ಹೂಡಿಕೆದಾರರಿಗೆ Escrow ಅಕೌಂಟ್; ಸರ್ಕಾರದಿಂದ ಹಣ ಗ್ಯಾರಂಟಿ; ಆಂಧ್ರ ಸಿಎಂ ಕ್ರಮಕ್ಕೆ ಉದ್ಯಮ ವಲಯ ಶ್ಲಾಘನೆ

ಹೂಡಿಕೆದಾರರಿಗೆ Escrow ಅಕೌಂಟ್; ಸರ್ಕಾರದಿಂದ ಹಣ ಗ್ಯಾರಂಟಿ; ಆಂಧ್ರ ಸಿಎಂ ಕ್ರಮಕ್ಕೆ ಉದ್ಯಮ ವಲಯ ಶ್ಲಾಘನೆ


ವಿಶಾಖಪಟ್ಟಣಂ, ನವೆಂಬರ್ 19: ಉದ್ದಿಮೆಗಳಿಗೆ ಸರ್ಕಾರಗಳು ವಿವಿಧ ರೀತಿಯ ಉತ್ತೇಜಕ ಪ್ಯಾಕೇಜ್‌ಗಳನ್ನು ಪ್ರಕಟಿಸುತ್ತವೆ. ಆದರೆ, ಅದನ್ನು ಪಡೆಯುವಷ್ಟರಲ್ಲಿ ಉದ್ಯಮಗಳು ಬೇಸ್ತುಬಿದ್ದಿರುತ್ತವೆ. ಸರ್ಕಾರಿ ಕಚೇರಿಗಳನ್ನು ಅಲೆದಾಡಿ, ಒರಲಿ, ಕಾಡಿ ಬೇಡಿ ಹಣ ಪಡೆಯಲಾಗುತ್ತಿತ್ತು. ಇದನ್ನು ತಪ್ಪಿಸಲು ಆಂಧ್ರ ಸರ್ಕಾರ ಎಸ್ಕ್ರೋ ಅಕೌಂಟ್ (ಎಸ್ಕ್ರೋ ಖಾತೆ) ಅನ್ನು ಜಾರಿಗೆ ತಂದಿದೆ. ಆಂಧ್ರದ ಈ ಕ್ರಮಕ್ಕೆ ಉದ್ಯಮ ವಲಯ ಶ್ಲಾಘನೆ ವ್ಯಕ್ತಪಡಿಸಿದೆ.

ಏನಿದು ಎಸ್ಕ್ರೋ ಅಕೌಂಟ್?

ಒಂದು ಉದ್ಯಮವು ಸರ್ಕಾರದ ಜೊತೆ ಒಡಂಬಡಿಕೆಗೆ (ಎಂಒಯು) ಸಹಿ ಹಾಕಿದ ಬಳಿಕ ಆ ಸಂಸ್ಥೆಯ ಹೆಸರಿನಲ್ಲಿ ಎಸ್‌ಕ್ರೋ ಅಕೌಂಟ್ ಅನ್ನು ತೆರೆಯಲಾಗಿದೆ. ಎಂಒಯುನಲ್ಲಿ ಸರ್ಕಾರವು ಆ ಸಂಸ್ಥೆಗೆ ಪ್ರೋತ್ಸಾಹಕ ಧನ ಕೊಡುವುದಾಗಿ ತಿಳಿಸಿದ್ದರೆ, ಆ ಹಣವನ್ನು ಬ್ಯಾಂಕ್ ಮೂಲಕ ಎಸ್‌ಕ್ರೋ ಅಕೌಂಟ್‌ಗೆ ಕಳುಹಿಸುವುದಿಲ್ಲ. ಉದ್ಯಮಿಗಳು ಈ ಹಣಕ್ಕಾಗಿ ಸರ್ಕಾರಿ ಕಚೇರಿಗಳನ್ನೋ, ಮಂತ್ರಿ ಮಾಗಧರನ್ನೋ ಭೇಟಿ ಮಾಡಲು ಅಲೆದಾಡಬೇಕಿಲ್ಲ. ರಿಯಲ್ ಟೈಮ್‌ನಲ್ಲಿ ಫಂಡ್‌ಗಳನ್ನು ಎಸ್ಕ್ರೋ ಅಕೌಂಟ್‌ಗೆ ಸರ್ಕಾರ ರಿಲೀಸ್ ಮಾಡುತ್ತದೆ.

