IndiGo flights: ಇಂಡಿಗೋದಲ್ಲಿ ಪ್ರಯಾಣಿಸುವ ಮುನ್ನ ಎರಡು ಬಾರಿ ಯೋಚಿಸಿ ಎಂದ ಉದ್ಯಮಿ; ವಿಮಾನ ವ್ಯತ್ಯಯದ ವೀಡಿಯೋ ವೈರಲ್

IndiGo flights: ಇಂಡಿಗೋದಲ್ಲಿ ಪ್ರಯಾಣಿಸುವ ಮುನ್ನ ಎರಡು ಬಾರಿ ಯೋಚಿಸಿ ಎಂದ  ಉದ್ಯಮಿ;  ವಿಮಾನ ವ್ಯತ್ಯಯದ ವೀಡಿಯೋ ವೈರಲ್


ಇಂಡಿಗೋದಲ್ಲಿ ಪ್ರಯಾಣಿಸುವ ಮುನ್ನ ಎರಡು ಬಾರಿ ಯೋಚಿಸಿ ಎಂದ ಉದ್ಯಮಿ

ಬೆಂಗಳೂರು, ಡಿಸೆಂಬರ್ 5: ಇಂಡಿಗೋ ವಿಮಾನಗಳ ಸಂಚಾರದಲ್ಲಿ ಇಂದೂ ವ್ಯತ್ಯಯವಾಗಿದೆ (ಇಂಡಿಗೋ ವಿಮಾನ), ಬೆಂಗಳೂರು ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ 550 ವಿಮಾನಗಳ ಸಂಚಾರ ಏಕಾಏಕಿ ರದ್ದಾಗಿದೆ. ಇಂದಿಗೆ ಸತತ 3 ನೇ ದಿನ ಈ ಅವ್ಯವಸ್ಥೆ ಮುಂದುವರೆದಿದ್ದು, ಸಿಬ್ಬಂದಿಯ ಕೊರೆತೆ ಈ ಸಮಸ್ಯೆಗೆ ಕಾರಣವೆಂದು ಹೇಳಲಾಗುತ್ತಿದೆ. ಇದರ ಹಿನ್ನೆಲೆ ಇನ್ಸ್ಟಾಗ್ರಾಮ್ನಲ್ಲಿ ಉದ್ಯಮಿ ವಿಥಿಕಾ ಅಗರ್ವಾಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇಂಡಿಗೋದಲ್ಲಿ ಪ್ರಯಾಣಿಸುವ ಮೊದಲು ಎರಡು ಬಾರಿ ಯೋಚಿಸಿ ಎಂದು ಬರೆದಿದ್ದಾರೆ.

ಉದ್ಯಮಿ ಹಂಚಿಕೊಂಡ ವೀಡಿಯೊ ವೈರಲ್

ಇಂಡಿಗೋ ವಿಮಾನ ವ್ಯತ್ಯಯದ ವೀಡಿಯೋ ಒಂದನ್ನು ಹಂಚಿಕೊಂಡಿರುವ ವಿಥಿಕಾ, ನೀವು ಮುಂದಿನ 24 ರಿಂದ 48 ಗಂಟೆಗಳಲ್ಲಿ ಇಂಡಿಗೋದ ಮೂಲಕ ಪ್ರಯಾಣಿಸಲು ಬಯಸುತ್ತಿರುವಾಗ ಇನ್ನೆರಡು ಬಾರಿ ಯೋಚನೆ ಮಾಡಿ. ಜೊತೆಗೆ ಪ್ಲಾನ್ ಬಿ ಸಹ ಇಟ್ಟುಕೊಳ್ಳಿ ಎಂದು ಎಚ್ಚರಿಕೆ ನೀಡಲಾಗಿದೆ. ಅವರು ಹಂಚಿಕೊಂಡ ವೀಡಿಯೊದಲ್ಲಿ ಟರ್ಮಿನಲ್ ಮೂಲಕ ಹಾದು ಹೋಗಿರುವ ಉದ್ದವಾದ ಸರತಿ ಸಾಲನ್ನು ತೋರಿಸುತ್ತಾ, ಇಲ್ಲಿ ಜನರು ವಿಮಾನ ನಿಲ್ದಾಣದಲ್ಲಿ ಆಹಾರ ಪಡೆಯಲು ಸರತಿ ಸಾಲಿನಲ್ಲಿ ಕಾದು ನಿಂತಿದ್ದಾರೆ. ಏಕೆಂದರೆ ಅವರ ವಿಮಾನಗಳು ಹಾರುತ್ತವೆಯೋ ಅಥವಾ ರದ್ದಾಗಿವೆಯೋ ಎಂದೆಂದೂ ತಿಳಿಯುತ್ತಿಲ್ಲ.ಈ ಬಗ್ಗೆ ಯಾವುದೇ ಮಾಹಿತಿ ಬರುತ್ತಿಲ್ಲ. ಈಗಲೆ ಚೆಕ್ ಇನ್ ಮಾಡಿರುವ ಜನರು ಹೊರಹೋಗಲೂ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇನ್ಸ್ಟಾಗ್ರಾಮ್ನಲ್ಲಿ ಉದ್ಯಮಿ ಪೋಸ್ಟ್ ಮಾಡಿದ್ದಾರೆ

