ಪತಿ ಪರಿಚಯಿಸಿದ ರಶ್ಮಿಕಾ ಮಂದಣ್ಣ, ಒಂದೇ ಪೋಸ್ಟ್‌ನಲ್ಲಿ ಮದ್ವೆ ಸಂಭ್ರಮ ಜೊತೆ ಟೀಕೆಗೂ ಉತ್ರರಿಸಿದ್ರಾ? ವಿಜಯ್ ದೇವರಕೊಂಡ ಪತ್ನಿಯಾಗಿರುವ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ರಶ್ಮಿಕಾ ಬರಹ ಹಲವು ಪ್ರಶ್ನೆಗಳಿಗೂ ಉತ್ತರಿಸಿದಂತಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಅದ್ಧೂರಿಯಾಗಿ ನೆರವೇರಿದೆ. ಉದಯಪುರದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಹಲವು ನಿರ್ಬಂಧದ ಕಾರಣ ಫೋಟೋ, ವಿಡಿಯೋ ಬಹಿರಂಗವಾಗಿರಲಿಲ್ಲ. ಇದೀಗ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರು ಮದುವೆ ಫೋಟೋ, ವಿಡಿಯೋ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮದ ಫೋಟೋ ಹಂಚಿಕೊಂಡು ಪತಿ ವಿಜಯ್ ದೇವರಕೊಂಡ ಕುರಿತು ಕೆಲ ವಿಚಾರಗಳನ್ನು ಹೇಳಿದ್ದಾರೆ. ನಿಜವಾದ ಪ್ರೀತಿ ಏನು ಅನ್ನೋದು ಕಲಿಸದ ವ್ಯಕ್ತಿ ಇವರು. ಮನಶಾಂತಿ ಜೊತೆ ದೊಡ್ಡ ಕನಸು ಕಾಣಲು ಪ್ರೇರಪಿಸಿ, ಅದನ್ನು ಸಾಧಿಸುವ ಸಾಮರ್ಥ್ಯ ನನಗಿದೆ ಎಂದು ಪ್ರತಿ ದಿನ ನಂಬಿಸಿ, ಹುರಿದುಂಬಿಸಿದ ವ್ಯಕ್ತಿ ಇವರು. ನಾನು ಮನಸಾರೆ ಕುಣಿಯುವುದನ್ನು ಸಂಭ್ರಮಿಸಿ ಪ್ರೋತ್ಸಾಹಿಸಿದ ವ್ಯಕ್ತಿ ಇವರು. ಸ್ನೇಹಿತರೊಂದಿಗೆ ಪ್ರವಾಸ ಅತ್ಯುತ್ತಮ ಸಮಯ ಹಾಗೂ ಕೆಲಸ ಎಂದು ಹೇಳಿಕೊಟ್ಟವರು ಇವರು. ನಾನು ಕಂಡ ಮಹಿಳೆ ಕನಸಿನಂತೆ ಬದುಕಲು ಸ್ವಾತಂತ್ರ್ಯ, ಅವಕಾಶವನ್ನು ನೀಡಿದ ವ್ಯಕ್ತಿ ಇವರು ಎಂದು ವಿಜಯ್ ದೇವರಕೊಂಡ ಕುರಿತು ರಶ್ಮಿಕಾ ಹೇಳಿಕೊಂಡಿದ್ದಾರೆ.

