ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರಲ್ಲಿ ಆರಂಭ ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದೀಗ ಬಂದಿದೆ. ತಂಡದ ಪ್ರಮುಖ ವೇಗಿ, ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಮಿಚೆಲ್ ಸ್ಟಾರ್ಕ್ (ಮಿಚೆಲ್ ಸ್ಟಾರ್ಕ್) ಅವರು ಗಾಯದ ಸಮಸ್ಯೆಯಿಂದಾಗಿ ಕನಿಷ್ಠ ಮೂರು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ನಡೆದ 2025-26ರ ಆಶಸ್ ಸರಣಿಯ ವೇಳೆ ಸ್ಟಾರ್ಕ್ ಅವರ ಭುಜ ಮತ್ತು ಮೊಣಕೈಗೆ ತೀವ್ರ ಪೆಟ್ಟಾಗಿತ್ತು. ಈ ಅವರು ಪ್ರಸ್ತುತ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಸಂಪೂರ್ಣ ಗುಣಮುಖರಾಗದ ಹೊರತಾಗಿ ಅವರು ಮೈದಾನಕ್ಕಿಳಿಯುವುದು ಅನುಮಾನವಾಗಿರಬಹುದು.
ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂದಿನ ಮೂರು ಪಂದ್ಯಗಳಿಂದ ಅವರು ಹೊರಗುಳಿಯಲಿದ್ದಾರೆ. ಅದರಂತೆ ಏಪ್ರಿಲ್ 8 ರಂದು ನಡೆಯಲಿರುವ ಗುಜರಾತ್ ಟೈಟಾನ್ಸ್, ಏಪ್ರಿಲ್ 11 ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಏಪ್ರಿಲ್ 18 ರಂದು ನಡೆಯಲಿರುವ ಆರ್ಸಿಬಿ ವಿರುದ್ಧದ ಪಂದ್ಯಕ್ಕೆ ಮೈಕೆಲ್ ಸ್ಟಾರ್ಕ್ ಅಲಭ್ಯರಾಗಲಿದ್ದಾರೆ.
ಇನ್ನು ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಏಪ್ರಿಲ್ 21 ರಂದು ನಡೆಯಲಿರುವ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಂದರೆ ಮಿಚೆಲ್ ಸ್ಟಾರ್ಕ್ ಐಪಿಎಲ್ ನಲ್ಲಿ ಕಾಣಿಸಿಕೊಂಡಿರುವುದು ಸಹ ಖಚಿತವಾಗಿಲ್ಲ.
ಇತ್ತ ಸ್ಟಾರ್ಕ್ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿರುವ ಡೆಲ್ಲಿ ಒಟ್ಟು 4 ಅಂಕಗಳನ್ನು ಸಂಪಾದಿಸಿದೆ. ಸದ್ಯ ಮುಖೇಶ್ ಕುಮಾರ್, ಟಿ. ನಟರಾಜನ್ ಮತ್ತು ಲುಂಗಿ ಎನ್ಗಿಡಿ ಅವರು ವೇಗದ ಬೌಲಿಂಗ್ ವಿಭಾಗವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ, ಇವರೊಂದಿಗೆ ಸ್ಟಾರ್ಕ್ ಸೇರಿದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬೌಲಿಂಗ್ ಲೈನಪ್ ಮತ್ತಷ್ಟು ಬಲಿಷ್ಠವಾಗುವುದರಲ್ಲಿ ಅನುಮಾನವೇ ಇಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಅಕ್ಷರ್ ಪಟೇಲ್ (ನಾಯಕ), ನಿತೀಶ್ ರಾಣಾ, ಅಭಿಷೇಕ್ ಪೊರೆಲ್, ಅಜಯ್ ಮಂಡಲ್, ಅಶುತೋಷ್ ಶರ್ಮಾ, ದುಷ್ಮಂತ ಚಮೀರಾ, ಕರುಣ್ ನಾಯರ್, ಕೆಎಲ್ ರಾಹುಲ್, ಕುಲದೀಪ್ ಯಾದವ್, ಮಾಧವ್ ತಿವಾರಿ, ಮಿಚೆಲ್ ಸ್ಟಾರ್ಕ್, ಸಮೀರ್ ರಿಝ್ವಿ, ತ್ರಿಪುರ ನಟರಾಜ್, ಟಿಸ್ರಾಜ್, ಟಿಸ್ರಾಜ್, ನಿಗಮ್, ಡೇವಿಡ್ ಮಿಲ್ಲರ್, ಬೆನ್ ಡಕೆಟ್, ಆಖಿಬ್ ನಬಿ, ಪಾತುಮ್ ನಿಸ್ಸಾಂಕಾ, ಲುಂಗಿ ಎನ್ಗಿಡಿ, ಸಾಹಿಲ್ ಪರಾಖ್, ಪೃಥ್ವಿ ಶಾ, ಕೈಲ್ ಜೇಮಿಸನ್.





