ಐಪಿಎಲ್ 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಬಿಗ್ ಡೀಲ್ ಕುದುರಿಸಲು ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿಯು ತೆರೆಮರೆಯ ಪ್ರಯತ್ನಕ್ಕೆ ಕೈ ಹಾಕಿದೆ. ಅದು ಕೂಡ ಸ್ಟಾರ್ ಆಟಗಾರ ಕೆಎಲ್ ರಾಹುಲ್ (ಕೆಎಲ್ ರಾಹುಲ್) ಅವರಿಗಾಗಿ ಎಂಬುದು ವಿಶೇಷ.
ಹೌದು, ಕೆಎಲ್ ರಾಹುಲ್ ಅವರನ್ನು ಟ್ರೆಡ್ ಮಾಡಿಕೊಳ್ಳಲು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಮಾತುಕತೆ ಮುಂದುವರಿದಿದೆ ಎಂದು ವರದಿಯಾಗಿದೆ. ಕೆಲವು ದಿನಗಳ ಹಿಂದೆಯೇ ಕೆಕೆಆರ್ ಫ್ರಾಂಚೈಸಿ ರಾಹುಲ್ ಮೇಲೆ ಕಣ್ಣಿಟ್ಟಿದೆ ಎಂದು ಸುದ್ದಿಯಾಗಿತ್ತು. ಇದೀಗ ಕನ್ನಡಿಗ ಖರೀದಿಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಟ್ರೆಡ್ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮುಂದಿನ ಸೀಸನ್ಗಾಗಿ ಹೊಸ ನಾಯಕನನ್ನು ಹುಡುಕುತ್ತಿದೆ. ಕಳೆದ ಸೀಸನ್ ನಲ್ಲಿ ಅಜಿಂಕ್ಯ ರಹಾನೆ ಮುಂದಾಳತ್ವದಲ್ಲಿ ಕಣಕ್ಕಿಳಿದಿದ್ದ ಕೆಕೆಆರ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಈ ಮುಂಬರುವ ಐಪಿಎಲ್ ಹರಾಜಿಗೂ ಕೆಲ ಆಟಗಾರರನ್ನು ತಂಡದಿಂದ ಕೈ ಬಿಡಲು ನಿರ್ಧರಿಸಲಾಗಿದೆ.
ಐಪಿಎಲ್ ಮಿನಿ ಹರಾಜಿಗೂ ಮುನ್ನ ಹಿರಿಯ ಆಟಗಾರರನ್ನು ಕೈ ಬಿಡಲು ನಿರ್ಧರಿಸಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮತ್ತೊಮ್ಮೆ ಕೆಎಲ್ ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಇದೆ. ಕೆಎಲ್ ರಾಹುಲ್ ಆಯ್ಕೆಯಿಂದ ಕೆಕೆಆರ್ ಫ್ರಾಂಚೈಸಿಯು ತನ್ನ ಮೂರು ಸಮಸ್ಯೆಗಳಿಗೆ ಪರಿಹಾರವನ್ನು ಬಯಸುತ್ತಿದೆ.
ಅಂದರೆ ಕೆಕೆಆರ್ ತಂಡಕ್ಕೆ ಮುಂದಿನ ಸೀಸನ್ಗೆ ಉತ್ತಮ ನಾಯಕನ ಅಗತ್ಯವಿದೆ. ಇದರ ಜೊತೆಗೆ ಕೀಪರ್ ಬ್ಯಾಟರ್ ನ ಅವಶ್ಯಕತೆ ಕೂಡ ಇದೆ. ಇದೇ ಅತ್ಯುತ್ತಮ ಆರಂಭಿಕನ ಅಗತ್ಯ ಕೂಡ ಕೆಕೆಆರ್ ತಂಡಕ್ಕಿದೆ. ಇತ್ತ ಕೆಎಲ್ ರಾಹುಲ್ ಅವರನ್ನು ಟ್ರೇಡ್ ಮಾಡಿಕೊಂಡರೆ ಒಂದೇ ಆಯ್ಕೆಯ ಮೂಲಕ ಮೂರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಯಾವುದೋ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನೂತನ ಕೋಚ್ ಅಭಿಷೇಕ್ ನಾಯರ್ ಜೊತೆಗೂಡಿ ಪ್ಲ್ಯಾನ್ ರೂಪಿಸುತ್ತಿದೆ ಎಂದು ವರದಿಯಾಗಿದೆ. ಅಭಿಷೇಕ್ ನಾಯರ್ ಜತೆ ಕೆಎಲ್ ರಾಹುಲ್ ಉತ್ತಮ ಬಾಂಧವ್ಯ. ಹೀಗಾಗಿಯೇ ಕೆಕೆಆರ್ ಕೋಚ್ ಇದೀಗ ಕೆಎಲ್ ರಾಹುಲ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕರೆತರುವ ಕಾಯಕಕ್ಕೆ ಕೈ ಹಾಕಿದ್ದಾರೆ.
ಅಭಿಷೇಕ್ ನಾಯರ್ ಹಾಗೂ ಕೆಎಲ್ ರಾಹುಲ್ ಜೊತೆಗಿನ ಮಾತುಕತೆ ಯಶಸ್ವಿಯಾದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೆಎಲ್ ಆರ್ ಹೊರಬರಬಹುದು. ಇಲ್ಲಾ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಟ್ರೇಡ್ ಡೀಲ್ ಕುದುರೆಸಿ ಕೆಎಲ್ ರಾಹುಲ್ ಅವರನ್ನು ಹರಾಜಿಗೂ ಮುನ್ನ ಕೆಕೆಆರ್ ತಂಡಕ್ಕೆ ಕರೆತರಬಹುದು. ಹೀಗಾಗಿ ಐಪಿಎಲ್ 2026ರ ಮಿನಿ ಹರಾಜಿಗೂ ಮುನ್ನ ಕೆಎಲ್ ರಾಹುಲ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಅಚ್ಚರಿಪಡಬೇಕಿಲ್ಲ.






