ಭಾರತದ ದೊಡ್ಡ ಕ್ರಿಕೆಟ್ ಉತ್ಸವವಾದ ಇಂಡಿಯನ್ ಪ್ರೀಮಿಯರ್ ಲೀಗ್ 2026 (ಐಪಿಎಲ್ 2026) ಮೊದಲ ಹಂತದಲ್ಲಿ ಒಟ್ಟು 20 ಪಂದ್ಯಗಳು ಪ್ರಕಟವಾಗಿದೆ. ಇದೇ ಮಾರ್ಚ್ 28 ರಿಂದ ಪ್ರಾರಂಭವಾಗಲಿದೆ, ಮೊದಲ ಉದ್ಘಾಟನಾ ಪಂದ್ಯವನ್ನು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಲಿದೆ. ಅದು ತವರು ಅಂಗಳ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ.
ಐಪಿಎಲ್ ಸೀಸನ್ 19 ರ ಮೊದಲ ಪಂದ್ಯಗಳು ಮಾರ್ಚ್ 28 ರಿಂದ ಏಪ್ರಿಲ್ 12 ರವರೆಗೂ ನಡೆಯಲಿವೆ, ಈ ಮೇಲಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಮೊದಲ ಹಂತದಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಲಿದೆ. ಎರಡು ಪಂದ್ಯ ತವರು ಅಂಗಳ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ, ಇನ್ನೆರೆಡು ಮ್ಯಾಚ್ ಗುವಾಹಟ್ಟಿ ಹಾಗೂ ಮುಂಬೈನಲ್ಲಿ ಆಡಲಿದೆ.
ಮಾರ್ಚ್ 28 ರಂದು ಐಪಿಎಲ್ ಸೀಸನ್ 19 ರ ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಆಟಗಾರ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಪಂದ್ಯ ಮಾ.28ರ ಸಂಜೆ 7:30ಕ್ಕೆ.
ಉದ್ಘಾಟನಾ ಪಂದ್ಯದ ನಂತರ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ತನ್ನ ಎರಡನೇ ಮ್ಯಾಚ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವನ್ನು ಎದುರಿಸಲಿದೆ. ಈ ಪಂದ್ಯ ಏಪ್ರಿಲ್ 5ರ ಸಂಜೆ 7.30ಕ್ಕೆ ತವರು ಅಂಗಳ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ.
ಇನ್ನು ಹಾಲಿ ಚಾಂಪಿಯನ್ಸ್ ಬೆಂಗಳೂರು ತಂಡ ತನ್ನ ಮೂರನೇ ಪಂದ್ಯವನ್ನು ಏಪ್ರಿಲ್ 10 ರಂದು ರಾಜಸ್ಥಾನ ರಾಯಲ್ಸ್ ತಂಡದ ಎದುರು ಸೆಣಸಾಡಲಿದೆ. ಈ ಮ್ಯಾಚ್ ಸಂಜೆ 7.30ಕ್ಕೆ ಗುವಾಹಟ್ಟಿಯಲ್ಲಿ ನಂತರ.
ಮೊದಲ ನಿಗದಿತ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ನಾಲ್ಕನೇ ಪಂದ್ಯವನ್ನು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆಡಲಿದೆ. ಈ ಪಂದ್ಯ ಏಪ್ರಿಲ್ 12ರಂದು ಸಂಜೆ 730ಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ.





