Headlines

ವಿಜಯ್-ರಶ್ಮಿಕಾ ಮದುವೆ ರೂಮರ್ಸ್ ಒಂದೆರಡಲ್ಲ! ಸಿಎಂ ಕೂಡಾ ಭಾಗಿ?

ವಿಜಯ್-ರಶ್ಮಿಕಾ ಮದುವೆ ರೂಮರ್ಸ್ ಒಂದೆರಡಲ್ಲ! ಸಿಎಂ ಕೂಡಾ ಭಾಗಿ?

ವಿಜಯ್-ರಶ್ಮಿಕಾ ಮದುವೆ ರೂಮರ್ಸ್ ಒಂದೆರಡಲ್ಲ! ಸಿಎಂ ಕೂಡಾ ಭಾಗಿ?
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಸುದ್ದಿ ಜೋರಾಗಿದೆ. ಫೆಬ್ರವರಿ 26 ರಂದು ಇವರಿಬ್ಬರ ವಿವಾಹ ನಡೆಯಲಿದೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ಅದಕ್ಕೂ ಮುನ್ನ ನಡೆಯುವ ಹಲ್ದಿ, ಸಂಗೀತ ಕಾರ್ಯಕ್ರಮಗಳ ದಿನಾಂಕ ಯಾವುದು ಗೊತ್ತಾ? ಈ ಜೋಡಿಯ ಮದುವೆ ಸಂಭ್ರಮ ಯಾವಾಗ ಶುರುವಾಗಲಿದೆ? ಇಲ್ಲಿದೆ ಮಾಹಿತಿ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಸುದ್ದಿ ಮತ್ತಷ್ಟು ಜೋರಾಗಿದೆ. ಫೆಬ್ರವರಿ 24ರಂದು ಹಲ್ದಿ, 25ರಂದು ಸಂಗೀತ ಕಾರ್ಯಕ್ರಮದೊಂದಿಗೆ ಮದುವೆ ಸಂಭ್ರಮ ಶುರುವಾಗಲಿದೆ ಎನ್ನಲಾಗಿದೆ.

ಫೆಬ್ರವರಿ 26ರಂದು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಇವರ ವಿವಾಹ ನಡೆಯಲಿದೆ. ಉದಯಪುರದ ಹೊರವಲಯದಲ್ಲಿರುವ ‘ದಿ ಮೆಮೆಂಟೋಸ್ ಬೈ ಐಟಿಸಿ ಹೊಟೇಲ್ಸ್’ ಈ ಮದುವೆಗೆ ವೇದಿಕೆಯಾಗಲಿದೆ ಎಂದು ಬಲವಾಗಿ ಹೇಳಲಾಗುತ್ತಿದೆ.
ಈ ಜೋಡಿ ಯಾವುದೇ ಆಡಂಬರವಿಲ್ಲದೆ, ಕೇವಲ ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಖಾಸಗಿಯಾಗಿ ಮದುವೆಯಾಗಲು ನಿರ್ಧರಿಸಿದೆ. ಮದುವೆ ಖಾಸಗಿಯಾಗಿದ್ದರೂ, ಆರತಕ್ಷತೆಯನ್ನು ಅದ್ದೂರಿಯಾಗಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ. 2026ರ ಮಾರ್ಚ್ 4ರಂದು ಹೈದರಾಬಾದ್‌ನ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾದ ‘ತಾಜ್ ಕೃಷ್ಣ’ದಲ್ಲಿ ಭರ್ಜರಿ ರಿಸೆಪ್ಷನ್ ಏರ್ಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಆರತಕ್ಷತೆಗೆ ಟಾಲಿವುಡ್ ಮತ್ತು ಬಾಲಿವುಡ್‌ನ ಹಲವು ಗಣ್ಯರು ಹಾಜರಾಗುವ ಸಾಧ್ಯತೆಯಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಈ ಸುದ್ದಿ ನಿಜವಾದರೆ, ಇದು ಈ ವರ್ಷದ ಅತಿದೊಡ್ಡ ಸೆಲೆಬ್ರಿಟಿ ಮದುವೆ ಸಮಾರಂಭವಾಗಬಹುದು. ಈ ಜೋಡಿ ತಮ್ಮ ಖಾಸಗಿತನಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಮದುವೆಯ ಫೋಟೋ ಮತ್ತು ವಿಡಿಯೋಗಳು ಲೀಕ್ ಆಗದಂತೆ ಕಟ್ಟುನಿಟ್ಟಿನ ‘ನೋ-ಫೋನ್’ ಪಾಲಿಸಿಯನ್ನು ಜಾರಿಗೆ ತರಲಿದೆ ಎನ್ನಲಾಗಿದೆ.

ವಿಜಯ್ ಮತ್ತು ರಶ್ಮಿಕಾ ಮದುವೆಯ ವಿಡಿಯೋ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ಒಂದು ಪ್ರಖ್ಯಾತ ಓಟಿಟಿ ಸಂಸ್ಥೆ ದೊಡ್ಡ ಆಫರ್ ನೀಡಿತ್ತಂತೆ. ಆದರೆ, ವಿಜಯ್ ದೇವರಕೊಂಡ ಈ ಆಫರ್ ಅನ್ನು ವಿನಯದಿಂದಲೇ ತಿರಸ್ಕರಿಸಿದ್ದಾರೆ. ತಮ್ಮ ಜೀವನದ ಈ ಪ್ರಮುಖ ಕ್ಷಣವನ್ನು ವ್ಯಾಪಾರೀಕರಣಗೊಳಿಸದೆ, ಸಂಪೂರ್ಣವಾಗಿ ವೈಯಕ್ತಿಕವಾಗಿ ಇಟ್ಟುಕೊಳ್ಳಲು ವಿಜಯ್ ಬಯಸಿದ್ದಾರೆ. ಅಭಿಮಾನಿಗಳಲ್ಲಿ ಎಷ್ಟೇ ಕುತೂಹಲವಿದ್ದರೂ, ಈ ಸಮಾರಂಭವನ್ನು ಖಾಸಗಿಯಾಗಿ ನಡೆಸುವ ಅವರ ನಿರ್ಧಾರ ಸ್ಪಷ್ಟವಾಗಿದೆ.

Source link

Leave a Reply

Your email address will not be published. Required fields are marked *