110

Image Credit : X/@IPL
ಐಪಿಎಲ್ ಮಿನಿ ಹರಾಜು ಡಿಸೆಂಬರ್ 16ಕ್ಕೆ
19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜು ಇದೇ ಡಿಸೆಂಬರ್ 16ರಂದು ಆರಂಭವಾಗಲಿದೆ. ಈ ಮಿನಿ ಹರಾಜಿಗೆ ಒಟ್ಟು 350 ಆಟಗಾರರ ಹೆಸರು ಶಾರ್ಟ್ಲಿಸ್ಟ್ ಮಾಡಲಾಗಿದ್ದು, ಈ ಪೈಕಿ ಗರಿಷ್ಠ 77 ಆಟಗಾರರನ್ನು ಖರೀದಿಸಲು ಅವಕಾಶವಿದೆ.
210
Image Credit : BCCI
ಈ ನಾಲ್ವರ ಮೇಲೆ ಎಲ್ಲಾ ಫ್ರಾಂಚೈಸಿ ಕಣ್ಣು
ಮುಂಬರುವ ಐಪಿಎಲ್ ಮಿನಿ ಹರಾಜಿನಲ್ಲಿ ಕೆಲವು ಆಟಗಾರರ ಮೇಲೆ ದುಡ್ಡಿನ ಮಳೆ ಸುರಿಯುವ ನಿರೀಕ್ಷೆಯಿದೆ. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಈ 4 ಆಟಗಾರರ ಮೇಲೆ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿವೆ.
310
Image Credit : ANI
1. ಕ್ಯಾಮರೋನ್ ಗ್ರೀನ್
ಈ ಪಟ್ಟಿಯಲ್ಲಿರುವ ಮೊದಲ ಹೆಸರು ಆಸ್ಟ್ರೇಲಿಯಾ ಮೂಲದ ಕ್ಯಾಮರೋನ್ ಗ್ರೀನ್. ಗ್ರೀನ್ ಗಾಯದ ಸಮಸ್ಯೆಯಿಂದ ಕಳೆದ ಐಪಿಎಲ್ ಆಡಿರಲಿಲ್ಲ. ಹೀಗಾಗಿ ಈ ಬಾರಿ ಗ್ರೀನ್ ಮೇಲೆ ಎಲ್ಲರ ಕಣ್ಣಿದೆ.
410
Image Credit : stockPhoto
ಗ್ರೀನ್ ಮೇಲೆ ಕಣ್ಣಿಟ್ಟ ಕೆಕೆಆರ್-ಸಿಎಸ್ಕೆ
ಅದರಲ್ಲೂ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಆಂಡ್ರೆ ರಸೆಲ್ ಅವರನ್ನು ರಿಲೀಸ್ ಮಾಡಿದ್ದು ಸ್ಟಾರ್ ಆಲ್ರೌಂಡರ್ ಹುಡುಕಾಟದಲ್ಲಿದೆ. ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ವಿದೇಶಿ ಮಧ್ಯಮ ಕ್ರಮಾಂಕದ ಆಲ್ರೌಂಡ್ ಆಟಗಾರನ ನಿರೀಕ್ಷೆಯಲ್ಲಿದೆ. ಹೀಗಾಗಿ ಈ ಎರಡು ಫ್ರಾಂಚೈಸಿಗಳು ಗ್ರೀನ್ ಮೇಲೆ ಕಣ್ಣಿಟ್ಟಿವೆ.
510
Image Credit : stockPhoto
2. ಲಿಯಾಮ್ ಲಿವಿಂಗ್ಸ್ಟೋನ್
ಈ ಪಟ್ಟಿಯಲ್ಲಿರುವ ಇನ್ನೊಂದು ಹೆಸರು ಇಂಗ್ಲೆಂಡ್ ಮೂಲದ ಲಿಯಾಮ್ ಲಿವಿಂಗ್ಸ್ಟೋನ್. ಈ ಆಲ್ರೌಂಡರ್ ಏಕಾಂಗಿಯಾಗಿ ಪಂದ್ಯದ ದಿಕ್ಕು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಲಿವಿಂಗ್ಸ್ಟೋನ್ ಬ್ಯಾಟ್ ಘರ್ಜಿಸಿದ್ರೆ ಎದುರಾಳಿ ಪಡೆಗೆ ಉಳಿಗಾಲವಿಲ್ಲ.
