Headlines

ಅರ್ಜುನ್ ತೆಂಡೂಲ್ಕರ್ ಯಾರ್ಕರ್​ಗೆ LSG ಬ್ಯಾಟರ್​ಗಳು ತಬ್ಬಿಬ್ಬು..!

ಅರ್ಜುನ್ ತೆಂಡೂಲ್ಕರ್ ಯಾರ್ಕರ್​ಗೆ LSG ಬ್ಯಾಟರ್​ಗಳು ತಬ್ಬಿಬ್ಬು..!


ಅರ್ಜುನ್ ತೆಂಡೂಲ್ಕರ್ ಯಾರ್ಕರ್‌ಗೆ LSG ಬ್ಯಾಟರ್‌ಗಳು ತಬ್ಬಿಬ್ಬು..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಪಂದ್ಯಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ಭರ್ಜರಿ ಸಿದ್ಧತೆಯಲ್ಲಿದೆ. ಈ ಸಿದ್ಧತೆಗಳ ನಡುವೆ ಎಲ್ಲರ ಗಮನ ಸೆಳೆದಿರುವುದು ಯುವ ವೇಗಿ ಅರ್ಜುನ್ ತೆಂಡೂಲ್ಕರ್. ಲಕ್ನೋ ಸೂಪರ್ ಜೈಂಟ್ಸ್ ತಂಡವು ಭಾಗವಾಗಿರುವ ಅರ್ಜುನ್ ತೆಂಡೂಲ್ಕರ್ ನೆಟ್ಸ್‌ನಲ್ಲಿ, ತಮ್ಮ ನಿಖರವಾದ ಯಾರ್ಕರ್ ದಾಳಿಯ ಮೂಲಕ ಪ್ರಮುಖ ಬ್ಯಾಟರ್‌ಗಳನ್ನು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಲಕ್ನೋ ತಂಡದ ನಾಯಕ ರಿಷಬ್ ಪಂತ್ ಅವರಿಗೆ ಅರ್ಜುನ್ ತೆಂಡೂಲ್ಕರ್ ಸತತವಾಗಿ ಯಾರ್ಕರ್‌ಗಳನ್ನು ಎಸೆಯುವ ಮೂಲಕ ಬೆವರಿಳಿಸಿದರು. ಪಂತ್ ಅವರ ಬ್ಯಾಟಿಂಗ್ ಲಯವನ್ನು ಪರೀಕ್ಷಿಸಲು ಅರ್ಜುನ್ ಈ ತಂತ್ರವನ್ನು ಬಳಸಿಕೊಂಡರು.

ಇದಾದ ಬಳಿಕ ಸ್ಫೋಟಕ ಬ್ಯಾಟರ್ ಅಬ್ದುಲ್ ಸಮದ್ ಕೂಡ ಅರ್ಜುನ್ ಅವರ ವೇಗದ ಮತ್ತು ನಿಖರತೆಯನ್ನು ಎದುರಿಸಲು ಪರದಾಡಿದರು. ಡೆತ್ ಔಟ್‌ಗಳಲ್ಲಿ ಬೌಲಿಂಗ್ ಮಾಡುವ ಅರ್ಜುನ್ ಅವರ ಸಾಮರ್ಥ್ಯ ಈ ಅಭ್ಯಾಸದ ವೇಳೆ ಎದ್ದು ಕಾಣುತ್ತಿತ್ತು.

ಕಳೆದ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಅರ್ಜುನ್ ತೆಂಡೂಲ್ಕರ್ ಅವರನ್ನು ಈ ಬಾರಿಯ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡ ಟ್ರೇಡ್ ಮಾಡಿಕೊಂಡಿದೆ. ಈ ಟ್ರೇಡ್ ಆದ ಎಲ್ ಎಸ್ ಜಿ ಪರ ಕಣಕ್ಕಿಳಿಯಲು ಅರ್ಜುನ್ ತೆಂಡೂಲ್ಕರ್ ಗೆ ಅವಕಾಶ ಸಿಕ್ಕಿಲ್ಲ.

ನಿಖರವಾಗಿ ಯಾರ್ಕರ್‌ಗಳ ಮೂಲಕ ಗಮನ ಸೆಳೆದಿರುವ ಅರ್ಜುನ್ ತೆಂಡೂಲ್ಕರ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಪರ ಪಾದಾರ್ಪಣೆ ಮಾಡಲಿದ್ದಾರಾ ಕಾದು ನೋಡಬೇಕಾಗಿದೆ.

 



Source link

Leave a Reply

Your email address will not be published. Required fields are marked *