
ಜನವರಿ, ಏಪ್ರಿಲ್ 2: ಇರಾನ್ ಯುದ್ಧಕ್ಕೆ ಮೊದಲು ಲಾಭದಾಯಕ ಹಾದಿಯಲ್ಲಿದೆ ಭಾರತೀಯ ಷೇರು ಮಾರುಕಟ್ಟೆ (ಸ್ಟಾಕ್ ಮಾರುಕಟ್ಟೆ) ಈಗ ಮತ್ತೆ ತತ್ತರಿಸುತ್ತಿದೆ. ಇರಾನ್ ಯುದ್ಧ ಆರಂಭವಾದ ಬಳಿಕ ಗಡಗಡ ನಡುಗುತ್ತಿದೆ. ಮಾರ್ಚ್ ತಿಂಗಳ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಶೇ 11ರಷ್ಟು ಕುಸಿತ ಕಂಡಿವೆ. ಹೆಚ್ಚಿನ ಸೂಚ್ಯಂಕಗಳು ಶೇ. 10 ಹೆಚ್ಚಿನ ಕುಸಿತ ಕಂಡಿವೆ.
ಇಸ್ರೇಲ್ ಮತ್ತು ಅಮೆರಿಕ ದೇಶಗಳು ಇರಾನ್ ಮೇಲೆ ದಾಳಿ ಮಾಡುವ ಮುನ್ನ, ಅಂದರೆ ಫೆಬ್ರುವರಿ 27 ರಂದು ಬಿಎಸ್‌ಇಯಲ್ಲಿ ಪಟ್ಟಿ ಆಗಿರುವ ಕಂಪನಿಗಳ ಒಟ್ಟು ಷೇರು ಸಂಪತ್ತು 463.5 ಲಕ್ಷ ಕೋಟಿ ರೂ ಇತ್ತು. ಇವತ್ತು ಏಪ್ರಿಲ್ 2 ರಂದು ಇವುಗಳ ಒಟ್ಟು ಮಾರುಕಟ್ಟೆ ಬಂಡವಾಳ 422.4 ಲಕ್ಷ ಕೋಟಿ ರೂ ಇದೆ. ಅಂದರೆ, ಬರೋಬ್ಬರಿ 41 ಲಕ್ಷ ಕೋಟಿ ಷೇರು ರೂಸಂಪತ್ತು ಕುಸಿದಿದೆ. ಹೂಡಿಕೆದಾರರಿಗೆ 41 ಲಕ್ಷ ಕೋಟಿ ರೂ ನಷ್ಟ ಆಗಿದೆ.
ಇದನ್ನೂ ಓದಿ: ಬೆಂಗಳೂರಿನ ಶೇ. 80 ಐಟಿ ಕೂಲಿಗಳಿಗೆ ಇನ್ನು 3 ವರ್ಷದ ಕೆಲಸ ಇರೋದಿಲ್ಲ: ಶಾಕ್ ಕೊಟ್ಟಿದೆ ರೆಡ್ಡಿ ಪೋಸ್ಟ್
ಷೇರು ಮಾರುಕಟ್ಟೆಗೆ ಮುಂದೇನು ಗತಿ?
ಇರಾನ್ ಯುದ್ಧವು ಜಾಗತಿಕ ತೈಲ ಮಾರುಕಟ್ಟೆಯನ್ನು ಅಲುಗಾಡಿಸಿದೆ. ತೈಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಆಗಿದೆ. ಇದು ಒಟ್ಟಾರೆ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ವಿದೇಶೀ ಹೂಡಿಕೆದಾರರು ಸಾಲುಸಾಲಾಗಿ ನಿರ್ಗಮಿಸುತ್ತಿದ್ದಾರೆ. ಇರಾನ್ ಯುದ್ಧ ನಿಂತು, ತೈಲ ಪೂರೈಕೆ ಮತ್ತು ಇತರ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಮರಳುವವರೆಗೂ ಷೇರುಪೇಟೆ ತುಮುಲ ಹೀಗೆ ಮುಂದುವರಿಯುತ್ತದೆ.
ಈ ಸಂದಿಗ್ಧತೆ ಸದ್ಯಕ್ಕೆ ಮುಕ್ತಾಯವಾಗುವುದಿಲ್ಲ ಎಂದು ಅನಿಸುವಂತೆ ಡೊನಾಲ್ಡ್ ಟ್ರಂಪ್ ರಣಕಹಳೆ ಮುಂದುವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇರಾನ್ ಮೇಲೆ ಇನ್ನೂ ದೊಡ್ಡ ಮಟ್ಟದಲ್ಲಿ ಪ್ರಹಾರ ಇರುತ್ತದೆ. ಅಮೆರಿಕದ ಹುಟ್ಟಡಗಿಸುವವರೆಗೂ ಯುದ್ಧ ನಿಲ್ಲಿಸಿಲ್ಲ ಎಂದು ಇರಾನ್ ಕೂಡ ಹೇಳುತ್ತಿದೆ. ಹೀಗಾಗಿ, ಹೂಡಿಕೆದಾರರು ಏನು ಮಾಡಬೇಕೆಂದು ದಿಕ್ಕುತೋಚದೆ ಉಳಿಯುವ ಪರಿಸ್ಥಿತಿ ಇದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಇದನ್ನೂ ಓದಿ: ಏರ್ಟೆಲ್ ಈಗ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್; ಅಗ್ರಸ್ಥಾನ ಯಾರದ್ದು ಟಾಪ್-10 ಕಂಪನಿಗಳು?
ಹೂಡಿಕೆದಾರರಿಗೆ ಸಲಹೆಗಳು…
ಈಕ್ವಿವಿ ಮಾರುಕಟ್ಟೆ ಕಳೆದ ಒಂದೂವರೆ ಭಾರತದಲ್ಲಿ ಬಹಳ ಕುಸಿತ ಕಂಡಿದೆ. ಬಹಳಷ್ಟು ಷೇರುಗಳ ಮಾರುಕಟ್ಟೆ ಕರೆಕ್ಷನ್ ಆಗಿದೆ. ಅನೇಕ ಉತ್ತಮ ಷೇರುಗಳು ಒಳ್ಳೆಯ ಬೆಲೆಗೆ ಸಿಗುತ್ತಿವೆ. ಕಂಪನಿಯ ಸಲಹೆ ಪ್ರಕಾರ, ಉತ್ತಮ ಷೇರುಗಳನ್ನು ಖರೀದಿಸಲು ಮಾರುಕಟ್ಟೆ ಅವಕಾಶ ನೀಡಿದೆ. ಹಾಗಂತ, ಷೇರುಗಳಲ್ಲಿ ಸಿಕ್ಕಾಪಟ್ಟೆ ಹೂಡಿಕೆ ಮಾಡಬೇಡಿ ಎನ್ನುವ ಎಚ್ಚರಿಕೆಯೂ ಇದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