610
Image Credit : ANI
ಲಿವಿಂಗ್ಸ್ಟೋನ್ಗೆ ಈ ಬಾರಿ ಜಾಕ್ಪಾಟ್?
ಕಳೆದ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿಯು ಲಿವಿಂಗ್ಸ್ಟೋನ್ಗೆ 8.75 ಕೋಟಿ ನೀಡಿ ಖರೀದಿಸಿತ್ತು. ಆದರೆ, ಟಿಮ್ ಡೇವಿಡ್ ಹಾಗೂ ರೊಮ್ಯಾರಿಯೋ ಶೆಫರ್ಡ್ ಉಳಿಸಿಕೊಂಡು ಲಿವಿಂಗ್ಸ್ಟೋನ್ ರಿಲೀಸ್ ಮಾಡಿದೆ. ಈ ಬಾರಿ ಲಿವಿಂಗ್ಸ್ಟೋನ್ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.
710
Image Credit : ANI
3. ಮಥೀಶ್ ಪತಿರಾಣ:
ಶ್ರೀಲಂಕಾ ಮೂಲದ ಮಾರಕ ವೇಗಿ ಮಥೀಶ್ ಪತಿರಾಣಾ ಅವರನ್ನು ಸಿಎಸ್ಕೆ ಫ್ರಾಂಚೈಸಿ 13 ಕೋಟಿ ನೀಡಿ ಖರೀದಿಸಿತ್ತು. ಆದರೆ ಫಿಟ್ನೆಸ್ ಕಾರಣದಿಂದಾಗಿ ಸಿಎಸ್ಕೆ ಫ್ರಾಂಚೈಸಿಯು ಈ ವೇಗಿಯನ್ನು ರಿಲೀಸ್ ಮಾಡಿದೆ.
810
Image Credit : Getty
ಲಂಕಾ ವೇಗಿ ಮೇಲೆ ಹಲವರ ಕಣ್ಣು
ಹೀಗಿದ್ದು ಪತಿರಾಣ ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾಗಬಹುದು. ಸಿಎಸ್ಕೆ ಫ್ರಾಂಚೈಸಿಯು ಮತ್ತೊಮ್ಮೆ ಪತಿರಾಣ ಖರೀದಿಸುವ ಸಾಧ್ಯತೆಯಿದೆ. ಇದರ ಜತೆಗೆ ಕೆಕೆಆರ್, ಪಂಜಾಬ್ ಕಿಂಗ್ಸ್ ಕೂಡಾ ಓರ್ವ ವಿದೇಶಿ ವೇಗಿಯ ಹುಡುಕಾಟದಲ್ಲಿದ್ದು, ಪತಿರಾಣಗೆ ಜಾಕ್ಪಾಟ್ ಹೊಡೆಯುವ ಸಾಧ್ಯತೆಯಿದೆ.
910
Image Credit : Getty
4. ರವಿ ಬಿಷ್ಣೋಯಿ
ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯುವ ಪ್ರಮುಖ ಲೆಗ್ಸ್ಪಿನ್ನರ್ ರವಿ ಬಿಷ್ಣೋಯಿ ಅವರನ್ನು ರಿಲೀಸ್ ಮಾಡಿದೆ. ದಿಗ್ವೇಶ್ ರಾಠಿಯಿಂದಾಗಿ ರವಿ ಬಿಷ್ಣೋಯಿ ಅವರನ್ನು ರಿಲೀಸ್ ಮಾಡುವ ದೊಡ್ಡ ತೀರ್ಮಾನ ಮಾಡಿದ ಲಖನೌ.
1010
Image Credit : ANI
ಬಿಷ್ಣೋಯಿ ಮೇಲೆ ಎಲ್ಲರ ಕಣ್ಣು
ರಾಜಸ್ಥಾನ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಓರ್ವ ಪ್ರಮುಖ ಸ್ಪಿನ್ನರ್ ಹುಡುಕಾಟದಲ್ಲಿದ್ದು, ಬಿಷ್ಣೋಯಿ ಒಳ್ಳೆಯ ಆಯ್ಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ರವಿ ಬಿಷ್ಣೋಯಿ ಕೂಡಾ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.