ಇದನ್ನೂ ಓದಿ: ಬರಲಿದೆ ಹೊಸ ಆಧಾರ್; ಹೆಸರು, ನಂಬರ್, ವಿಳಾಸ ಮರೆಮಾಚಿರುವ ಕಾರ್ಡ್ ಸದ್ಯದಲ್ಲೇ

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕಳೆದ ವಾರ ಆರಂಭವಾದ 30ನೇ ವರ್ಷದ ಐ ಪಾರ್ಟ್ನರ್ ಶಿಪ್ ಸಮಿತಿಯಲ್ಲಿ ಈ ಘೋಷಣೆ ಮಾಡಲಾಗಿದೆ. ತಮ್ಮ ಸರ್ಕಾರ ಹೂಡಿಕೆದಾರರಿಗೆ ಅನುಕೂಲವಾಗುವ ನೀತಿ ಮತ್ತು ವಾತಾವರಣ ನೀಡಿದೆ. ಈಗ ಎಸ್ಕ್ರೋ ಅಕೌಂಟ್ ವ್ಯವಸ್ಥೆಯನ್ನು ಮಾಡಿದೆ. ಈಗ ಹೂಡಿಕೆದಾರರು ಈ ರಾಜ್ಯಕ್ಕೆ ಬಂದು ನಿಲ್ಲುವುದು ಬಾಕಿ ಇದೆ.

90 ಲಕ್ಷ ಕೋಟಿ ರೂ ಹೂಡಿಕೆಯ ಗುರಿ

ಕಳೆದ 18 ತಿಂಗಳಿನಲ್ಲಿ ಆಂಧ್ರವು 20 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸಿದೆ. ಇದರಿಂದ 20 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಮುಂದಿನ ಮೂರು ವರ್ಷದ 500 ಬಿಲಿಯನ್ ಡಾಲರ್ ಹೂಡಿಕೆಯ ಗುರಿ ಇದೆ. ಕಾಣಿಸಿಕೊಂಡರೆ 50 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಮುಂದಿನ ಒಂದು ಕೋಟಿಯಲ್ಲಿ 1 ಟ್ರಿಲಿಯನ್ ಡಾಲರ್ (89 ಲಕ್ಷ ರೂ. ಹೂಡಿಕೆ ಆಕರ್ಷಿಸುವ ಹೆಗ್ಗುರಿ ಇದೆ ಎಂದು ಚಂದ್ರಬಾಬು ನಾಯ್ಡು ತಮ್ಮ ಆಕಾಂಕ್ಷೆ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಟೆಕ್ ಸಮಿಟ್‌ನಲ್ಲಿ ಕರ್ನಾಟಕದ ಕಿಯೋ ಪಿಸಿ ಆಕರ್ಷಣೆ; ಅಗ್ಗದ ಬೆಲೆಗೆ ಎಐ ಕಂಪ್ಯೂಟರ್

ಸಿಎಂ ನಾಯ್ಡುರನ್ನು ಹೊಗಳಿದ ಆನಂದ್ ಮಹೀಂದ್ರ

ಹೂಡಿಕೆದಾರರಿಗೆ ಎಸ್‌ಕ್ರೋ ಅಕೌಂಟ್ ತೆರೆಯುವ ಕ್ರಮದ ಬಗ್ಗೆ ಚಂದ್ರಬಾಬು ನಾಯ್ಡು ಮಾತನಾಡುತ್ತಿರುವ ವಿಡಿಯೋ ಉದ್ಯಮಿ ಆನಂದ್ ಮಹೀಂದ್ರ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಈ ಮನುಷ್ಯನನ್ನು ಹಿಡಿದು ನಿಲ್ಲಿಸಲು ಆಗಲ್ಲ. ಮಾಡಿದ್ದರಿಂದ ನಾನು ಅವರನ್ನು ಕಾಣುತ್ತಾ ಬಂದಿದ್ದೇನೆ. ಅಭಿವೃದ್ಧಿಯ ಬಗ್ಗೆ ಅವರಿಗಿರುವ ಅಭಿಲಾಷೆ, ಅವರ ಹೊಸತನದ ತರಲು ಅವರಿಗಿರುವ ಬಯಕೆಯನ್ನು ನಾನು ಮೆಚ್ಚಿಕೊಳ್ಳುತ್ತೇನೆ’ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.

ಆನಂದ್ ಮಹೀಂದ್ರ ಅವರ ಎಕ್ಸ್ ಪೋಸ್ಟ್ ಲಿಂಕ್ ಇಲ್ಲಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 6:03 pm, ಬುಧವಾರ, 19 ನವೆಂಬರ್ 25



Source link

Leave a Reply

Your email address will not be published. Required fields are marked *