ಇಲ್ಲ. ಭಾರತದಲ್ಲಿ ಬಹಳ ಪೆಟ್ರೋಲ್ ಬಳಕೆಯಲ್ಲಿ 74 ದಿನಗಳು ಆಗುವಷ್ಟು ಸಂಗ್ರಹ ಹೊಂದಿರುವುದು ಗಮನಾರ್ಹ.
ಇದನ್ನೂ ಓದಿ: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಎಷ್ಟು ಮುಂದುವರಿಯಬಹುದು, ಟ್ರಂಪ್ ಹೇಳಿದ್ದೇನು?
ಭಾರತದಲ್ಲಿ ಮೂರು ಕಡೆ ತೈಲ ಸಂಗ್ರಹ ಸ್ಥಳಗಳಿವೆ. ಕರ್ನಾಟಕದ ಮಂಗಳೂರು ಮತ್ತು ಉಡುಪಿಯಲ್ಲಿ, ಹಾಗೂ ಆಂಧ್ರದ ವಿಶಾಖಪಟ್ಟಣದಲ್ಲಿ ಕ್ಯಾವರ್ನ್ಗಳು ಅಥವಾ ಭೂಗತ ತೈಲಗಾರಗಳಿವೆ. ಒಡಿಶಾದಲ್ಲೂ ಒಂದು ತೈಲ ಸಂಗ್ರಹವನ್ನು ಸ್ಥಾಪಿಸಲಾಗುತ್ತಿದೆ. ಒಡಿಶಾದ್ದು ಭಾರತದಲ್ಲಿ 90 ದಿನಗಳಿಗಾಗುವಷ್ಟು ಪೆಟ್ರೋಲ್ ಸಂಗ್ರಹವನ್ನು ಹೊಂದಿರಲು ಸಾಧ್ಯವಿದೆ. ಈಗಿರುವ ಮೂರು ಕ್ಯಾವರ್ನ್ಗಳಲ್ಲಿ 5 ಎಂಟಿಗೂ ಅಧಿಕ ಕಚ್ಚಾ ತೈಲವನ್ನು ಇರಿಸಲಾಗಿದೆ. ಇದಲ್ಲದೆ, ದೇಶದ ಹಲವೆಡೆ ರಿಫೈನರಿಗಳಿವೆ. ಅಲ್ಲಿಯೂ ಸಾಕಷ್ಟು ಕಚ್ಚಾ ತೈಲ ಮತ್ತು ಅದನ್ನು ಸಂಸ್ಕರಿಸಿ ಪೆಟ್ರೋಲಿಯಂ ತಯಾರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ತುರ್ತು ಸ್ಥಿತಿ ಬಂದಾಗ ಈ ರಿಫೈನರಿಯಲ್ಲಿರುವ ಪೆಟ್ರೋಲ್ ಅನ್ನು ಆಂತರಿಕ ಬಳಕೆಗೆ ಬಳಸಬಹುದಾಗಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