IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 19 ನೇ ಆವೃತ್ತಿಯ ಹರಾಜಿಗಾಗಿ ಸಿದ್ಧತೆಗಳು ಪ್ರಾರಂಭವಾಗಿದೆ. ಅದರ ಮೊದಲ ಭಾಗವಾಗಿ ಇದೀಗ ರಿಜಿಸ್ಟರ್ ಆಟಗಾರರ ಶಾರ್ಟ್ ಲಿಸ್ಟ್ ರೆಡಿಯಾಗಿದೆ. ಈ ಪಟ್ಟಿಯಲ್ಲಿ 1005 ಆಟಗಾರರ ಹೆಸರು ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ.
ಅಂದರೆ ಐಪಿಎಲ್ ಮಿನಿ ಹರಾಜಿಗಾಗಿ ಬರೋಬ್ಬರಿ 1355 ಆಟಗಾರರ ಹೆಸರು ನೋಂದಣಿ ಮಾಡಿಕೊಂಡಿದ್ದರು. ಈ ಆಟಗಾರರ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಅದರಂತೆ ಇದೀಗ 350 ಆಟಗಾರರ ಪಟ್ಟಿಯನ್ನು ಹರಾಜಿಗಾಗಿ ಫೈನಲ್ ಪಟ್ಟಿ ಮಾಡಲಾಗಿದೆ.
ಇತ್ತ ಮಿನಿ ಹರಾಜಿಗಾಗಿ 350 ಆಟಗಾರರನ್ನು ಮಾತ್ರ ಆಯ್ಕೆ ಮಾಡಿರುವ ಕಾರಣ ಬರೋಬ್ಬರಿ 1005 ಆಟಗಾರರು ವಂಚಿತರಾಗಿದ್ದಾರೆ. ಅದರಂತೆ ಈ ಬಾರಿಯ ಮಿನಿ ಹರಾಜಿನಲ್ಲಿ 350 ಆಟಗಾರರ ಹೆಸರುಗಳು ಮಾತ್ರ ಕಾಣಿಸಿಕೊಳ್ಳುತ್ತವೆ.
ಇಂಡಿಯನ್ ಪ್ರಿಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜು ಪ್ರಕ್ರಿಯೆ ಇದೇ ಡಿಸೆಂಬರ್ 16 ರಂದು ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆಯಲಿದೆ. ಒಂದು ದಿನ ಮಾತ್ರ ನಡೆಯುವ ಈ ಹರಾಜಿನಲ್ಲಿ 350 ಆಟಗಾರರ ಹೆಸರನ್ನು ಆರಿಸದಿದ್ದರೆ ಕೂಗು.
ಈ 350 ಆಟಗಾರರಲ್ಲಿ ಗರಿಷ್ಠ 77 ಆಟಗಾರರಿಗೆ ಮಾತ್ರ ಈ ಬಾರಿ ಅವಕಾಶ ದೊರೆಯಲಿದೆ. ಅಂದರೆ 10 ತಂಡಗಳಲ್ಲಿ ಒಟ್ಟು 77 ಸ್ಥಾನಗಳು ಮಾತ್ರ ಖಾಲಿಯಾಗಿದೆ, ಹೀಗಾಗಿ ಈ ಬಾರಿ ಗರಿಷ್ಠ 77 ಆಟಗಾರರು ಮಾತ್ರ ಆಯ್ಕೆಯಾಗಲಿದ್ದಾರೆ. ಇನ್ನುಳಿದ 273 ಆಟಗಾರರು ಕೂಡ ಅವಕಾಶ ವಂಚಿತರಾಗಿರುವುದು ಖಚಿತ.