ಸತತ ಮೂರನೇ ದಿನವೂ ಅವ್ಯವಸ್ಥೆ

ಬುಧವಾರ ಕನಿಷ್ಠ 150 ವಿಮಾನಗಳ ರದ್ದತಿಯ ನಂತರ ಗುರುವಾರವಷ್ಟೇ 300 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇಂದೂ 550 ವಿಮಾನಗಳ ಸಂಚಾರ ರದ್ದಾಗಿದೆ. ಈ ಬಗ್ಗೆ ಅಧಿಕಾರಿಗಳು ಹೇಳಿದಂತೆ, ಗುರುವಾರದ ರದ್ದತಿಗಳಲ್ಲಿ ದೆಹಲಿಯಿಂದ 33, ಹೈದರಾಬಾದ್‌ನಿಂದ 68, ಮುಂಬೈನಿಂದ 85 ಮತ್ತು ಬೆಂಗಳೂರಿನಿಂದ 73 ವಿಮಾನಗಳಿವೆ. ಒಂದು ದಿನದ ಮೊದಲು, ದೆಹಲಿಯಲ್ಲಿ 67, ಬೆಂಗಳೂರು 42, ಹೈದರಾಬಾದ್ 40 ಮತ್ತು ಮುಂಬೈ 33 ವಿಮಾನಗಳು ರದ್ದುಗೊಂಡವು. ಭಾರತದಾದ್ಯಂತ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದು, ಏರ್ ಇಂಡಿಯಾ, ಆಕಾಶ ವಿಮಾನಗಳು ಮತ್ತು ಸ್ಪೈಸ್‌ಜೆಟ್ ಸೇರಿದಂತೆ ಅಮೆಡಿಯಸ್ ಸಾಫ್ಟ್‌ವೇರ್ ಬಳಸುವ ವಿಮಾನಯಾನ ಸಂಸ್ಥೆಗಳು ಮಂಗಳವಾರ ರಾತ್ರಿ ಒಂದು ಗಂಟೆ ಚೆಕ್-ಇನ್ ವ್ಯವಸ್ಥೆಯ ವೈಫಲ್ಯವನ್ನು ಎದುರಿಸಿದವು.

ಇದನ್ನೂ ಓದಿ ಇಂಡಿಗೋ ವಿಮಾನಗಳು: 550 ಇಂಡಿಗೋ ವಿಮಾನಗಳ ಸಂಚಾರ ರದ್ದು, ಬೆಂಗಳೂರು ಸೇರಿ ಹಲವೆಡೆ ಪ್ರಯಾಣಿಕರ ಓಡಾಟ

ಕಾರ್ಯಾಚರಣೆಯ ವಿಫಲತೆ ಸಿಇಓ

ಇಂಡಿಗೋ ಸಿಐಒ ಕಾರ್ಯಾಚರಣೆಯ ವೈಫಲ್ಯಗಳನ್ನು ಒಪ್ಪಿಕೊಂಡಿದೆ, ಸಣ್ಣ ತಂತ್ರಜ್ಞಾನದ ದೋಷಗಳು, ಬದಲಾವಣೆಗಳು, ಹವಾಮಾನ ಪರಿಸ್ಥಿತಿಗಳು, ವಾಯುಯಾನ ಪರಿಸರದಲ್ಲಿ ಹೆಚ್ಚಿದ ದಟ್ಟಣೆ ಮತ್ತು ಹೊಸದಾಗಿ ಬಿಡುಗಡೆಯಾದ ಎಫ್‌ಡಿಟಿಎಲ್ ಪ್ರದರ್ಶನಗಳ ಅನುಷ್ಠಾನ ಈ ಎಲ್ಲದರ ಹಿನ್ನೆಲೆ ಈ ಪರಿಸ್ಥಿತಿ ಎದುರಾಗಿದೆ ಎಂದು ಇಂಡಿಗೋ ಸಿಐಒ ಪೀಟರ್ ಎಲ್ಬರ್ಸ್ ಹೇಳಿದ್ದಾರೆ. ಪ್ರಯಾಣಿಕರಾದ ವ್ಯಾಪಕವಾದ ತೊಂದರೆಯನ್ನು ಅವರು ಒಪ್ಪಿಕೊಂಡರು, ನಾವು ಸಮಸ್ಯೆಗೊಳಗಾದ ಗ್ರಾಹಕರನ್ನು ಪೂರ್ವಭಾವಿಯಾಗಿ ತಲುಪಿದ್ದೇವೆ. ಅವರ ಸಮಸ್ಯೆಯನ್ನು ಕಡಿಮಡ ಮಾಡಲು ಕಡಿಮೆ ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಮಾಡಬೇಕೆಂದು ಅವರು ಹೇಳಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *