ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಗಾರ
ಬೆಂಗಳೂರು, ನವೆಂಬರ್ 03: ರೇಸ್ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನದಲ್ಲಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಪಕ್ಷದ ನಿಲುವು ಮಂಡನೆ ವಿಧಾನದ ಕುರಿತು ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಾಗಾರ ನಡೆಸಿತು. ಈ ವೇಳೆ ಆರ್.ಎಸ್.ಎಸ್ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಲು ಮುಂದಾಗಿರುವ ವಿಷಯವೂ ಚರ್ಚೆ, ಈ ರೀತಿಯ ಸೃಷ್ಟಿಯಾಗದಾಗ ಯಾವ ರೀತಿ ಕೌಂಟರ್ RSS ಬಿಜೆಪಿ ಜನಪ್ರತಿನಿಧಿಗಳಿಗೆ ಮಾಡಬೇಕು.
ಏನೆಲ್ಲ ಸಲಹೆ?
ಕಾಂಗ್ರೆಸ್ ಸೇರಿ ಬೇರೆ ಸರ್ಕಾರಗಳು ಬಂದಾಗ ನರೇಟಿವ್ ಸೆಟ್ ಆಗುತ್ತಲೇ ಇರುತ್ತೆ. ಆರ್‌ಎಸ್‌ಎಸ್‌ನ ನಿಷೇಧವೂ ಇಂತಹದ್ದೇ ಸನ್ನಿವೇಶ ಸೃಷ್ಟಿಯಾಗಿದೆ. ಆ ಸಾಮಾಜಿಕ ಮಾಧ್ಯಮಗಳು ಈ ಕಾಲದಲ್ಲಿ ಇರಲಿಲ್ಲ. ಈಗ ಸಾಮಾಜಿಕ ಮಾಧ್ಯಮಗಳು ಮುಂಚೂಣಿಯಲ್ಲಿದ್ದು, ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬ ಪರಿಸ್ಥಿತಿ ಇದೆ. ಕೆಲವೊಂದಕ್ಕೆ ಮೌನವೇ ಉತ್ತರ. ಪಕ್ಷದಲ್ಲಿ ಒಂದು ರಿಸರ್ಚ್ ವಿಂಗ್ ಇಟ್ಟುಕೊಳ್ಳಿ. ಈ ರೀತಿಯ ಸಂದರ್ಭ ಬಂದಾಗ ಏನು ಮಾಡಬೇಕೆಂದು ಯೋಚಿಸಿ ಎಂದು RSS ಬಿಜೆಪಿ ನಾಯಕರಿಗೆ. ಧರ್ಮಸ್ಥಳ ಪ್ರಕರಣವನ್ನು ಅವರು ಯಾವ ರೀತಿ ಮುನ್ನೆಲೆಗೆ ತಂದರು ಎಂಬುದನ್ನ ನೋಡಿದ್ದೇವೆ. ಇಂತಹ ಸಂದರ್ಭ ಬಂದಾಗ ಸರಿಯಾಗಿ ಕೌಂಟರ್ ಎಂದು ಕಾರ್ಯಾಗಾರದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕೂಡ ಸಲಹೆ ಸೂಚನೆ.
ಇದನ್ನೂ ಓದಿ: ಆರ್‌ಎಸ್‌ಎಸ್ ಪರೇಡ್‌ಗೆ ಏಕೆ ಅನುಮತಿ ಕೊಡ್ಬೇಕು?: ಸಚಿವ ಪ್ರಿಯಾಂಕ್ ಖರ್ಗೆ ಗರಂ
ಕಾರ್ಯಾಗಾರದಲ್ಲಿ ಯಾರೆಲ್ಲ ಭಾಗಿ?
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕರಾದ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಶಾಸಕರಾದ ಡಾ.ಅಶ್ವತ್ಥ್ ನಾರಾಯಣ, ಜನಾರ್ದನ ರೆಡ್ಡಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಕೆಲವು ಸದಸ್ಯರು, ಶಾಸಕರು ಮತ್ತು ಎಂಎಲ್ಸಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಪಕ್ಷದ ರಾಜ್ಯ ಮತ್ತು ಜಿಲ್ಲಾ ವಕ್ತಾರರು, ಸುದ್ದಿಗೋಷ್ಠಿ ನಡೆಸುವ ಬಿಜೆಪಿ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.