ವಿಜ್ಜು, ನಿನ್ನ ಬಗ್ಗೆ ನನಗಿರುವ ಭಾವನೆ ವಿವರಿಸಲು ಪದಗಳು ಸಾಲುತ್ತಿಲ್ಲ. ನನ್ನ ಎಲ್ಲಾ ಸಾಧನೆ, ಹೋರಾಟ, ಸುಖ ದುಃಖ, ಸಂತೋಷ ಜೀವನ ಎಲ್ಲದ್ದಕ್ಕೂ ಈಗ ಅರ್ಥ ಸಿಕ್ಕಿದಂತಿದೆ. ಕಾರಣ ಇವೆಲ್ಲದಕ್ಕೂ ನೀನು ಸಾಕ್ಷಿಯಾಗಿದ್ದಿ. ಕಾರಣ ನೀನು ನನ್ನ ಜೀವನದ ಭಾಗವೇ ಆಗಿದ್ದಿಯ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ನಿನ್ನ ಪತ್ನಿಯಾಗಲು ನಾನು ಅತೀವ ಉತ್ಸುಕಳಾಗಿದ್ದೇನೆ. ನಿನ್ನ ಪತ್ನಿ ಎಂದು ಕರೆಯಿಸಿಕೊಳ್ಳುವುದು ನನಗೆ ಹೆಮ್ಮೆ. ಈಗ ಪಾರ್ಟಿ ಸಮಯ ಎಂದು ರಶ್ಮಿಕಾ ಮಂದಣ್ಣ ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಕೆಲ ಪ್ರಶ್ನೆಗಳಿಗೆ ಟೀಕೆಗಳಿಗೆ ಪರೋಕ್ಷಾಗಿ ಉತ್ತರಿಸಿದ್ದಾರಾ ಅನ್ನೋ ಚರ್ಚೆಗಳು ಶುರುವಾಗಿದೆ.

ಆರಂಭದಲ್ಲೇ ರಶ್ಮಿಕಾ ಮಂದಣ್ಣ ನೈಜ, ನಿಜ ಪ್ರೀತಿ ಹೇಗಿರುತ್ತೆ? ಏನು? ಅನ್ನೋದು ತೋರಿಸಿಕೊಟ್ಟ ವ್ಯಕ್ತಿ ದೇವರಕೊಂಡ ಎಂದಿದ್ದಾರೆ. ಇದರ ಹಿಂದಿನ ಅರ್ಥ ಬಿಡಿಸಿ ಹೇಳಬೇಕಾಗಿಲ್ಲ. ಒಂದು ಚಿತ್ರರಂಗಕ್ಕೆ ಸೀಮಿತವಾಗಿರದೇ ದೊಡ್ಡ ಕನಸು ಕಂಡು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಲು ಸದಾ ಪ್ರೇರಣೆ ನೀಡಿ ವಿಶ್ವಾಸ ನೀಡಿದ್ದೇ ದೇವರಕೊಂಡ ಎಂದಿದ್ದಾರೆ. ಈ ಮೂಲಕ ರಶ್ಮಿಕಾ ಮಂದಣ್ಣ ತಮ್ಮ ಕರಿಯರ್ ಸೀಮಿತವಾಗಿ ಉಳಿಯುವ ಬದಲು ಸಾಧನೆಗೆ ತೆರೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಪರೋಕ್ಷವಾಗಿ ಟೀಕೆಗಳಿಗೂ ಉತ್ತರಿಸಿದ್ದಾರೆ.

ನಾನು ಕಂಡ ಕನಸಿನಂತೆ ಮಹಿಳೆಯಾಗಿದ್ದೇನೆ. ಅದಕ್ಕೆ ಕಾರಣ ಆದವನು ನೀನು ಎಂದು ದೇವರಕೊಂಡ ಶ್ಲಾಘಿಸಿದ್ದಾರೆ. ಇದೇ ವೇಳೆ ನನ್ನ ಎಲ್ಲಾ ಸುಖ, ದುಃಖ , ನೋವು ನಲಿವು ನಿನಗೆ ಗೊತ್ತಿದೆ ಎಂದಿದ್ದಾರೆ. ಈ ಮೂಲಕ ವಿಜಯ್ ದೇವರಕೊಂಡ ತನ್ನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ ಅನ್ನೋ ಕುರಿತು ರಶ್ಮಿಕಾ ಮಂದಣ್ಣ ಪರೋಕ್ಷವಾಗಿ ಹೇಳಿದ್ದಾರೆ.

Source link
ಪತಿ ಪರಿಚಯಿಸಿದ ರಶ್ಮಿಕಾ ಮಂದಣ್ಣ, ಒಂದೇ ಪೋಸ್ಟ್‌ನಲ್ಲಿ ಮದ್ವೆ ಸಂಭ್ರಮ ಜೊತೆ ಟೀಕೆಗೂ ಉತ್ರರಿಸಿದ್ರಾ?