Headlines

International Day of Happiness 2026: ಬದುಕಿನಲ್ಲಿ ಸದಾ ಸಂತೋಷದಿಂದಿರಲು ಏನು ಮಾಡಬೇಕು?

International Day of Happiness 2026:  ಬದುಕಿನಲ್ಲಿ ಸದಾ ಸಂತೋಷದಿಂದಿರಲು ಏನು ಮಾಡಬೇಕು?


ಇಂಟರ್ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್ 2026: ಬದುಕಿನಲ್ಲಿ ಸದಾ ಸಂತೋಷದಿಂದಿರಲು ಏನು ಮಾಡಬೇಕು?

ಇಂದು ಹೆಚ್ಚಿನ ಜನರ ಬಳಿ ಒಂದೊಳ್ಳೆ ಉದ್ಯೋಗವಿದೆ, ಮನೆ, ಕಾರು, ಇತ್ಯಾದಿ ಎಲ್ಲಾ ಸೌಕರ್ಯಗಳೂ ಇವೆ. ಆದರೆ ಒತ್ತಡದ ಬದುಕಿನಿಂದಾಗಿ ಅವರ ಬಳಿ ಸಂತೋಷ (ಸಂತೋಷ) ಅನ್ನೋದೇ ಇಲ್ಲ. ಇಂದಿನ ಈ ಒತ್ತಡದ ಬದುಕಿನಲ್ಲಿ ಹೆಚ್ಚಿನ ಜನರು ಈ ಸಂತೋಷಕ್ಕಾಗಿ ಹಾತೊರೆಯುತ್ತಿದ್ದಾರೆ. ಸಂತೋಷವು ಮಾನವನ ಜೀವನದ ಮೂಲಭೂತ ಗುರಿಯನ್ನು ಹೊಂದಿದ್ದು, ಟೆನ್ಶನ್‌ನ ಎಲ್ಲಾ ಪಕ್ಕಕ್ಕಿಟ್ಟು ಖುಷಿಯಾಗಿರಲು ಜನರನ್ನು ಪ್ರೇರೇಪಿಸಲು ಹಾಗೂ ಸಂತೋಷವಾಗಿ ದೊರೆತಿರುವ ಲಾಭಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಮಾರ್ಚ್ 20 ರಂದು ಅಂತರರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಸಂತೋಷದ ದಿನದ ಇತಿಹಾಸವೇನು?

ಸಂತೋಷದ ದಿನವನ್ನು ಭೂತಾನ್ ಆರಂಭಿಸಿತು. ಭೂತಾನ್ ತನ್ನ ಆರ್ಥಿಕ ಬೆಳವಣಿಗೆಯ ಮೇಲೆ ಮಾತ್ರ ಗಮನಹರಿಸದೆ, 1970 ರಿಂದ ಒಟ್ಟು ರಾಷ್ಟ್ರೀಯ ಸಂತೋಷಕ್ಕೂ ಆದ್ಯತೆ ನೀಡಿತು. ಸಂತೋಷದ ಸಮಾಜದಲ್ಲಿ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಯೋಗಕ್ಷೇಮವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನಂಬಿದ್ದ ಭೂತಾನ್‌ ಸಂತೋಷದ ದಿನವನ್ನು ಆಚರಿಸಲು ಪ್ರಾರಂಭಿಸಿತು. ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 12, 2012 ರಂದು ತನ್ನ ನಿರ್ಣಯ 66/281 ರಲ್ಲಿ ಮಾರ್ಚ್ 20 ರಂದು ಅಂತರರಾಷ್ಟ್ರೀಯ ಸಂತೋಷ ದಿನವೆಂದು ಘೋಷಿಸಿತು. ಅಂದಿನಿಂದ ಇದು ಪ್ರಪಂಚದಾದ್ಯಂತದ ಜನರ ಜೀವನದಲ್ಲಿ ಸಂತೋಷದ ಮಹತ್ವವನ್ನು ತಿಳಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂತೋಷದ ದಿನವನ್ನು ಆಚರಿಸುತ್ತಾ ಬರುತ್ತಿದೆ.

