ವೈದ್ಯರ ನಿರ್ಲಕ್ಷ್ಯ ಆರೋಪ: ಹಾವೇರಿಯಲ್ಲಿ ತಾಯಿ ಗರ್ಭದಿಂದ ಜೀವಂತ ಹೊರ ಬರಲೇ ಇಲ್ಲ ಮಗು!

ವೈದ್ಯರ ನಿರ್ಲಕ್ಷ್ಯ ಆರೋಪ: ಹಾವೇರಿಯಲ್ಲಿ ತಾಯಿ ಗರ್ಭದಿಂದ ಜೀವಂತ ಹೊರ ಬರಲೇ ಇಲ್ಲ ಮಗು!


ಯಾದಗಿರಿ, ಡಿಸೆಂಬರ್ 07: ಪ್ರಪಂಚ ನೋಡುವ ಮೊದಲೇ ತಾಯಿ ಹೊಟ್ಟೆಯಲ್ಲೇ ಗಂಡು ಮಗು ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ನಗರದಲ್ಲಿರುವ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರ ವಿರುದ್ಧ ಆರೋಪ ಕೇಳಿಬಂದಿದ್ದು, ಹೆರಿಗೆ ನೋವಿನಿಂದ ಮಹಿಳೆ ನರಳುತ್ತಿದ್ದರೂ ಆಸ್ಪತ್ರೆಯಲ್ಲಿ ಬೆಡ್ ಕೊಡದೆ, ಚಿಕಿತ್ಸೆ ನೀಡಿಲ್ಲ ಎಂದು ದೂರು ನೀಡಲಾಗಿದೆ. ಮಗುವಿನ ಮೃತದೇಹದ ಜೊತೆ ಆಸ್ಪತ್ರೆ ಮುಂದೆ ಕುಳಿತು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಏನು?

ಯಾದಗಿರಿ ತಾಲೂಕಿನ ಬಳಿಚಕ್ರ ತಾಂಡದ ನೀಲಬಾಯಿ ಎಂಬ ಮಹಿಳೆಗೆ ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಅವರ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕುಟುಂಬಸ್ಥರು ಕರೆತಂದಿದ್ದರು. ಆದರೆ ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಸರಿಯಾಗಿ ಪ್ರತಿಕ್ರಿಯಿಸಿಲ್ಲ. ಅವರಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರದೆ ಕನಿಷ್ಠ ಬೆಡ್ ಕೂಡ ನೀಡಿಲ್ಲ. ಇವತ್ತು ಅವರಿಗೆ ರಕ್ತಸ್ರಾವ ಪ್ರಾರಂಭವಾದ ಕಾರಣ ಶಸ್ತ್ರಚಿಕಿತ್ಸೆಯ ಮೂಲಕ ಬೆಳಿಗ್ಗೆ ವೈದ್ಯರು ಹೊರತೆಗೆದಿದ್ದಾರೆ. ಆದರೆ ದುರಾದ್ರಷ್ಟವಶಾತ್ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ.

ಇದನ್ನೂ ಓದಿ: ಅಳಿಯನ ಜೊತೆ ಅಕ್ರಮ ಸಂಬಂಧ ಆರೋಪ; ಮಹಿಳೆಯ ಮೇಲೆ ಕುಟುಂಬಸ್ಥರಿಂದಲೇ ಅಮಾನವೀಯ ಕೃತ್ಯ

ಸಮಯಕ್ಕೆ ಸರಿಯಾಗಿ ನೀಲಬಾಯಿ ಅವರಿಗೆ ಹೆರಿಗೆ ಮಾಡಿಸಿದ್ದರೆ ಮಗು ಬದುಕಿದೆ ಎಂದು ಕುಟುಂಬಸ್ಥರು ಕಿಡಿ ಕಾರಿದ್ದು, ನಿರ್ಲಕ್ಷ್ಯ ವಹಿಸಿದ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಹಾಜರಾಗಿದ್ದಾರೆ. ಮೃತ ನವಜಾತ ಶಿಶುವಿನ ಶವದ ಜೊತೆ ಆಸ್ಪತ್ರೆಯ ಮುಂದೆ ಕಣ್ಣೀರು ಹಾಕುತ್ತಾ ಪ್ರತಿಭಟನೆ. ನೀಲಬಾಯಿ ದೇವಪ್ಪ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, 9 ವರ್ಷಗಳ ಬಳಿಕ ಈಗ ಗಂಡು ಮಗುವಾಗಿದೆ. ಆದರೆ, ಮಗು ತಾಯಿಯ ಹೊಟ್ಟೆಯಲ್ಲೇ ಆರಿಸಿರೋದು ಕುಟುಂಬಸ್ಥರ ಈಮ್ಮಡಿಗೊಳಿಸಿದೆ.

ಇದೇ ಮಾದರಿಯ ಘಟನೆ ಕೆಲವು ದಿನಗಳ ಹಿಂದೆ ಹಾವೇರಿಯಲ್ಲೂ ನಡೆದಿತ್ತು. ಆಸ್ಪತ್ರೆಯ ಶೌಚಾಲಯಕ್ಕೆ ಹೋಗೋ ಮಾರ್ಗದಲ್ಲೇ ಮಹಿಳೆಗೆ ಹೆರಿಗೆಯಾದ ಪರಿಣಾಮ, ಆಗತಾನೇ ಜನಿಸಿದ ನವಜಾತ ಶಿಶುವಿಗೆ ಪೆಟ್ಟಾಗಿ ಮಗು ಕಾಣಿಸಿಕೊಂಡಿತ್ತು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು , ನರ್ಸ್‌ಗಳ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿಯಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಆದರೆ, ಆರೋಪ ನಿರಾಕರಿಸಿದ್ದ ಆಸ್ಪತ್ರೆಯ ವೈದ್ಯರು, ಮಗು ಹೊಟ್ಟೆಯಲ್ಲೇ ಇರುವುದಾಗಿ ಸ್ಪಷ್ಟನೆ ನೀಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *