IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್ | Ipl 2026 Mini Auction Date Time Venue Player List Purse Details Revealed Kvn

IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್ | Ipl 2026 Mini Auction Date Time Venue Player List Purse Details Revealed Kvn


19

ಡಿಸೆಂಬರ್ 16ರಂದು ಅಬುದಾಬಿಯಲ್ಲಿ ಹರಾಜು

Image Credit : X

ಡಿಸೆಂಬರ್ 16ರಂದು ಅಬುದಾಬಿಯಲ್ಲಿ ಹರಾಜು

2026ರ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಯು ಇದೇ ಡಿಸೆಂಬರ್ 16ರಂದು ಯುಎಇನ ಅಬುಧಾಬಿಯಲ್ಲಿ ನಡೆಯಲಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಹರಾಜಿನಲ್ಲಿ ಇನ್ನುಳಿದ ಆಟಗಾರರನ್ನು ಖರೀದಿಸಲು ರಣತಂತ್ರ ಹೆಣೆದಿದೆ.

29

1390ರಲ್ಲಿ 350 ಆಟಗಾರರ ಹೆಸರು ಶಾರ್ಟ್‌ಲಿಸ್ಟ್

Image Credit : X/IPL

1390ರಲ್ಲಿ 350 ಆಟಗಾರರ ಹೆಸರು ಶಾರ್ಟ್‌ಲಿಸ್ಟ್

ಐಪಿಎಲ್ ಮಿನಿ ಹರಾಜಿಗೆ ಬರೋಬ್ಬರಿ 1390 ಆಟಗಾರರು ಆಟಗಾರರು ಹೆಸರು ರಿಜಿಸ್ಟರ್ ಮಾಡಿದ್ದರು. ಈ ಪೈಕಿ ಫ್ರಾಂಚೈಸಿಗಳ ಜತೆ ಚರ್ಚಿಸಿ ಒಟ್ಟು 350 ಆಟಗಾರರ ಹೆಸರನ್ನು ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡಿದೆ.

39

350 ಆಟಗಾರರ ಹೆಸರು ಅಂತಿಮ

Image Credit : X

350 ಆಟಗಾರರ ಹೆಸರು ಅಂತಿಮ

350 ಆಟಗಾರರ ಪೈಕಿ 240 ಭಾರತೀಯ ಆಟಗಾರರು ಹಾಗೂ 110 ವಿದೇಶಿ ಆಟಗಾರರು ಐಪಿಎಲ್ ಮಿನಿ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

49

224 ಅನ್‌ಕ್ಯಾಪ್ಡ್‌ ಆಟಗಾರರು ಸೇರ್ಪಡೆ

Image Credit : Google

224 ಅನ್‌ಕ್ಯಾಪ್ಡ್‌ ಆಟಗಾರರು ಸೇರ್ಪಡೆ

240 ಆಟಗಾರರ ಪೈಕಿ 224 ಅನ್‌ಕ್ಯಾಪ್ಡ್‌ ಭಾರತೀಯ ಆಟಗಾರರು ಹಾಗೂ 110 ವಿದೇಶಿ ಆಟಗಾರರಲ್ಲಿ 14 ಅನ್‌ಕ್ಯಾಪ್ಡ್‌ ಓವರ್‌ಸೀಸ್ ಆಟಗಾರರು ಇದ್ದಾರೆ.

59

ಕ್ವಿಂಟನ್ ಡಿ ಕಾಕ್ ಹೊಸದಾಗಿ ಸೇರ್ಪಡೆ

Image Credit : Getty

ಕ್ವಿಂಟನ್ ಡಿ ಕಾಕ್ ಹೊಸದಾಗಿ ಸೇರ್ಪಡೆ

ಇನ್ನು ಮಿನಿ ಹರಾಜಿನ ಶಾರ್ಟ್‌ಲಿಸ್ಟ್‌ಗೂ ಮುನ್ನ 35 ಹೊಸ ಆಟಗಾರರ ಹೆಸರು ಸೇರ್ಪಡೆಯಾಗಿದ್ದು, ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಅನುಭವಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಹೆಸರು ಸೇರ್ಪಡೆಯಾಗಿದೆ.

69

ಭಾರತೀಯ ಕಾಲಮಾನ ಮಧ್ಯಾಹ್ನ 2.30ರಿಂದ ಹರಾಜು ಆರಂಭ

Image Credit : BCCI

ಭಾರತೀಯ ಕಾಲಮಾನ ಮಧ್ಯಾಹ್ನ 2.30ರಿಂದ ಹರಾಜು ಆರಂಭ

ಐಪಿಎಲ್ ಮಿನಿ ಹರಾಜು ಡಿಸೆಂಬರ್ 16ರ ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ. ಮೊದಲ ಸುತ್ತಿನಲ್ಲೇ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

79

ಗರಿ‍ಷ್ಠ 77 ಆಟಗಾರರ ಖರೀದಿಸಲು ಅವಕಾಶ

Image Credit : X

ಗರಿ‍ಷ್ಠ 77 ಆಟಗಾರರ ಖರೀದಿಸಲು ಅವಕಾಶ

ಹರಾಜಿಗೆ ಶಾರ್ಟ್‌ಲಿಸ್ಟ್‌ ಆಗಿರುವ 350 ಆಟಗಾರರ ಪೈಕಿ ಎಲ್ಲಾ 10 ಫ್ರಾಂಚೈಸಿಗಳು 31 ವಿದೇಶಿ ಆಟಗಾರರು ಸೇರಿದಂತೆ ಗರಿಷ್ಠ 77 ಆಟಗಾರರನ್ನು ಖರೀದಿಸಲು ಅವಕಾಶವಿದೆ.

89

40 ಆಟಗಾರರ ಮೂಲ ಬೆಲೆ 2 ಕೋಟಿ ರುಪಾಯಿ ನಿಗದಿ

Image Credit : our own

40 ಆಟಗಾರರ ಮೂಲ ಬೆಲೆ 2 ಕೋಟಿ ರುಪಾಯಿ ನಿಗದಿ

40 ಆಟಗಾರರ ಮೂಲ ಬೆಲೆ 2 ಕೋಟಿ ರುಪಾಯಿ ನಿಗದಿಯಾಗಿದೆ. ಎರಡು ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಭಾರತೀಯ ಆಟಗಾರರ ಪೈಕಿ ವೆಂಕಟೇಶ್ ಅಯ್ಯರ್ ಹಾಗೂ ರವಿ ಬಿಷ್ಣೋಯಿ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

99

10 ಫ್ರಾಂಚೈಸಿಗಳ ಬಳಿ ಒಟ್ಟು 237.55 ಕೋಟಿ ರುಪಾಯಿ ಪರ್ಸ್

Image Credit : X/Mufaddal Vohra

10 ಫ್ರಾಂಚೈಸಿಗಳ ಬಳಿ ಒಟ್ಟು 237.55 ಕೋಟಿ ರುಪಾಯಿ ಪರ್ಸ್

10 ಫ್ರಾಂಚೈಸಿಗಳ ಬಳಿ ಒಟ್ಟು 237.55 ಕೋಟಿ ರುಪಾಯಿ ಪರ್ಸ್ ಇದ್ದು, ಈ ಪೈಕಿ ಮೂರು ಬಾರಿಯ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ಬಳಿ ಅತಿಹೆಚ್ಚು ₹64.30 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ ಬಳಿ ಎರಡನೇ ಅತಿಹೆಚ್ಚು 43.40 ಕೋಟಿ ರುಪಾಯಿ ಪರ್ಸ್ ಹೊಂದಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.



Source link

Leave a Reply

Your email address will not be published. Required fields are marked *