ಅಂತಾರಾಷ್ಟ್ರೀಯ ಸಂತೋಷದ ದಿನದ ಮಹತ್ವವೇನು?

  • ಈ ದಿನದ ಉದ್ದೇಶವು ಪ್ರಪಂಚದಾದ್ಯಂತ ಸಂತೋಷದ ಮಹತ್ವವನ್ನು ಉತ್ತೇಜಿಸುವುದು ಮತ್ತು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮಹತ್ವವನ್ನು ಜನರಿಗೆ ಅರ್ಥಮಾಡಿಸುವುದು.
  • ಈ ದಿನವನ್ನು ಆಚರಿಸುವ ಉದ್ದೇಶವು ಪ್ರಪಂಚದಾದ್ಯಂತ ಸಂತೋಷವನ್ನು ಹರಡುತ್ತದೆ ಮತ್ತು ಜನರು ಸಕಾರಾತ್ಮಕ ಜೀವನವನ್ನು ನಡೆಸಲು ಪ್ರೋತ್ಸಾಹಿಸುವುದು.
  • ಸಂತೋಷವು ಕೇವಲ ಬಾಹ್ಯ ವಿಷಯಗಳ ಮೇಲೆ ಅವಲಂಬಿತವಾಗಿಲ್ಲ, ಬದಲಾಗಿ ನಮ್ಮ ಮಾನಸಿಕ ಯೋಗಕ್ಷೇಮ, ಇತರರ ಸಂಬಂಧಗಳು ಮತ್ತು ಜೀವನದ ಸಣ್ಣ ಸಂತೋಷಗಳ ಮೇಲೂ ಅವಲಂಬಿತವಾಗಿದೆ ಎಂದು ಈ ದಿನ ನೆನಪಿಸುತ್ತದೆ.

ಇದನ್ನೂ ಓದಿ: ರಾಷ್ಟ್ರೀಯ ಲಸಿಕೆ ದಿನವನ್ನು ಆಚರಿಸುವು ಹಿಂದಿನ ಉದ್ದೇಶವೇನು ತಿಳಿಯಿರಿ

ಸಂತೋಷವಾಗಿರಲು ಏನು ಮಾಡಬೇಕು?

  • ನಗು ಮತ್ತು ಮುಗುಳ್ನಗೆ ಸ್ವಾಭಾವಿಕವಾಗಿ ಸಂತೋಷವನ್ನು ತರುತ್ತದೆ. ಹಾಗೆ, ನಿಮ್ಮ ಮುಖದಲ್ಲಿ ನಗುವುದನ್ನು ಇಟ್ಟುಕೊಳ್ಳಿ.
  • ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಸಾಕಷ್ಟು ನಿದ್ರೆ ನಿಮ್ಮನ್ನು ಒಳಗಿನಿಂದ ಸಂತೋಷಪಡಿಸುತ್ತದೆ.
  • ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ, ತನ್ನ ಸುತ್ತಲಿನ ಜನರೊಂದಿಗೆ ಸಕಾರಾತ್ಮಕ ರೀತಿಯಲ್ಲಿ ಬದುಕಿ, ಸಕಾರಾತ್ಮಕತೆ ನಿಮಗೆ ಸಂತೋಷವನ್ನು ನೀಡುತ್ತದೆ.
  • ನಿಮ್ಮಲ್ಲಿರುವವರಲ್ಲಿ ಕೃತಜ್ಞರಾಗಿರಿ ಮತ್ತು ಸಂತೋಷವಾಗಿರಿ.
  • ಭವಿಷ್ಯದ ಬಗ್ಗೆ ಚಿಂತಿಸುವ ಬದಲು ಅಥವಾ ಹಿಂದಿನ ತಪ್ಪುಗಳ ಬಗ್ಗೆ ಯೋಚಿಸುವ ಬದಲು, ವರ್ತಮಾನದಲ್ಲಿ ಬದುಕಿ, ಆನಂದಿಸಿ.
  • ನಿಮ್ಮೊಂದಿಗೆ ನೀವು ಸಮಯ ಕಳೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *