Headlines

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯ: ಇಂದು ಅಧಿಕೃತ ಘೋಷಣೆ? ಫ್ಯಾನ್ಸ್‌ಗೆ ಸಿಗುತ್ತಾ ಗುಡ್ ನ್ಯೂಸ್?

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯ: ಇಂದು ಅಧಿಕೃತ ಘೋಷಣೆ? ಫ್ಯಾನ್ಸ್‌ಗೆ ಸಿಗುತ್ತಾ ಗುಡ್ ನ್ಯೂಸ್?

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯ: ಇಂದು ಅಧಿಕೃತ ಘೋಷಣೆ? ಫ್ಯಾನ್ಸ್‌ಗೆ ಸಿಗುತ್ತಾ ಗುಡ್ ನ್ಯೂಸ್?

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಂಬರುವ 2026ರ ಐಪಿಎಲ್ ಟೂರ್ನಿ ಆಯೋಜನೆಗೊಳ್ಳಲಿದೆಯೇ ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯ ನಡೆಸಲು ರಾಜ್ಯ ಸರ್ಕಾರ ಅನುಮತಿಸಿದರೂ ಆರ್‌ಸಿಬಿ ತಂಡವು ಇಲ್ಲಿ ಪಂದ್ಯಗಳನ್ನು ಆಡುವುದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಬುಧವಾರ ಘೋಷಿಸುವ ನಿರೀಕ್ಷೆಯಿದೆ.

ಕೆಎಸ್‌ಸಿಎ ಹಾಗೂ ಆರ್‌ಸಿಬಿ ನಡುವೆ ನಿರಂತರ ಮಾತುಕತೆ ನಡೆಯುತ್ತಿದೆ. ಬೆಂಗಳೂರಿನಲ್ಲೇ ಪಂದ್ಯ ಆಡುವಂತೆ ಆರ್‌ಸಿಬಿಯನ್ನು ಕೆಎಸ್‌ಸಿಎ ಮನವೊಲಿಸುತ್ತಿದೆ. ಈ ನಡುವೆ ಕೆಎಸ್‌ಸಿಎ ಬುಧವಾರ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದು, ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ ಪಂದ್ಯ ಆಡಲಿದೆಯೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.

ಈ ಮೊದಲು ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಪುಣೆ, ನವಿ ಮುಂಬೈ ಹಾಗೂ ರಾಯ್ಪುರದಲ್ಲಿ ಮುಂಬರುವ ಐಪಿಎಲ್ ಪಂದ್ಯಗಳನ್ನು ಆಡಲಿದೆ ಎಂದೆಲ್ಲಾ ವರದಿಯಾಗಿತ್ತು.

ಇದೆಲ್ಲದರ ನಡುವೆ ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಅಂತರಾಷ್ಟ್ರೀಯ ಹಾಗೂ ಐಪಿಎಲ್ ಮ್ಯಾಚ್ ಆಯೋಜಿಸಲು ಷರತ್ತುಬದ್ದ ಅನುಮತಿ ನೀಡಿತ್ತು.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸ್ವಂತ ಖರ್ಚಿನಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 300ರಿಂದ 350 ಎಐ ಆಧಾರಿತ ಕ್ಯಾಮರ ಅಳವಡಿಸಲು ಒಲವು ತೋರಿತ್ತು. ಇದು ಆರ್‌ಸಿಬಿ ಅಭಿಮಾನಿಗಳ ಆಸೆಗೆ ಬಲ ತುಂಬುವಂತೆ ಮಾಡಿತ್ತು.

ಕಳೆದ ವರ್ಷ ಜೂನ್ 04ರಂದು ನಡೆದ ಆರ್‌ಸಿಬಿ ಸಂಭ್ರಮಾರಣೆಯ ಸಂದರ್ಭದಲ್ಲಿ ಕಾಲ್ತುಳಿತದ ದುರಂತದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವುದೇ ಮ್ಯಾಚ್ ನಡೆದಿಲ್ಲ. ಇದೀಗ 19ನೇ ಆವೃತ್ತಿಯ ಐಪಿಎಲ್ ಮೂಲಕವೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಕಲರವ ಶುರುವಾಗುವ ನಿರೀಕ್ಷೆ ಗರಿಗೆದರುವಂತೆ ಮಾಡಿದೆ.

Source link

Leave a Reply

Your email address will not be published. Required fields are marked *